ಕರ್ನಾಟಕದ ಲಕ್ಷಾಂತರ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಮತ್ತೊಂದು ಹಂತದ ಹಣ ಬಿಡುಗಡೆಗೆ ಸರ್ಕಾರ ತಯಾರಿ ನಡೆಸಿದೆ. ಗೌರಿ ಗಣೇಶ ಹಬ್ಬದ ಅಂಗವಾಗಿ ಇನ್ನೊಂದು ಕಂತಿನ ಸಹಾಯಧನ ಬಿಡುಗಡೆ ಮಾಡಲು ಕ್ರಮ ಜರುಗಿಸಲಾಗಿದೆ.
2023ರ ಆಗಸ್ಟ್‌ನಲ್ಲಿ ಆರಂಭವಾದ ಗೃಹಲಕ್ಷ್ಮಿ ಯೋಜನೆ, ರಾಜ್ಯ ಸರ್ಕಾರದ 5 ಪ್ರಮುಖ ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿದ್ದು, ಪ್ರತಿ ಅರ್ಹ ಫಲಾನುಭವಿ ಮಹಿಳೆಗೆ ತಿಂಗಳಿಗೆ ₹2000 ಹಣ ನೀಡಲಾಗುತ್ತಿದೆ. ಈವರೆಗೆ ಸರಾಸರಿ 20 ತಿಂಗಳ ಕಾಲ 40,000 ರೂ. ಸಹಾಯಧನವನ್ನು ಫಲಾನುಭವಿಗಳಿಗೆ ನೀಡಲಾಗಿದೆ.
ಈಗಾ ಸರ್ಕಾರ ಜೂನ್ ತಿಂಗಳ ₹2000 ಮೊತ್ತದ 23ನೇ ಕಂತಿನ ಹಣವನ್ನು ಗೌರಿ ಗಣೇಶ ಹಬ್ಬದ ಅಂಗವಾಗಿ ಬಿಡುಗಡೆ ಮಾಡುವ ನಿರ್ಧಾರಕ್ಕೆ ಬಂದಿದೆ. ಈಗಾಗಲೇ ಈ ಹಣವನ್ನು ರಾಜ್ಯ ಖಜಾನೆಯಿಂದ ವಿವಿಧ ಜಿಲ್ಲಾ ಖಜಾನೆಗಳಿಗೆ ಜಮೆ ಮಾಡಲಾಗಿದ್ದು, ಈ ವಾರದೊಳಗಾಗಿ ಫಲಾನುಭವಿಗಳ ಖಾತೆಗೆ ನೇರವಾಗಿ ಜಮೆಯಾಗಲಿದೆ ಎಂದು ಇಲಾಖಾ ಮೂಲಗಳು ದೃಢಪಡಿಸಿವೆ.
ಜೂನ್ ತಿಂಗಳ ಕಂತಿನ ಹಣವನ್ನು ಬಿಡುಗಡೆ ಮಾಡಲು ಸರ್ಕಾರ ಮುಂದಾಗಿದ್ದು, ವರ ಮಹಾಲಕ್ಷ್ಮೀ ಹಬ್ಬದಂದು ಒಂದನೇ ಕಂತಿನ ಹಣವನ್ನು ಬಿಡುಗಡೆ ಮಾಡಲಾಗಿತ್ತು. ಈಗ ಗೌರಿ ಗಣೇಶ ಹಬ್ಬಕ್ಕೆ ಮತ್ತೊಂದು ಕಂತಿನ ಹಣ ಬಿಡುಗಡೆ ಮಾಡಲು ಸರ್ಕಾರ ಸಿದ್ಧವಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ತಿಳಿಸಿದ್ದಾರೆ.