ಬೆಂಗಳೂರು: ಒಂದು ಹೆಣ್ಣು ಮನಸ್ಸು ಮಾಡಿದ್ರೆ ಏನ್ ಬೇಕಿದ್ರು ಮಾಡ್ತಾಳೆ. ಆದ್ರೆ ಈ ಸಾಧಾನೆಗೆ ಪೋಷಕರು ಸಾಥ್ ಕೊಟ್ಟರೆ ನೂರು ಆನೆಗಳ ಶಕ್ತಿಯೇ ಸಿಕ್ಕಂತಾಗುತ್ತೆ. ಸಧ್ಯ ನಾವು ಈಗಾ ಹೇಳಲು ಹೊರಡಿರುವ ಸ್ಟೋರಿ ಕೂಡ ಅಂತದ್ದೆ ಸ್ಟೋರಿ. ಏನು ಆ ಸ್ಟೋರಿ ಅಂತಿದಿರ ಆ ಕುರಿತ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ ನೋಡಿ.
ಮನೆತುಂಬ ಇರುವ ಟ್ರೋಫಿಗಳು, ಪುಟ್ಟ ಕೈಯಲ್ಲಿ ಹಿಡಿದಿರುವ ಅವಾರ್ಡ್ ಗಳು, ಪೋಷಕರ ಕಣ್ಣಲ್ಲಿ ಏನೋ ಸಂತೋಷ, ಹುಡುಗರನ್ನ ಮೀರಿಸುವಂತೆ ಕರಾಟೆ ಮಾಡುತ್ತಿರುವ 19 ರ ಹುಡುಗಿ ಇವೆಲ್ಲವೂ ಕಂಡುಬಂದಿದ್ದು, ನಗರದ ರಾಜಾಜಿನಗರದಲ್ಲಿ. ಹೌದು, ರಾಜಾಜಿನಗರದ ನಿವಾಸಿ ನಾರಾಯಣ್ ಹಾಗೂ ಗೀತ ದಂಪತಿಗಳ ಮಗಳು ಚೈತ್ರಶ್ರೀ ತನ್ನ ಚಿಕ್ಕವಯ್ಯಸ್ಸಿನಲ್ಲಿಯೇ ಮಹಾನ್ ಸಾಧಾನೆ ಮಾಡಿದ್ದಾರೆ.
ತಂದೆ ನಾರಾಯಣ್ ಅವರಿಗೆ ಮಗಳಿಗೆ ಕಾರಟೆ ಕಲಿಸಬೇಕು ಎನ್ನುವ ಆಸೆ ಇತ್ತಂತೆ. ಅದಕ್ಕೆ ಪೂರಕವಾಗಿ ಚೈತ್ರ ಸಹ ಕರಾಟೆಯನ್ನ ಕಲಿತಿದ್ದು, ಅಂತರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸುತ್ತಿದ್ದು, ಹಲವು ಅವಾರ್ಡ್ ಗಳು – ಪ್ರಶಸ್ತಿಗಳನ್ನೆ ಬಾಚಿಕೊಂಡಿದ್ದಾರೆ… ಈಗ ಆಲ್ ಇಂಡಿಯಾ ಯುನಿವರ್ಸಿಟಿ ಗೇಮ್ಸ್ ನಲ್ಲಿಯೂ ಭಾಗಿಯಾಗಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ…ತನ್ನ ಪೋಷಕರಿಗೆ ಬೆಂಗಾಲಾಗಿ ನಿತ್ಕೊಬೇಕು ಎನ್ನುವ ಕಾರಣಕ್ಕೆ ಚಿಕ್ಕವಯ್ಯಸ್ಸಿನಲ್ಲಿಯೇ ಕಾರಟೆ ಕಲಿತು ಅಂತರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಿ ಟ್ರೋಫಿ – ಮೆಡಲ್ ಬಾಚಿ ಕೊಂಡಿದ್ದಾರೆ ಈ ಚೈತ್ರಶ್ರೀ…..
ಕಳೆದ 2022 ರಲ್ಲಿ ಇಂಡೋನೇಷ್ಯಾದ ಜಕಾರ್ತದಲ್ಲಿ ನಡೆದ ವಿಶ್ವ ಕರಾಟೆ ಫೆಡರೇಶನ್ ಚಾಂಪಿಯನ್‌ಶಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ರು. ಅಲ್ಲದೇ ಪೋಲೆಂಡ್, ಸೆರ್ಬಿಯಾ, ಬಲ್ಗೇರಿಯಾ, ಹಂಗೇರಿ, ಮೊಲ್ಡೊವಾ ಮತ್ತು ಜೆಕ್ ಗಣರಾಜ್ಯದಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. ಇನ್ನು 2018ನೇ ಸಾಲಿನ ನಾಡಪ್ರಭು ಕೆಂಪೇಗೌಡ ರಾಜ್ಯ ಪ್ರಶಸ್ತಿ, ಕಿತ್ತೂರು ರಾಣಿ ಚೆನ್ನಮ್ಮ ರಾಜ್ಯ ಪ್ರಶಸ್ತಿ, ಸುವರ್ಣ ಕನ್ನಡಿಗ ಪ್ರಶಸ್ತಿ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಬಾಲಪ್ರತಿಭಾ ಪ್ರಶಸ್ತಿಯನ್ನೂ ಪಡೆದಿದ್ದು, ಮಹಿಳಾ ಸಾಧಾಕಿಯರ ಹಾದಿಯಲ್ಲಿ ಚೈತ್ರ ಮುನ್ನುಗ್ಗುತ್ತಿದ್ದು, ಇಂಜಿನಿಯರಿಂಗ್ ವಿಧ್ಯಾಭ್ಯಾಸ ಕೂಡ ಮಾಡ್ತಿದ್ದಾರೆ..