Technology News:
ರೈಲ್ವೆ ಪ್ರಯಾಣಿಕರು ಇದೀಗ ವಾಟ್ಸ್ಆ್ಯಪ್ ಮೂಲಕ ಫುಡ್ ಆರ್ಡರ್ ಮಾಡಬಹುದು. ಮಾತ್ರವಲ್ಲದೆ ಆರ್ಡರ್ ಅನ್ನು ಲೈವ್ ಟ್ರ್ಯಾಕಿಂಗ್ ಆಡುವ ಅವಕಾಶದ ಜೊತೆ ತಮ್ಮ ಡೆಲಿವರಿಯನ್ನು ನೇರವಾಗಿ ಸೀಟುಗಳಿಗೆ ಪಡೆಯುವ ಆಯ್ಕೆ ನೀಡಲಾಗಿದೆ.
ಜಿಯೋ ಹ್ಯಾಪ್ಟಿಕ್, ವಾಟ್ಸ್ಆ್ಯಪ್ ಚಾಟ್‌ಬಾಟ್ ಪ್ರೊವೈಡರ್ ಮತ್ತು ಝೂಪ್ ಐರ್ಸಿಟಿಸಿ ಜೊತೆ ಪಾಲುದಾರಿಕೆ ಮಾಡಿಕೊಂಡಿದ್ದು, ಇದರ ಮೂಲಕ ರೈಲಿನಲ್ಲಿ ಪ್ರಯಾಣ ಮಾಡುವಾಗ ಆಹಾರವನ್ನು ಆರ್ಡರ್ ಮಾಡಿ ನೀವು ಕೂತಿದ್ದ ಜಾಗಕ್ಕೆ ತಂದುಕೊಡುವ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಹೇಳಲಾಗಿದೆ. ಕೆಲವು ರೈಲು ನಿಲ್ದಾಣಗಳ ಆಯ್ದ ರೆಸ್ಟೋರೆಂಟ್‌ಗಳಲ್ಲಿ ಪ್ರಯಾಣಿಕರು ತಮ್ಮ PNR ಸಂಖ್ಯೆಯನ್ನು ನಮೋದಿಸಿ ಆಹಾರವನ್ನು ಆರ್ಡರ್ ಮಾಡಬಹುದಾಗಿದೆ.
ವಾಟ್ಸ್ಆ್ಯಪ್ ಚಾಟ್‌ಬಾಟ್ ಪ್ಲಾಟ್‌ಫಾರ್ಮ್ ಪ್ರಯಾಣಿಕರಿಗೆ ನೆಟ್‌ವರ್ಕ್ ಸಂಪರ್ಕದ ಸಮಸ್ಯೆಗಳನ್ನು ನಿವಾರಿಸಲು ಮತ್ತು ರೈಲು ಪ್ರಯಾಣದ ಸಂದರ್ಭ ಉತ್ತಮ ಗುಣಮಟ್ಟದ ಆಹಾರ ಕಲ್ಪಿಸಲು ಸಹಾಯ ಮಾಡುತ್ತದೆ. ನೀವು +91 7042062070 ನಂಬರ್ ನೊಂದಿಗೆ ವಾಟ್ಸ್ಆ್ಯಪ್ನಲ್ಲಿ ಜೂಪ್ನೊಂದಿಗೆ ಚಾಟ್ ಮಾಡಬಹುದು.
ಇನ್ನು ಆಹಾರ ಕ್ರಮವನ್ನು ಹೇಗೆ ಆರ್ಡರ್ ಮಾಡಬಹುದು ಎಂಬುವುದಾಗಿ ಇಲ್ಲಿ ತಿಳಿಸಲಾಗಿದೆ.
- ಫೋನ್‌ನಲ್ಲಿ ವಾಟ್ಸ್ಆ್ಯಪ್ ತೆರೆಯಿರಿ ಮತ್ತು‘ಹಾಯ್‘ ಸಂದೇಶವನ್ನು+91 7042062070 ಗೆ ಕಳುಹಿಸಿ Zoop ನೊಂದಿಗೆ ಚಾಟ್ ಮಾಡಿ.
- ನಂತರ ನೀವು ಆರ್ಡರ್ ಫುಡ್, ಚೆಕ್PNR ಸ್ಟೇಟಸ್, ಟ್ರ್ಯಾಕ್ ಆರ್ಡರ್ ಮುಂತಾದ ಹಲವಾರು ಆಯ್ಕೆಗಳುZoop ನಿಂದ ಬರುತ್ತದೆ.
- ಈಗ ನೀವು ಆಹಾರವನ್ನು ಆರ್ಡರ್ ಮಾಡಲು ಬಯಸಿದರೆ, ಅಲ್ಲಿರುವ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
- ನಂತರ ನಿಮ್ಮ10-ಅಂಕಿಯPNR ಸಂಖ್ಯೆಯನ್ನು ನಮೋದಿಸಬೇಕಾಗುತ್ತದೆ. ಜೊತೆಗೆ ನಿಮ್ಮ PNR ಮತ್ತು ಇತರ ವಿವರಗಳನ್ನು ಖಚಿತಪಡಿಸಲು ನಿಮ್ಮನ್ನು ಕೇಳಲಾಗುತ್ತದೆ.
- ನೀವು ಎಲ್ಲಾ ವಿವರಗಳನ್ನು ನಿಖರವಾಗಿ ಖಚಿತಪಡಿಸಿದರೆ, ಆರ್ಡರ್ ಅನ್ನು ಎಲ್ಲಿ ರಿಸಿವ್ ಮಾಡಲು ಬಯಸುತ್ತೀರಿ ಎಂಬ ಆಯ್ಕೆ ಕೇಳಲಾಗುತ್ತದೆ.
- ನಿಲ್ದಾಣವನ್ನು ಆಯ್ಕೆ ಮಾಡಿದ ನಂತರ ನೀವು ನಿಮ್ಮ ಆಹಾರವನ್ನು ಯಾವ ರೆಸ್ಟೋರೆಂಟ್ನಿಂದ ಆಯ್ಕೆ ಮಾಡುತ್ತೀರಿ ಎಂದು ಆರಿಸಬೇಕಾಗುತ್ತದೆ. ಈಗ ನಿಮಗೆ ಬೇಕಾದ ಆಹಾರವನ್ನು ಸೆಲೆಕ್ಟ್ ಮಾಡಿ.
- ಆರ್ಡರ್ ಮಾಡಿದ ನಂತರ, ನಿಮ್ಮ ಆದೇಶದ ವಿವರವನ್ನು ನೀವು ಪಡೆಯುತ್ತೀರಿ. ಜೊತೆಗೆ ಬಿಲ್ಗೆ ಸಂಬಂಧಿಸಿದ ಕೆಲ ವಿಧಾನಗಳಿರುತ್ತವೆ. ಅಂತಿಮವಾಗಿ ನಿಮ್ಮ ಸಂಖ್ಯೆಯನ್ನು ಖಚಿತಪಡಿಸಿ ಫುಡ್ ಆರ್ಡರ್ ಆಗುತ್ತದೆ.




