ನವದೆಹಲಿ: ದೇಶದ ರೈತರನ್ನು ಮತ್ತಷ್ಟು ಆರ್ಥಿಕವಾಗಿ ಸಭಲಗೊಳಿಸೋ ನಿಟ್ಟಿನಲ್ಲಿ ಜಾರಿಗೊಳಿಸಿದಂತ ಯೋಜನೆಯೇ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ( Pradhan Mantri Kisan Samman Yojana – PM KISAN). ಈ ಯೋಜನೆಯ 10ನೇ ಕಂತು ಈಗಾಗಲೇ ಬಿಡುಗಡೆಯಾಗಿದ್ದು, ಇನ್ನೇನು ಶೀಘ್ರವೇ 11ನೇ ಕಂತು ಕೂಡ ರಿಲೀಸ್ ಆಗಲಿದೆ.
ಹೌದು.. ಕೇಂದ್ರ ಸರ್ಕಾರದಿಂದ ಪಿಎಂ ಕಿಸಾನ್ ಸಮ್ಮಾನ್ ನಿಧಿಯ ಹನ್ನೊಂದನೇ ಕಂತನ್ನು ಮುಂದಿನ ವಾರದಲ್ಲಿ ಬಿಡುಗಡೆ ಮಾಡಲೋ ನಿರೀಕ್ಷೆಯಿದೆ. ಈ ಮೂಲಕ ಫಲಾನುಭವಿ ರೈತರ ಖಾತೆಗಳಿಗೆ 11ನೇ ಕಂತಿನ ಹಣವಾದಂತ ರೂ.2,000 ಜಮೆ ಆಗಲಿದೆ ಎನ್ನಲಾಗಿದೆ.




