www.karnatakatv.net : ಪಿಯುಸಿ ತತ್ಸಮಾನ ಶೈಕ್ಷಣಿಕ ಅರ್ಹತೆ ಮೇಲೆ ಅಧಿಸೂಚನೆ ಹೊರಡಿಸಿರುವ ಯಾವುದೇ ಉದ್ಯೋಗಕ್ಕೂ ಡಿಪ್ಲೋಮಾ ಪದವೀಧರರು ಅರ್ಜಿಯನ್ನು ಸಲ್ಲಿಸಬಹುದು.
ಹೌದು.. ಡಿಪ್ಲೋಮಾ ಪದವಿ ಕುರಿತ ಗೊಂದಲಕ್ಕೆ ಸರ್ಕಾರ ತೆರೆ ಎಳೆದಿದೆ. 3 ವರ್ಷದ ಡಿಪ್ಲೋಮಾ ಪದವಿ ಪಿಯುಸಿ ವಿದ್ಯಾರ್ಹತೆಗೆ ಸಮ ಎಂದು ರಾಜ್ಯ ಸರ್ಕಾರ ಮಹತ್ವದ ಆದೇಶವನ್ನು ಹೊರಡಿಸಿದೆ. ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಬಹು ಬೇಡಿಕೆಗೆ ನೂತನ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ತಾರ್ಕಿಕ ಅಂತ್ಯ ಕಾಣಿಸುವಲ್ಲಿ ಯಶಸ್ವಿಯಾಗಿದ್ದಾರೆ.
ತಾಂತ್ರಿಕ ಶಿಕ್ಷಣ ಇಲಾಖೆಯ ಮೂರು ವರ್ಷದ ಡಿಪ್ಲೋಮಾವನ್ನು ಕೂಡ ಪಿಯುಸಿ ತತ್ಸಮಾನ ಎಂದು ಪರಿಗಣಿಸಬೇಕು. 2015 ಕ್ಕಿಂತೂ ಹಿಂದೆ ಮೂರು ವರ್ಷದ ಡಿಪ್ಲೋಮ ಪಡೆದವರು ಪಿಯುಸಿ ವಿದ್ಯಾರ್ಹತೆ ಮೇಲೆ ಸರ್ಕಾರಿ ಉದ್ಯೋಗಕ್ಕೆ ನೇಮಕವಾದರೆ ಕಡ್ಡಾಯವಾಗಿ ಕರ್ನಾಟಕ ಲೋಕ ಸೇವಾ ಅಯೋಗ ನಡೆಸುವ ಕನ್ನಡ ಪರೀಕ್ಷೆಯಲ್ಲಿ ಉತ್ತೀರ್ಣ ರಾಗಬೇಕು ಎಂದು ಸೂಚಿಸಿತ್ತು.