ಪಡಿತರ ಚೀಟಿದಾರರಿಗೆ ಆಹಾರ ಇಲಾಖೆ ಸಿಹಿ ಸುದ್ದಿ ನೀಡಿದೆ. ರಾಜ್ಯದ ಎಲ್ಲಾ ಪಡಿತರ ಕಾರ್ಡ್‌ಗಳಲ್ಲಿ ಹೆಸರು ಸೇರ್ಪಡೆ, ಹೆಸರು ತಿದ್ದುಪಡಿ, ವಿಳಾಸ ಬದಲಾವಣೆ, ಹೊಸ ಸದಸ್ಯರ ಸೇರಿಕೆ, ಹೆಸರು ಅಳಿಸುವಿಕೆ ಸೇರಿದಂತೆ ಎಲ್ಲ ನವೀಕರಣಗಳಿಗೂ ಮತ್ತೆ ಅವಕಾಶ ನೀಡಲಾಗಿದೆ. ಇದಕ್ಕಾಗಿ ನಾಗರಿಕರು ಬೆಂಗಳೂರಿನ ಒನ್ ಕೇಂದ್ರಗಳು, ಸೈಬರ್ ಸೆಂಟರ್‌ಗಳು ಅಥವಾ ಆಹಾರ ಇಲಾಖೆಯ ಅಧಿಕೃತ ವೆಬ್‌ಸೈಟ್ ahara.kar.nic.in ಮೂಲಕ ನೇರವಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.
ಎಪಿಎಲ್ ಪಡಿತರ ಚೀಟಿ ಪಡೆಯುವವರಿಗೂ ಇದೇ ರೀತಿಯಲ್ಲಿ ಆನ್‌ಲೈನ್ ಮೂಲಕವೇ ಅರ್ಜಿ ಸಲ್ಲಿಸುವಂತೆ ಸೂಚಿಸಲಾಗಿದೆ. ಈಗಾಗಲೇ ಪಡಿತರ ಚೀಟಿ ಹೊಂದಿರುವವರು ಹೊಸದಾಗಿ ಮಗುವಿನ ಹೆಸರು ಅಥವಾ ಕುಟುಂಬದ ಇತರ ಸದಸ್ಯರನ್ನು ಸೇರಿಸಲು ಮತ್ತೆ ಅವಕಾಶ ಪಡೆದಿದ್ದಾರೆ.
ಸದಸ್ಯರನ್ನು ಸೇರಿಸಲು ಅಥವಾ ತಿದ್ದುಪಡಿಗೆ ಕೆಲವು ದಾಖಲೆಗಳು ಕಡ್ಡಾಯವಾಗಿವೆ. 6 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಆಧಾರ್ ಕಾರ್ಡ್ ಹಾಗೂ ಜಾತಿ–ಆದಾಯ ಪ್ರಮಾಣಪತ್ರ ಅಗತ್ಯ. 6 ವರ್ಷದ ಒಳಗಿನ ಮಕ್ಕಳಿಗೆ ಜನನ ಪ್ರಮಾಣಪತ್ರ ಮತ್ತು ಪೋಷಕರ ಆಧಾರ್ ಕಡ್ಡಾಯ. ಪತ್ನಿಯ ಹೆಸರನ್ನು ಸೇರ್ಪಡೆ ಮಾಡಲು ಮದುವೆ ಪ್ರಮಾಣಪತ್ರ ಜೊತೆಗೆ ಪತಿ–ಪತ್ನಿಯ ಆಧಾರ್ ಹಾಗೂ ಪತಿಯ ಪಡಿತರ ಚೀಟಿ ಪ್ರತಿಗಳನ್ನು ಸಲ್ಲಿಸಬೇಕು. ಹೊಸ ಸದಸ್ಯರ ಸೇರ್ಪಡೆ, ಹೆಸರು ಅಳಿಸುವುದು, ಫೋಟೋ ಬದಲಾವಣೆ, ಮುಖ್ಯಸ್ಥರ ಬದಲಾವಣೆ ಹಾಗೂ ಅಂಗಡಿ ಸಂಖ್ಯೆಯ ಬದಲಾವಣೆ ಎಲ್ಲಾ ಈಗ ಲಭ್ಯವಿರುವ ಸೇವೆಗಳಲ್ಲಿವೆ.
ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ ಸರಳವಾಗಿದೆ. ಅಧಿಕೃತ ವೆಬ್‌ಸೈಟ್ ತೆರೆಯುವ ನಂತರ e-Services ಕ್ಲಿಕ್ ಮಾಡಬೇಕು. ಬಳಿಕ ‘ತಿದ್ದುಪಡಿ/ಹೊಸ ಸೇರ್ಪಡೆ ವಿನಂತಿ’ ಆಯ್ಕೆ ಮಾಡಿ, ತೆರೆಯುವ ಫಾರ್ಮ್‌ನಲ್ಲಿ ಅಗತ್ಯ ವಿವರಗಳನ್ನು ಭರ್ತಿ ಮಾಡಬೇಕು. ಬೇಕಾದ ದಾಖಲೆಗಳ ಸ್ಕ್ಯಾನ್ ಪ್ರತಿಗಳನ್ನು ಅಪ್ಲೋಡ್ ಮಾಡಿ ಫಾರ್ಮ್ ಸಬ್ಮಿಟ್ ಮಾಡಿದರೆ, ನಿಮಗೆ ಒಬ್ಬರಿಗೆ ACKNOWLEDGEMENT NUMBER ಲಭ್ಯವಾಗುತ್ತದೆ. ಇದು ಮೂಲಕ ಅರ್ಜಿಯ ಮುಂದಿನ ಸ್ಥಿತಿಯನ್ನು ಟ್ರ್ಯಾಕ್ ಮಾಡಬಹುದು. ಪರಿಶೀಲನೆಯ ನಂತರ ದಾಖಲೆಗಳು ಸರಿಯಾಗಿದ್ದರೆ, ಹೊಸ ಸದಸ್ಯರ ಹೆಸರು ಪಡಿತರ ಚೀಟಿಗೆ ಸೇರಿಸಲಾಗುತ್ತದೆ.
ಇದೇ ಪ್ರಕ್ರಿಯೆ ಆಫ್‌ಲೈನ್ ಮೂಲಕ ಬೇಕಾದವರು ಹತ್ತಿರದ ಪಡಿತರ ಅಂಗಡಿಗೆ ಅಥವಾ ಬೆಂಗಳೂರು ಒನ್ ಕೇಂದ್ರಕ್ಕೆ ತೆರಳಿ ಮೂಲ ಪಡಿತರ ಚೀಟಿ, ಆಧಾರ್ ಹಾಗೂ ಜನನ ಪ್ರಮಾಣಪತ್ರಗಳಿಂದ ನವೀಕರಿಸಿಕೊಳ್ಳಬಹುದು. ಎಲ್ಲಾ ವಿವರಗಳು ಸರಿಯಾಗಿದ್ದರೆ, ನವೀಕರಿಸಿದ ಪಡಿತರ ಚೀಟಿಯನ್ನು ಮನೆಗೆ ತಲುಪಿಸಲಾಗುತ್ತದೆ ಅಥವಾ ಹತ್ತಿರದ ಪಡಿತರ ಅಂಗಡಿಯಲ್ಲಿ ಅಪ್ಡೇಟ್ ಮಾಡಿಸಿಕೊಳ್ಳಬಹುದು.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ



