ಕೇಂದ್ರ ಸರ್ಕಾರ ಚೀನಾ ಮೂಲದ ಪಬ್ ಜಿ ಗೇಮಿಂಗ್ ಬ್ಯಾನ್ ಮಾಡಿರೋದು ಪಬ್ ಜಿ ಬಳಕೆದಾರರಿಗೆ ಭಾರೀ ನೋವುಂಟು ಮಾಡಿದೆ, ಸಾಕಷ್ಟು ಫಾಲೋವರ್ಸ್ ಹೊಂದಿದ್ದ ಪಬ್ ಜಿ ಆಪ್ ಬ್ಯಾನ್ನಿಂದಾಗಿ ಅನೇಕರು ಕೈ ಹಿಸುಕಿಕೊಳ್ಳುವಂತಾಗಿತ್ತು. ಆದ್ರೀಗ ಬಾಲಿವುಡ್ ಕಿಲಾಡಿ ಅಕ್ಷಯ್ ಕುಮಾರ್ ಪಬ್ ಜಿ ಆಪ್ಗೆ ಸೆಡ್ಡು ಹೊಡೆದಿದ್ದಾರೆ.
ಬೆಂಗಳೂರು ಮೂಲದ ಎನ್ಕೋರ್ ಕಂಪನಿ ಫೌಜಿ ಎಂಬ ಗೇಮಿಂಗ್ ಆಪ್ನ್ನ ಅಭಿವೃದ್ಧಿ ಮಾಡಿದೆ. ಈ ಗೇಮಿಂಗ್ ಆಪ್ಗೆ ಬಾಲಿವುಡ್ ನಟ ಅಕ್ಷಯ್ ಕುಮಾರ್ ಹೂಡಿಕೆ ಮಾಡಿದ್ದು ಮಾತ್ರವಲ್ಲದೇ ರಾಯಭಾರಿ ಕೂಡ ಆಗಿದ್ದಾರೆ.
FAU-G ಫಿಯರ್ಲೆಸ್ ಆಂಡ್ ಯುನೈಟೆಡ್: ಗಾರ್ಡ್ಸ್ ಎಂಬ ಹೆಸರಿನ ಈ ಗೇಮಿಂಗ್ ಆಪ್ ಯುದ್ಧದ ಸನ್ನಿವೇಶವನ್ನ ಹೊಂದಿರೋ ಗೇಮ್ ಆಗಿದೆ.ಈ ಅಕ್ಟೋಬರ್ ಅಂತ್ಯದೊಳಗೆ ಈ ಆಪ್ ಲಾಂಚ್ ಆಗಲಿದೆ ಅಂತಾ ಕಂಪನಿ ಮಾಹಿತಿ ನೀಡಿದೆ.
ಇನ್ನು ಫೌಜಿ ಆಪ್ ಸಂಬಂಧ ಟ್ವೀಟ್ ಮಾಡಿರೋ ಈ ಅಕ್ಷಯ್, ಈ ಗೇಮ್ ಮೂಲಕ ಜನರು ಭಾರತೀಯ ಸೇನೆಯ ಮಹತ್ವವನ್ನ ತಿಳಿಯಲಿದ್ದಾರೆ ಈ ಆಪ್ನಿಂದ ಬರುವ ಆದಾಯದಲ್ಲಿ 20 ಪ್ರತಿಶತವನ್ನ ಭಾರತ್ ವೀರ್ ಟ್ರಸ್ಟ್ಗೆ ನೀಡಲಿದ್ದೇವೆ ಅಂತಾ ಬರೆದುಕೊಂಡಿದ್ದಾರೆ.