ಬೆಂಗಳೂರು: ಕೇಂದ್ರ ಸರ್ಕಾರದಿಂದ ಪ್ಯಾಕೆಟ್ ಪುಡ್ ಗಳ ಮೇಲೆ ಜಿಎಸ್ಟಿ ವಿಧಿಸಿದ ಪರಿಣಾಮ ಇಂದಿನಿಂದ ಜಾರಿಗೆ ಬರುವಂತೆ ಕೆಎಂಎಫ್ ನಿಂದ ಮೊಸರು, ಮಜ್ಜಿಗೆ, ಲಸ್ಸಿ ದರ ಹೆಚ್ಚಳ ಮಾಡಲಾಗಿತ್ತು. ಹೀಗಾಗಿ ಅಗತ್ಯವಸ್ತುಗಳ ದರ ಏರಿಕೆಯ ಶಾಕ್ ನಲ್ಲಿದ್ದವರಿಗೆ, ಮತ್ತೊಂದು ಶಾಕ್ ನೀಡಲಾಗಿತ್ತು. ಆದ್ರೇ ಇದೀಗ ಆ ಆದೇಶವನ್ನು ವಾಪಾಸ್ ಪಡೆದು, ನಂದಿನಿ ಉತ್ಪನ್ನಗಳ ದರವನ್ನು ಇಳಿಕೆ ಮಾಡಿ ಇಂದು ಪರಿಷ್ಕೃತ ಆದೇಶ ಹೊರಡಿಸಿದೆ. ಈ ಮೂಲಕ ರಾಜ್ಯದ ಜನತೆಗೆ ಕೆಎಂಎಫ್ ಗುಡ್ ನ್ಯೂಸ್ ನೀಡಿದೆ.
ನಿನ್ನೆ ಕೆಎಂಎಫ್ ನಿಂದ ಕೇಂದ್ರ ವಿತ್ತ ಸಚಿವಾಲಯವು ಇಂದಿನಿಂದ ಜಾರಿಗೆ ಬರುವಂತೆ ಮೊಸರು, ಮಜ್ಜಿಗೆ ಮತ್ತು ಸಿಹಿ ಲಸ್ಸಿ ಉತ್ಪನ್ನಗಳ ಮೇಲೆ ಜಿ ಎಸ್ ಟಿ ವಿಧಿಸಿ ಆದೇಶಿಸಿದ್ದರ ಹಿನ್ನಲೆಯಲ್ಲಿ, ನಂದಿನಿ ಮೊಸರು, ಮಜ್ಜಿಗೆ ಮತ್ತು ಲಸ್ಸಿ ಉತ್ಪನ್ನ ದರ ಹೆಚ್ಚಿಸಿತ್ತು.
ಇದೀಗ ಇಂದು ಆ ದರಪಟ್ಟಿಯನ್ನು ವಾಪಾಸ್ ಪಡೆದಿದೆ. ನಾಳೆಯಿಂದ ಜಾರಿಗೆ ಬರುವಂತೆ ದರವನ್ನು ಗ್ರಾಹಕರ ಹಿತದೃಷ್ಠಿಯಿಂದ ಮರು ಪರಿಷ್ಕರಣೆ ಮಾಡಿದೆ. ಅದರಂತೆ 200 ಗ್ರಾಂ ಮೊಸರು ರೂ.10.50, 500 ಗ್ರಾಂ ರೂ.23, 1000 ಗ್ರಾಂ ರೂ.45 ದರವಾಗಿದೆ.
ಇನ್ನೂ ಮಜ್ಜಿಗೆ ಸ್ಯಾಚೆ ದರ 200 ಮಿಲಿಗೆ ರೂ 7.50, ಟೆಟ್ರಾ ಪ್ಯಾಕ್ ರೂ.10.50, ಪೆಟ್ ಬಾಟಲ್ ರೂ.12.50 ಆಗಿದೆ. ಲಸ್ಸಿ ಸ್ಯಾಚೆ 200 ಮಿಲಿ ರೂ.10.50, ಟೆಟ್ರಾ ಪ್ಯಾಕ್ ಸಾದ ರೂ.21, ಟೆಟ್ರಾ ಪ್ಯಾಕ್ ಮ್ಯಾಂಗೋ ರೂ.26.50, ಪೆಟ್ ಬಾಟಲ್ ಸಾದ ರೂ.16, ಪೆಟ್ ಬಾಟಲ್ ಮ್ಯಾಂಗೋ ರೂ.21 ಆಗಿದೆ.




