ಕಾಂಗ್ರೆಸ್ ಸರ್ಕಾರದ ಗೃಹಲಕ್ಷ್ಮಿ ಯೋಜನೆ ಅತಂತ್ರವಾಗಿದೆ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಕಾರಣ ಮೊದ ಮೊದಲು ಪ್ರತಿ ತಿಂಗಳು ಚಾಚು ತಪ್ಪದೆ ಪ್ರತಿ ತಿಂಗಳು ಬರುತ್ತಿದ್ದಂತ ಗೃಹಲಕ್ಷ್ಮಿ ಹಣ, ಈಗ 5 ತಿಂಗಳು ಕಳೆದರು ಬರುತ್ತಲ್ಲ ಎಂಬುದು ಗೃಹಲಕ್ಷ್ಮಿಯರ ಯೋಚನೆಗೆ ಕಾರಣವಾಗಿದೆ.
ಆದರೆ ಯೋಚನೆ ಮಾಡಬೇಡಿ ನಿಮಗೆ ನಿಮ್ಮ ಗೃಹಲಕ್ಷ್ಮಿ ಹಣ ಇನ್ನು ಕೆಲವೇ ತಿಂಗಳಲ್ಲೆ ಬರುತ್ತದೆ. ಯೆಸ್. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗ 5 ಗ್ಯಾರಂಟಿಗಳನ್ನು ನೀಡಿತ್ತು. ಅದರಲ್ಲಿ ಅತೀ ಹೆಚ್ಚು ಜನಪ್ರಿಯತೆಗಳಿಸಿದ್ದ ಯೋಜನೆ ಎಂದರೆ ಅದು ಗೃಹಲಕ್ಷ್ಮಿ. ಇದನ್ನು ನಂಬಿ ಎಷ್ಟೋ ಮಹಿಳೆಯರು ಚೀಟಿ, ಗೋಲ್ಡ್ ಸ್ಕೀಮ್ ಹೀಗೆ ಉಳಿತಾಯ ಯೋಜನೆಗಳಿಗೆ ಕೈಹಾಕಿದ್ದರು.
ಗೃಹಲಕ್ಷ್ಮಿ ಹಣವನ್ನು ಉಳಿಸಿ ಅತ್ಯಗತ್ಯ ವಸ್ತುಗಳನ್ನು ಕೊಂಡುಕೊಂಡಿರುವ, ಕೊಡಿಸಿರುವ ಕುರಿತು ಆಗಾಗ್ಗೆ ಸುದ್ದಿಯಾಗುತ್ತಿರುತ್ತದೆ. ಆದರೇ, ಕಳೆದ ಮೂರು ತಿಂಗಳಿಂದ ಖಾತೆಗೆ ಗೃಹಲಕ್ಷ್ಮಿ ಹಣ ಬಾರದೇ ಇರುವುದರಿಂದ ಜಿಲ್ಲೆಯ ಮಹಿಳೆಯರು ಸಮಸ್ಯೆ ಅನುಭವಿಸುವಂತಾಗಿದೆ. ಜುಲೈ ತಿಂಗಳಿನಲ್ಲಿ ಕೊನೆಯದಾಗಿ ಹಣ ಬಂದಿದ್ದು ಬಿಟ್ಟರೆ ಮತ್ತೆ ಮಹಿಳೆಯರ ಖಾತೆಗೆ ಸರಕಾರದ 2000 ರೂ. ಬಂದೇ ಇಲ್ಲ. ಕಳೆದ ಆಗಸ್ಟ್ , ಸೆಪ್ಟೆಂಬರ್ ಹಾಗೂ ಅಕ್ಟೋಬರ್ ತಿಂಗಳಿನಲ್ಲಿ ಮಹಿಳೆಯರ ಖಾತೆಗೆ ಹಣ ಬರದಿರುವುದರಿಂದ ಸಿದ್ದರಾಮಯ್ಯ ಅವರ ಗ್ಯಾರಂಟಿ ಮುಗಿಯಿತೇ ಎಂದು ಮಹಿಳೆಯರು ಅಧಿಕಾರಿಗಳು, ತಿಳಿದಿರುವವರಲ್ಲಿ ಪ್ರಶ್ನೆ ಮಾಡುತ್ತಿದ್ದಾರೆ.
ಆದರೆ ಈಗ ನಿಮಗೆ ಸರ್ಕಾರ ಗುಡ್ ನ್ಯೂಸ್ ಕೊಡುತ್ತಿದೆ. ಚಾಕಿ ಇರುವ ಅಷ್ಟು ಹಣವನ್ನು ಒಟ್ಟಿಗೆ ಇನ್ನೆರಡು ತಿಂಗಲ್ಲೇ ನಿಮ್ಮ ಖಾತೆಗೆ ಹಾಕಲು ತಿರ್ಮಾನಿಸಿದೆ ಎನ್ನಲಾಗಿದೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ

