Wednesday, May 14, 2025

Latest Posts

Falls : ಜಲಪಾತಗಳಿಗೆ  ಜೀವಕಳೆ : ಪೊಲೀಸರಿಂದ ಬಂದೋಬಸ್ತ್…!

- Advertisement -

Belagavi News : ನಿರಂತರ ಮಳೆಗೆ ಕರುನಾಡಿನ ಅನೇಕ ಜಲಪಾತಗಳಿಗೆ ಜೀವಕಳೆ ಬಂದಿದೆ. ಈ ಕಾರಣದಿಂದಲೇ ಅನೇಕ ಪ್ರವಾಸಿಗರು ಜಲಪಾತಗಳ ವೀಕ್ಷಣೆಗಾಗಿ ದಂಡಾಗಿ ಆಗಮಿಸುತ್ತಿದ್ದಾರೆ. ಗೋಕಾಕ್ ನಲ್ಲಿರೋ ಜಲಪಾತ ಕೂಡಾ ಇದೀಗ ನೋಡುಗರನ್ನು ತನ್ನತ್ತ ಸೆಳೆಯುತ್ತಿದೆ.

ಭಾರತದ ನಯಾಗರ ಜಲಪಾತ ಎಂದೇ ಖ್ಯಾತಿ ಪಡೆದಿರುವ ಗೋಕಾಕ್ ಜಲಪಾತ ಉಕ್ಕಿ ಹರಿಯುತ್ತಿದೆ. ಇನ್ನು ಜಲಧಾರೆಯನ್ನ ಕಣ್ತುಂಬಿಕೊಳ್ಳಲು ನೂರಾರು ಪ್ರವಾಸಿಗರು ಆಗಮಿಸುತ್ತಿದ್ದು ಪ್ರವಾಸಿಗರ ಸೆಲ್ಫಿ ಹುಚ್ಚಾಟ ಹೆಚ್ಚಾಗಿಯೇ ಕಾಣುತ್ತಿದೆ. ಈ ಕಾರಣದಿಂದ ಯಾವುದೇ ಅಪಾಯ ಸಂಭವಿಸಬಾರದೆಂದು  ಪೊಲೀಸರು ಎಚ್ಚರಿಕೆ ವಹಿಸಿ ಕಾವಲಾಗಿದ್ದಾರೆ. ಪೊಲೀಸ್ ಇಲಾಖೆ ಬಂದೋಬಸ್ತ್ ಕೈಗೊಂಡಿದೆ.

ಜಲಪಾತದ ಒಳಗೆ ಇಳಿಯದಂತೆ ಬ್ಯಾರಿಕೇಟ್ ಹಾಕಲಾಗಿದೆ. ಮತ್ತೊಂದೆಡೆ ನಿಷೇಧವಿದ್ದರೂ ಹೆಸ್ಕಾಂ ಸಿಬ್ಬಂದಿ, ವೈದ್ಯರ ತಂಡ ಫಾಲ್ಸ್ ಮುಂದೆ ಎಣ್ಣೆ ಪಾರ್ಟಿ ಮಾಡಿದ ಘಟನೆ ನಡೆದಿದೆ ಎಂಬ ವಿಚಾರ ಕೂಡಾ ಕೇಳಿಬರುತ್ತಿದೆ.

ಬಂಡೆಗಲ್ಲುಗಳನ್ನ ಸೀಳಿಕೊಂಡು ನುಗ್ಗುತ್ತಿರುವ ಘಟಪ್ರಭೆ, ಸುಮಾರು 180 ಅಡಿ ಮೇಲಿಂದ ಧುಮ್ಮಿಕ್ಕುತ್ತಿದೆ. ಮನೋಹರ ದೃಶ್ಯಗಳನ್ನು ಕಣ್ತುಂಬಿಕೊಳ್ಳಲು ಪ್ರವಾಸಿಗರ ದಂಡು ಹರಿದು ಬರುತ್ತಿದೆ. ಫಾಲ್ಸ್​ಗಳ ಬಳಿ ಹೆಚ್ಚು ಅಪಾಯ ಇರುವ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಬ್ಯಾರಿಕೇಟ್ ಹಾಕಿ ಕಣ್ಗಾವಲು ಇಟ್ಟಿದೆ.

- Advertisement -

Latest Posts

Don't Miss