ದೀಪಾವಳಿ ಹಬ್ಬದ ಬೆನ್ನಲ್ಲೇ ಲಕ್ಷಾಂತರ ಕೇಂದ್ರ ಸರ್ಕಾರದ ನೌಕರರು ಹಾಗೂ ಪಿಂಚಣಿದಾರರಿಗೆ ಗುಡ್ ನ್ಯೂಸ್ ಸಿಕ್ಕಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ದೀಪಾವಳಿಗೆ ಮುನ್ನವೇ ಬಂಪರ್ ಉಡುಗೊರೆಯಾಗಿ 3% ತುಟ್ಟಿ ಭತ್ಯೆ (Dearness Allowance) ಹೆಚ್ಚಳಕ್ಕೆ ಅನುಮೋದನೆ ನೀಡಿದೆ. ನೌಕರರು ಮತ್ತು ಪಿಂಚಣಿದಾರರಿಗೆ ಸಂಬಳ ಹೆಚ್ಚಳವಾಗಲಿದೆ.
ಅಕ್ಟೋಬರ್ 1, 2025 ರಂದು ನಡೆದ ಕೇಂದ್ರ ಸಚಿವ ಸಂಪುಟದ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಯಿತು. ಮಾಹಿತಿ ಮತ್ತು ಪ್ರಸಾರ ಸಚಿವ ಅಶ್ವಿನಿ ವೈಷ್ಣವ್ ಈ ಬಗ್ಗೆ ಮಾಹಿತಿ ನೀಡಿದ್ದು, ಈ ಹೆಚ್ಚಳವು ಜುಲೈ 1, 2025ರಿಂದ ಪೂರ್ವಾನುಸಾರವಾಗಿ ಜಾರಿಗೆ ಬರುತ್ತದೆ ಎಂದು ತಿಳಿಸಿದ್ದಾರೆ.
ಈ 3% ಹೆಚ್ಚಳದಿಂದ ಡಿಎ 55%ರಿಂದ 58%ಕ್ಕೆ ಏರಿಕೆ ಆಗಲಿದೆ. ಸುಮಾರು 1.2 ಕೋಟಿ ಉದ್ಯೋಗಿಗಳು ಹಾಗೂ ಪಿಂಚಣಿದಾರರು ಲಾಭ ಪಡೆಯಲಿದ್ದಾರೆ. ಇದು ಒಟ್ಟು ₹10,084 ಕೋಟಿ ಆರ್ಥಿಕ ಪರಿಣಾಮ ಉಂಟುಮಾಡಲಿದೆ. ದೀಪಾವಳಿಯ ಹಬ್ಬದ ವೇಳೆಯಲ್ಲಿ ನೌಕರರಿಗೆ ಹೆಚ್ಚುವರಿ ಖರ್ಚು ಸಾಮರ್ಥ್ಯ ಒದಗಿಸಲು ಈ ಬಂಪರ್ ಉಡುಗೊರೆ ನೆರವಾಗಲಿದೆ.
ಉದಾಹರಣೆಗಾಗಿ, ₹18,000 ಮೂಲ ವೇತನ ಹೊಂದಿರುವ ನೌಕರರಿಗೆ ಈ ಹೆಚ್ಚಳದಿಂದ ತಿಂಗಳಿಗೆ ₹540 ಹೆಚ್ಚುವರಿ ಆದಾಯ ದೊರೆಯಲಿದೆ. ಈ ಪ್ರಮಾಣ ನೌಕರರ ವೇತನದ ಜತೆಗೆ ಜತೆಯಾಗಿರುವ ಹಣದುಬ್ಬರದ ಒತ್ತಡವನ್ನ ತಗ್ಗಿಸಲಿದೆ. ಕೇಂದ್ರ ಸಚಿವ ಸಂಪುಟವು 3% ಡಿಎ ಹೆಚ್ಚಳಕ್ಕೆ ಅನುಮೋದನೆ ನೀಡಿದೆ.
ಜುಲೈ 2025 ರಿಂದ 1.2 ಕೋಟಿ ನೌಕರರು ಮತ್ತು ಪಿಂಚಣಿದಾರರಿಗೆ ₹540 ರಿಂದ ₹10,440 ವರೆಗೆ ಹೆಚ್ಚುವರಿ ಆದಾಯ ಸಿಗಲಿದೆ. ಇದು ₹10,084 ಕೋಟಿ ಆರ್ಥಿಕ ಪರಿಣಾಮ ಬೀರಲಿದ್ದು, ಹಬ್ಬದ ಋತುವಿನಲ್ಲಿ ಖರ್ಚು ಸಾಮರ್ಥ್ಯವನ್ನು ಹೆಚ್ಚಿಸಲಿದೆ. 8ನೇ ವೇತನ ಆಯೋಗಕ್ಕೆ ತಯಾರಿ ನಡೆಯುತ್ತಿದ್ದು, 2027ರ ವೇಳೆಗೆ ಕನಿಷ್ಠ ವೇತನ ₹30,000ಕ್ಕೆ ಏರಬಹುದು. ಈ ಕ್ರಮಗಳು ಹಣದುಬ್ಬರದ ಒತ್ತಡವನ್ನು ಕಡಿಮೆ ಮಾಡಿ, ನೌಕರರ ಆರ್ಥಿಕ ಸ್ಥಿರತೆಗೆ ಬೆಂಬಲ ನೀಡಲಿವೆ.
ವರದಿ : ಲಾವಣ್ಯ ಅನಿಗೋಳ