Wednesday, September 24, 2025

Latest Posts

ಬೆಂಗಳೂರಿಗರಿಗೆ ಗುಡ್‌ನ್ಯೂಸ್ : 40 KMವರೆಗೂ BMTC ಬಸ್

- Advertisement -

ಸಿಲಿಕಾನ್ ಸಿಟಿ ಬೆಂಗಳೂರಿನ ಲಕ್ಷಾಂತರ ಜನರ ಜೀವನಾಡಿಯಾಗಿರುವ ಬಿಎಂಟಿಸಿ ಬಸ್‌ಗಳು ಇನ್ನು ಮುಂದೆ ಕೇವಲ ನಗರದೊಳಗೆ ಮಾತ್ರವಲ್ಲ, ಹೊರ ಜಿಲ್ಲೆಗಳಿಗೂ ಸಂಚರಿಸಲಿವೆ. ಈ ಮಹತ್ವದ ನಿರ್ಧಾರಕ್ಕೆ ಸರ್ಕಾರ ಅನುಮೋದನೆ ನೀಡಿದ್ದು, ಈ ಕುರಿತು ಯಾವುದೇ ಆಕ್ಷೇಪಣೆಗಳು ಇದ್ದಲ್ಲಿ ನಿಗಮಕ್ಕೆ ತಿಳಿಸಲು ಆಹ್ವಾನಿಸಲಾಗಿದೆ.

ಇದುವರೆಗೆ ಬಿಎಂಟಿಸಿ ಬಸ್‌ಗಳು ನಗರದಿಂದ ಗರಿಷ್ಠ 25 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಮಾತ್ರ ಸಂಚರಿಸುತ್ತಿದ್ದವು. ಆದರೆ ಈಗ ಅವುಗಳನ್ನು 40 ಕಿಲೋ ಮೀಟರ್ ವಿಸ್ತಾರದಲ್ಲಿ ಸಂಚರಿಸುವಂತೆ ನಿರ್ಧರಿಸಲಾಗಿದೆ. ಇದರಿಂದ ನಗರದ ಹೊರವಲಯ ಪ್ರದೇಶಗಳಿಗೂ ಬಸ್‌ ಸೇವೆ ಲಭ್ಯವಾಗಲಿದೆ. ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರ ಪ್ರಕಾರ, ರಾಮನಗರ, ಕನಕಪುರ, ಮಾಲೂರು, ಮಾಗಡಿ, ದಾಬಸ್ ಪೇಟೆ, ಸೋಲೂರು ಸೇರಿದಂತೆ ಹಲವು ಪ್ರದೇಶಗಳಿಗೆ ಬಿಎಂಟಿಸಿ ಬಸ್ ಸೇವೆಯನ್ನು ವಿಸ್ತರಿಸಲಾಗಿದೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಮೋಟಾರು ವಾಹನ ಕಾಯ್ದೆ 1939ರ ಕಲಂ 68(ಸಿ) ಅಡಿಯಲ್ಲಿ ಬಿಎಂಟಿಸಿ ಯೋಜನೆಯನ್ನು ಪ್ರಕಟಿಸಿದೆ. ಇದರಡಿ, 1961ರ ಜನವರಿ 16ರಂದು ಪ್ರಕಟವಾದ ಅಧಿಸೂಚನೆಯ ಮೂಲಕ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಿಂದ 12 ಮೈಲಿ (ಅಂದರೆ 20 ಕಿ.ಮೀ) ಒಳಗಿನ ಪ್ರದೇಶಗಳಿಗೆ ಮಾತ್ರ ಬಸ್ ಸಂಚಾರಕ್ಕೆ ಅನುಮತಿ ನೀಡಲಾಗಿತ್ತು.

ಆದರೆ, ಇದೀಗ ಬೆಂಗಳೂರು ಮಹಾನಗರವು ಭಾರೀ ಪ್ರಮಾಣದಲ್ಲಿ ವಿಸ್ತಾರಗೊಂಡಿದ್ದು, ಜನಸಂಖ್ಯೆಯೂ ಹೆಚ್ಚಾಗಿದೆ. ನಗರದ ಮಿತಿಗಳನ್ನು ದಾಟಿ ಉಪನಗರ ಪ್ರದೇಶಗಳಲ್ಲಿ ಹೊಸ ಪಟ್ಟಣಗಳು ಬೆಳೆಯುತ್ತಿವೆ. ಅಲ್ಲಿ ವಾಸಿಸುವ ಜನರು ಉದ್ಯೋಗ, ವ್ಯವಹಾರ ಮತ್ತು ದೈನಂದಿನ ಅಗತ್ಯಗಳಿಗಾಗಿ ನಗರಕ್ಕೆ ಸಂಚರಿಸಬೇಕಾಗುತ್ತದೆ. ಈ ಕಾರಣದಿಂದಲೇ ಬಿಎಂಟಿಸಿ ಬಸ್ ಸೇವೆಯನ್ನು ಹೊರವಲಯ ಪ್ರದೇಶಗಳಿಗೂ ವಿಸ್ತರಿಸುವುದು ಅಗತ್ಯವೆಂದು ಸರ್ಕಾರ ಈ ನಿರ್ಧಾರ ಪ್ರಕಟಿಸಿದೆ.

ವರದಿ:ರಂಜಿತ ರೇವಣ್ಣ ನಾಟನಹಳ್ಳಿ

- Advertisement -

Latest Posts

Don't Miss