ಚಿನ್ನ ಅಂದ್ರೆ ಯಾರಿಗೆ ಇಷ್ಟವಿಲ್ಲ ಹೇಳಿ. ಅದರಲ್ಲೂ ಹೆಣ್ಣುಮಕ್ಕಳಿಗಂತೂ ಚಿನ್ನದ ಮೇಲಿರುವ ಪ್ರೀತಿ ಅಳತೆಯೇ ಇಲ್ಲ. ಇಷ್ಟು ದಿನ ಗಗನಕ್ಕೇರಿದ್ದ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಅಕ್ಟೋಬರ್ 3ರಂದು ಅಪರೂಪಕ್ಕೆ ಇಳಿಕೆಯ ಮುಖ ಕಂಡಿವೆ. ಅಪರಂಜಿ ಚಿನ್ನದ ಬೆಲೆ ಪ್ರತಿ ಗ್ರಾಮಿಗೆ 65 ರೂಪಾಯಿ ಇಳಿಕೆಯಾಗಿದೆ. ಅಕ್ಟೋಬರ್ 2ರಂದೂ ಚಿನ್ನದ ಬೆಲೆ ಸ್ವಲ್ಪ ತಗ್ಗಿತ್ತು. ಬೆಳ್ಳಿ ಬೆಲೆ ಪ್ರತಿ ಗ್ರಾಮಿಗೆ 2 ರೂಪಾಯಿ ಇಳಿಕೆಯಾಗಿದೆ.
ವಿದೇಶಿ ಮಾರುಕಟ್ಟೆಯಲ್ಲಿಯೂ ಶುಕ್ರವಾರ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಕುಸಿತ ದಾಖಲಾಗಿದೆ. ಭಾರತದಲ್ಲಿ ಸದ್ಯ 10 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ 1,08,200 ರೂಪಾಯಿ ಇದೆ. 24 ಕ್ಯಾರಟ್ ಅಪರಂಜಿ ಚಿನ್ನದ ಬೆಲೆ 1,18,040 ರೂಪಾಯಿ ಆಗಿದೆ. 100 ಗ್ರಾಂ ಬೆಳ್ಳಿಯ ಬೆಲೆ 15,100 ರೂಪಾಯಿಗೆ ತಲುಪಿದೆ. ಬೆಂಗಳೂರಿನ ಮಾರುಕಟ್ಟೆಯಲ್ಲಿಯೂ ಇದೇ ದರಗಳು ಅನ್ವಯವಾಗುತ್ತಿವೆ. ತಮಿಳುನಾಡು ಮತ್ತು ಕೇರಳದ ಕೆಲವು ಭಾಗಗಳಲ್ಲಿ ಬೆಳ್ಳಿ ಬೆಲೆ 100 ಗ್ರಾಂಗೆ 16,100 ರೂಪಾಯಿಯಷ್ಟಿದೆ.
ಒಂದು ಗ್ರಾಂ ಚಿನ್ನದ ಬೆಲೆ ಕೂಡ ಗಮನಾರ್ಹ ಇಳಿಕೆಯನ್ನು ಕಂಡಿದೆ. 24 ಕ್ಯಾರಟ್ ಚಿನ್ನದ ಬೆಲೆ 11,804 ರೂ, 22 ಕ್ಯಾರಟ್ ಚಿನ್ನದ ಬೆಲೆ 10,820 ರೂ ಮತ್ತು 18 ಕ್ಯಾರಟ್ ಚಿನ್ನದ ಬೆಲೆ 8,853 ರೂ ಆಗಿದೆ. ಬೆಳ್ಳಿ ಬೆಲೆ ಪ್ರತಿ ಗ್ರಾಂಗೆ 151 ರೂಪಾಯಿಯಷ್ಟಿದೆ. ಬೆಂಗಳೂರಿನ ಮಾರುಕಟ್ಟೆಯಲ್ಲಿಯೂ ಇದೇ ದರಗಳು ಅನ್ವಯವಾಗುತ್ತಿದ್ದು, ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಕಂಡ ಈ ಇಳಿಕೆ ಗ್ರಾಹಕರಲ್ಲಿ ಸ್ವಲ್ಪದಾದರೂ ಸಂತೋಷ ಮೂಡಿಸಿದೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ