Saturday, June 21, 2025

Latest Posts

ಬಡವರಿಗೆ ಭಾರವಾದ ಬಂಗಾರ

- Advertisement -

international news

ಜಾಗತೀಕ ಮಟ್ಟದಲ್ಲಿ ಉಂರೀತಿ ಚಿನ್ನದ ಬೆಲೆಯು ಸಹ ದಿನೇ ದಿನೇ ಏರಿಕೆ ಕಾಣುತ್ತಿದೆ.ಟಾಗುತ್ತಿರುವ ಆರ್ಥಿಕ ಬಿಕ್ಕಟ್ಟುನಿಂದ ಪ್ರತಿಯೊಂದರ ಬೆಲೆ ಏರಿಕೆ ಕಾಣುತ್ತಿದೆ .ಅದೇ

ಇನ್ನೇನಜು ಮದುವೆ ಸೀಸನ್ ಶುರುವಾಗಲಿದೆ ವದುವಿನ ಕಡೆಯವರು ವರನಿಗೆ ವರೋಪಚಾರವಾಗಿ ಹಣ ಆಭರಣ ವಾಹನ ಹೀಗೆ ವರನಿಗೆ ಕೊಡುವುದುಂಟು. ಬಡವರು ಗ್ರಾಂ ಲೆಕ್ಕದಲ್ಲಿ ಚಿನ್ನ ಕರೀದಿ ಮಾಡಿದರೆ

ಅನಿಶ್ಚಿತತೆಯ ಸಮಯದಲ್ಲಿ, ಚಿನ್ನವನ್ನು ಸುರಕ್ಷಿತ ಆಸ್ತಿಯಾಗಿ ನೋಡಲಾಗುತ್ತದೆ. ಹೀಗಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚು. ಅಮೆರಿಕ ಡಾಲರ್ ದುರ್ಬಲತೆ ಮತ್ತು ಅಮೆರಿಕ ಖಜಾನೆ ಇಳುವರಿಯಲ್ಲಿ ಇಳಿಕೆಯ ನಡುವೆ ಚಿನ್ನದ ಬೆಲೆಯಲ್ಲಿ ಜಿಗಿತ ಕಂಡುಬಂದಿದೆ.ಶ್ರೀಮಂತರು ಕೆಜಿಗಟ್ಟಲೆ ಚಿನ್ನ ಖರೀದಿ ಮಾಡುತ್ತಾರೆ ಆದರೆ ಆ ಮದುವೆ ದಿನಗಳು ಶುರುವಾಗುವ ಸಮಯದಲ್ಲಿ ಚಿನ್ನದ ಬೆಲೆಯಲ್ಲಿ ಏರಿಕೆ ಕಂಡರೆ ವರನಿಗೆ ಕೊಡಬೇಕಾಗಿರುವ ವರೋಪಚಾರ ಕೊಡುವುದಾದರೂ ಹೇಗೆ

ಜಾಗತಿಕ ಆರ್ಥಿಕತೆಯಲ್ಲಿನ ಮಂದಗತಿಗೆ ಸಂಬಂಧಿಸಿದ ಕಳವಳಗಳ ನಡುವೆಯೇ, ಸುರಕ್ಷಿತ ಆಸ್ತಿಯ ಚಿನ್ನದ ಮೇಲೆ ಹೂಡಿಕೆದಾರರ ಆಸಕ್ತಿ ಹೆಚ್ಚಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.ಚಿನ್ನದ ಮೇಲಿನ ಹೂಡಿಕೆ ಸುರಕ್ಷಿತ ಎಂದು ನಂಬಲಾಗಿದ್ದು. ಇದೇ ಕಾರಣಕ್ಕೆ ಹೂಡಿಕೆದಾರರ ಆಸಕ್ತಿ ಹೆಚ್ಚಿದೆ. ಇದರಿಂದಾಗಿ ಅದರ ಬೆಲೆಗಳು ಏರಿಕೆ ಕಾಣುತ್ತಿವೆ.
ಇನ್ನು ಐಸಿಐಸಿಐ ಡೈರೆಕ್ಟ್ ವರದಿಯಂತೆ , “ಎಂಸಿಎಕ್ಸ್‌ನಲ್ಲಿ ಚಿನ್ನದ ಬೆಲೆ ಧನಾತ್ಮಕ ಪಕ್ಷಪಾತದೊಂದಿಗೆ ವಹಿವಾಟು ನಡೆಸುವ ಸಾಧ್ಯತೆಯಿದೆ ಮತ್ತು ಮುಂಬರುವ ಸೆಷನ್‌ಗಳಲ್ಲಿ ಈ ದರ 57,200 ರೂ.ಗೆ ತಲುಪಬಹುದು ಎನ್ನಲಾಗಿದೆ. ಅಂತೆಯೇ ಮುಂಬರುವ ನೀತಿ ಸಭೆಯಲ್ಲಿ ಫೆಡ್ ರಿಸರ್ವ್ ಬಡ್ಡಿದರಗಳನ್ನು ಶೇಕಡಾ 0.25 ರಷ್ಟು ಹೆಚ್ಚಿಸಬಹುದು. ಡಿಸೆಂಬರ್‌ನಲ್ಲಿ, ಸೆಂಟ್ರಲ್ ಬ್ಯಾಂಕ್ ಆಫ್ ಅಮೇರಿಕಾ ಬಡ್ಡಿದರವನ್ನು ಶೇಕಡಾ 0.50 ರಷ್ಟು ಹೆಚ್ಚಿಸಿತ್ತು.  ಇದು ಇಳುವರಿ-ಅಲ್ಲದ ಆಸ್ತಿಯನ್ನು ಹಿಡಿದಿಟ್ಟುಕೊಳ್ಳುವ ಅವಕಾಶ ವೆಚ್ಚವನ್ನು ಕಡಿಮೆ ಮಾಡುತ್ತದೆ. ಹೀಗಾಗಿ ಈ ಬೆಳವಣಿಗೆ ಕೂಡ ಚಿನ್ನದ ದರ ಏರಿಕೆ ಮೇಲೆ ಪ್ರಭಾವ ಬೀರಿದೆ.

ಜೀವನದಲ್ಲಿ ಅಪ್ಪಿ ತಪ್ಪಿಯೂ ಈ 5 ತಪ್ಪುಗಳನ್ನು ಮಾಡಬೇಡಿ..

ಹೇಗಿದೆ ಗೊತ್ತಾ ಇಂದಿನ ಚಿನ್ನದ ಬೆಲೆ..?!

ಗಣಿತ ಶಾಸ್ತ್ರಜ್ಞ ಹಾಗೂ ಸೂಪರ್​ 30 ಆನಂದ್ ಕುಮಾರ್ ಗೆ ಪದ್ಮಶ್ರೀ ಪ್ರಶಸ್ತಿ

- Advertisement -

Latest Posts

Don't Miss