ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: KSRTC, ಬಿಎಂಟಿಸಿಯಲ್ಲಿ ಹಿಂದಿನ ವರ್ಷದ ಬಸ್ ಪಾಸ್ ತೋರಿಸಿ ಸಂಚರಿಸಲು ಅವಕಾಶ

ಬೆಂಗಳೂರು: ಮೇ.16, 2022ರಿಂದ ರಾಜ್ಯಾಧ್ಯಂತ ಶಾಲಾ-ಕಾಲೇಜುಗಳು ಆರಂಭಗೊಳ್ಳುತ್ತಿವೆ. ಈ ವೇಳೆ ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗೆ ಅವಕಾಶ ಕಲ್ಪಿಸೋ ನಿಟ್ಟಿನಲ್ಲಿ ಬಿಎಂಟಿಸಿ, ಕೆ ಎಸ್ ಆರ್ ಟಿ ಸಿ ಮಹತ್ವದ ಕ್ರಮ ಕೈಗೊಂಡಿದೆ. ವಿದ್ಯಾರ್ಥಿಗಳು ಈ ಹಿಂದಿನ ಬಸ್ ಪಾಸ್ ತೋರಿಸಿ ಸಂಚರಿಸಲು ಅವಕಾಶ ನೀಡಿದೆ.

ಈ ಕುರಿತಂತೆ ಬಿಎಂಟಿಸಿ, ಕೆ ಎಸ್ ಆರ್ ಟಿ ಸಿ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ದಿನಾಂಕ 16-05-2022ರಿಂದ ಶಾಲೆಗಳು ಆರಂಭಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಈ ಹಿಂದೆ ವಿತರಿಸಲಾಗಿರುವಂತ ವಿದ್ಯಾರ್ಥಿಗಳ ಬಸ್ ಪಾಸ್ ಆವಧಿ ದಿನಾಂಕ 30-06-2022ರವರೆಗೆ ಮಾನ್ಯತೆ ಹೊಂದಿದೆ. ಅದೇ ಪಾಸ್ ಅನ್ನು ಬಿಎಂಟಿಸಿ, ಕೆ ಎಸ್ ಆರ್ ಟಿ ಸಿ ಬಸ್ ಗಳಲ್ಲಿ ತೋರಿಸಿ ಸಂಚರಿಸಲು ಅವಕಾಶ ನೀಡಲಾಗಿದೆ ಎಂದು ಹೇಳಿದೆ.

ಇನ್ನೂ ಬಿಎಂಟಿಸಿಯು ಪಾಸ್ ಅನ್ನು ಕಳೆದ ವರ್ಷ ಪಡೆಯದಂತ ವಿದ್ಯಾರ್ಥಿಗಳಿಗೆ ದಿನಾಂಕ 16-05-2022 ರಿಂದ ದಿನಾಂಕ 31-05-2022ರವರೆಗೆ ಶಾಲೆಗೆ ದಾಖಲಾಗಿರುವಂತ ರಸೀದಿ, ಗುರುತಿನ ಚೀಟಿಯನ್ನು ತೋರಿಸಿ ಸಾಮಾನ್ಯ ಸೇವೆಗಳ ಬಸ್ ಗಳಲ್ಲಿ ತಮ್ಮ ವಾಸ ಸ್ಥಳದಿಂದ ಶಾಲೆಯವರೆಗೆ ಸಂಚರಿಸಲು ಅವಕಾಶ ನೀಡಿದೆ.

About The Author