Wednesday, August 20, 2025

Latest Posts

ಖಾಸಗಿ ಡ್ರೈವರ್, ಕ್ಲೀನರ್‌ಗೆ ಸರ್ಕಾರದಿಂದ ಸಿಹಿ ಸುದ್ದಿ- ವಾಹನ ಚಾಲಕರಿಗೆ ಭದ್ರತಾ ಗ್ಯಾರಂಟಿ!

- Advertisement -

ಖಾಸಗಿ ವಾಣಿಜ್ಯ ವಾಹನಗಳ ಚಾಲಕರು, ನಿರ್ವಾಹಕರು ಹಾಗೂ ಕ್ಲೀನರ್‌ಗಳಿಗೆ ಇದು ಗುಡ್‌ನ್ಯೂಸ್‌. ಅಪಘಾತ ಪರಿಹಾರ ಯೋಜನೆ ಅಡಿ ರಾಜ್ಯ ಸರ್ಕಾರ ಸಂತಸದ ಸುದ್ದಿ ನೀಡಿದೆ. ಇನ್ನು ಮುಂದೆ ತಮ್ಮ ಕರ್ತವ್ಯ ನಿರ್ವಹಿಸುತ್ತಿರುವ ವೇಳೆ ಅಪಘಾತ ಸಂಭವಿಸಿದರೆ, ಸರ್ಕಾರದಿಂದ ಹಣಕಾಸಿನ ನೆರವು ದೊರೆಯಲಿದೆ.

ರಾಜ್ಯ ಸರ್ಕಾರ ಕಾರ್ಮಿಕರ ಕಲ್ಯಾಣಕ್ಕಾಗಿ ಅವರ ಕುಟುಂಬದ ಸುರಕ್ಷತೆಗಾಗಿ, ಅನೇಕ ಯೋಜನೆಗಳನ್ನ ಮಾಡಿದೆ. ಅದೇ ರೀತಿ ಈಗ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ ಯೋಜನೆಗಳ ಇದು ಪ್ರಮುಖವಾಗಿದೆ. ಕರ್ನಾಟಕ ರಾಜ್ಯ ಖಾಸಗಿ ಸಾರಿಗೆ ಕಾರ್ಮಿಕರ ಅಪಘಾತ ಪರಿಹಾರ ಪ್ರಮುಖವಾಗಿದೆ.

ರಾಜ್ಯದ ಖಾಸಗಿ ವಾಹನ ಚಾಲಕರಿಗೆ, ನಿರ್ವಾಹಕರು, ಕ್ಲೀನರ್ ಗಳಿಗೆ ಯಾವುದೇ ರೀತಿಯ ಭದ್ರತೆಗಳಿರೋದಿಲ್ಲ. ಅಪಘಾತಗಳಾದಾಗ ಮೃತ ಪಡೋದು, ಶಾಶ್ವತ ಅಥವಾ ತಾತ್ಕಾಲಿಕವಾಗಿ ಗಾಯಗಳಾದ್ರೆ ಅವರ ದುಡಿಮೆಯನ್ನೇ ಅವಲಂಬಿಸಿರುವ ಅವರ ಕುಟುಂಬ ಆರ್ಥಿಕ ಸಂಕಷ್ಟಕ್ಕೆ ಎದುರಾಗುತ್ತೆ. ಹಾಗಾಗಿ ಸರ್ಕಾರ, ಕಾರ್ಮಿಕ ಇಲಾಖೆ ಮೂಲಕ ಈ ಯೋಜನೆಯನ್ನ ಜಾರಿಗೆ ತಂದಿದೆ.

ಈ ಯೋಜನೆಯಡಿ ಅಪಘಾತದಲ್ಲಿ ಮೃತರಾದರೆ, ಅವರ ನಾಮ ನಿರ್ದೇಶಿತರಿಗೆ ₹5 ಲಕ್ಷ ಪರಿಹಾರವಾಗಿ ನೀಡಲಾಗುತ್ತದೆ. ಶಾಶ್ವತ ಅಂಗವೈಕಲ್ಯ ಅಥವಾ ಶಕ್ತಿಹೀನತೆಯುಂಟಾದರೆ, ಗರಿಷ್ಠ ₹2 ಲಕ್ಷ ಪರಿಹಾರ ಹಣ ನೀಡಲಾಗುತ್ತದೆ. ಸಾಮಾನ್ಯ ಗಾಯಗಳಿಗೂ ₹1 ಲಕ್ಷವರೆಗೆ ನೆರವು ಲಭ್ಯವಿದೆ ಎಂದು ಇಲಾಖೆಯು ತಿಳಿಸಿದೆ.

ಈ ಯೋಜನೆಯ ಲಾಭ ಪಡೆಯಲು, ಚಾಲಕರು ಕರ್ನಾಟಕ ರಾಜ್ಯ ಸಾರಿಗೆ ಇಲಾಖೆಯಿಂದ ಮಾನ್ಯವಾದ ವಾಣಿಜ್ಯ ವಾಹನ ಚಾಲನಾ ಪರವಾನಗಿ ಹೊಂದಿರಬೇಕು. ಇನ್ನು ನಿರ್ವಾಹಕರು ಮತ್ತು ಕ್ಲೀನರ್‌ಗಳು ತಮ್ಮ ಜಿಲ್ಲಾ ನೋಂದಣಿ ಅಧಿಕಾರಿಗಳಿಂದ ಯೋಜನೆಯಡಿ ನೋಂದಾಯಿಸಿಕೊಳ್ಳುವುದು ಕಡ್ಡಾಯ.

ಈ ಪರಿಹಾರ ಯೋಜನೆಯು ವಾಹನ ಉದ್ಯೋಗಿಗಳ ಸುರಕ್ಷತೆಗಾಗಿ ಸರ್ಕಾರ ತೆಗೆದುಕೊಂಡ ಮಹತ್ವದ ಹೆಜ್ಜೆ ಎನಿಸಲಿದೆ. ಉದ್ಯೋಗದಲ್ಲಿರುವವರ ಕುಟುಂಬಗಳಿಗೆ ಭದ್ರತೆ ಒದಗಿಸುವಲ್ಲಿ ಇದು ಮಹತ್ವದ ಯೋಜನೆ ಆಗಲಿದೆ ಎನ್ನಲಾಗುತ್ತಿದೆ.

ವರದಿ : ಲಾವಣ್ಯ ಅನಿಗೋಳ

- Advertisement -

Latest Posts

Don't Miss