Tuesday, April 15, 2025

Latest Posts

ಶಾಪಿಂಗ್ ಪ್ರಿಯರಿಗೆ ಸಿಹಿಸುದ್ದಿ, ನಾಳೆಯಿಂದ ಮಾಲ್‌ಗಳು ಓಪೆನ್: ಕಂಡೀಷನ್ಸ್ ಅಪ್ಲೈ

- Advertisement -

ಕೊರೊನಾ ಭೀತಿಯಿಂದ ಇಡೀ ಭಾರತವೇ ಲಾಕ್‌ಡೌನ್ ಆಗಿದ್ದು, ಇಲ್ಲಿಯ ತನಕ ಮುಚ್ಚಲಾಗಿದ್ದ ದೇವಸ್ಥಾನ ಮತ್ತು ಹೊಟೇಲ್‌ಗಳು ನಾಳೆಯಿಂದ ಓಪೆನ್ ಆಗುತ್ತಿದೆ. ಇದರೊಂದಿಗೆ ಶಾಪಿಂಗ್ ಪ್ರಿಯರಿಗೆ ಗುಡ್‌ನ್ಯೂಸ್ ಸಿಕ್ಕಿದ್ದು, ಮಾಲ್‌ಗಳು ಕೂಡ ಓಪೆನ್ ಆಗುತ್ತಿದೆ. ಆದರೆ ಇದರ ಜೊತೆಗೆ ಕಂಡೀಷನ್ಸ್ ಅಪ್ಲೈ ಆಗಲಿದೆ.

ಬೆಂಗಳೂರಿನ ಹಲವು ಮಾಲ್‌ಗಳು ಓಪೆನ್ ಆಗುತ್ತಿದ್ದು, ಎಲ್ಲ ರೀತಿಯ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಗರುಡಾ ಮಾಲ್, ಮಂತ್ರಿ ಮಾಲ್, ಓರಾಯನ್ ಮಾಲ್, ಗೋಪಾಲನ್ ಮಾಲ್ ಎಲ್ಲ ಮಾಲ್‌ಗಳಲ್ಲೂ ಸೆಕ್ಯೂರಿಟಿ ಟೈಟ್ ಮಾಡಲಾಗಿದೆ.

ಇನ್ನು ಮಾಲ್ ಓಪೆನ್ ಆದ್ರೂ ಕೂಡ ಹಲವು ಷರತ್ತುಗಳು ಅನ್ವಯವಾಗಲಿದೆ.
1.. ಮಾಲ್‌ಗಳಿಗೆ ಹೋಗುವಾಗ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು.

2.. ಮಾಲ್‌ಗೆ ಬಂದ ಗ್ರಾಹಕರಿಗೆ ಥರ್ಮಲ್ ಸ್ಕ್ರೀನಿಂಗ್ ಮಾಡುವುದು ಮತ್ತು ಸ್ಯಾನಿಟೈಸರ್ ನೀಡುವುದು ಕಡ್ಡಾಯವಾಗಿದೆ.

3.. ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಹಾಕಿರುವ ಮಾರ್ಕ್‌ನಲ್ಲೇ ನಿಲ್ಲಬೇಕು.

4.. ಲಿಫ್ಟ್‌ನಲ್ಲಿ, ಎಸ್ಕಲೇಟರ್‌ನಲ್ಲಿ ಹೋಗುವಾಗ ಅಂತರ ಕಾಯ್ದುಕೊಳ್ಳಬೇಕು.

5.. ಕ್ಯಾಶ್ ಬದಲು ಆನ್‌ಲೈನ್ ಟ್ರಾನ್ಸಾಕ್ಷನ್‌ಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ.

6.. ಒಮ್ಮೆಲೆ ಮಾಲ್‌ನಲ್ಲಿ ಹೆಚ್ಚು ಜನ ಸೇರುವಂತಿಲ್ಲ.

7.. ಪ್ರವೇಶಕ್ಕೆ ಮತ್ತು ನಿರ್ಗಮನಕ್ಕೆ ಪ್ರತ್ಯೇಕ ಜಾಗ ಕಲ್ಪಿಸಬೇಕು.

https://youtu.be/heeTOl08S0Q

8.. ರೆಸ್ಟೋರೆಂಟ್‌ನಲ್ಲಿ ಶೇ.50%ಕ್ಕಿಂತ ಹೆಚ್ಚು ಜನ ಸೇರುವಂತಿಲ್ಲ.

9.. ವೃದ್ಧರಿಗೆ, ಮಕ್ಕಳಿಗೆ ಮಾಲ್ ಪ್ರವೇಶಕ್ಕೆ ಅನುಮತಿ ಇರುವುದಿಲ್ಲ.

10.. ಮಾಲ್‌ನಲ್ಲಿರುವ ಮಕ್ಕಳ ಆಟದ ಜಾಗದಲ್ಲಿ ಮತ್ತು ಮಲ್ಟಿಪ್ಲೆಕ್ಸ್‌ಗಳಲ್ಲಿ ಯಾರಿಗೂ ಪ್ರವೇಶವಿರುವುದಿಲ್ಲ.

- Advertisement -

Latest Posts

Don't Miss