Sunday, December 22, 2024

Latest Posts

ಎಸ್.ಆರ್ ಹಿರೇಮಠ್ ಮೇಲೆ ಮೊಟ್ಟೆ ಎಸೆದ ದುಷ್ಕರ್ಮಿಗಳು..!

- Advertisement -

ರಾಮನಗರ : ಮಾಜಿ ಸಿಎಂ ಕುಮಾರಸ್ವಾಮಿ ಬೆಂಬಲಿಗರು ಎನ್ನಲಾದ ಕೆಲ ವ್ಯಕ್ತಿಗಳಿಂದ ಸಾಮಾಜಿಕ ಕಾರ್ಯಕರ್ತ ಎಸ್.ಆರ್ ಹೀರೇಮಠ್ ಹಾಗೂ ತಂಡದ ಮೇಲೆ ಗೂಂಡಾಗಿರಿ ನಡೆದಿದೆ.. ಬಿಡದಿ ಹೋಬಳಿ ಕೇತಗಾನಹಳ್ಳಿ ಗ್ರಾಮದ ಗೋಮಾಳ ಜಮೀನು200 ಎಕರೆ ಭೂಮಿ ಕಬಳಿಸಿರುವ ಬಗ್ಗೆ SR.ಹಿರೇಮಠ್ ರವರು ಈ ಊರಿಗೆ ಭೇಟಿ ನೀಡಿದಾಗ ಮೊಟ್ಟೆ ಎಸೆದು ಅವಮಾನ ಮಾಡಿ ದೌರ್ಜನ್ಯ ಎಸಗಿದ್ದಾರೆ. ಕೆಲಅಕ್ರಮ ಭೂ ವ್ಯವಹಾರ ಸಂಬಂಧಿಸದಂತೆ ದಾಖಲಾತಿ ಸಂಗ್ರಹಿಸಲು ಸ್ವತಃ ಸಾಮಾಜಿಕ ಕಾರ್ಯಕರ್ತ ಎಸ್.ಆರ್ ಹಿರೇಮಠ್ ಹಾಗೂ ರವಿಕೃಷ್ಣಾ ರೆಡ್ಡಿ ಸೇರಿದಂತೆ ಕೆಲ ಸಾಮಾಜಿಕ ಕಾರ್ಯಕರ್ತರು ರಾಮನಗರ ಜಿಲ್ಲೆಯ ಕೇತಗಾನಹಳ್ಳಿಗೆ ತೆರಳಿದ್ರು.. ಈ ವೇಳೆ ಎಸ್.ಆರ್ ಹೀರೇಮಠ್ ತಂಡದ ಮೇಲೆ ಅವಾಚ್ಯ ಶಬ್ಧಗಳಿಂದ ನಿಂಧಿಸಿದ್ದಲ್ಲದೇ ದೊಣ್ಣೆಗಳಿಂದ ಹಲ್ಲೆ ಮಾಡಲು ಮುಂದಾದ್ರು. ಈ ವೇಳೆ ಕೆಲ ಕಿಡಿಗೇಡಿಗಳು ಮೊಟ್ಟೆ ಎಸೆದು ಅವಮಾನಿಸಿದ ಘಟನೆ ನಡೆದಿದೆ.. ಸ್ವತಃ ಈ ವಿಷಯವನ್ನ ಖಂಡಿಸಿರುವ ಮಾಜಿ ಸಿಎಂ ಕುಮಾರಸ್ವಾಮಿ ನಾನೇ ಎಸ್.ಆರ್ ಹೀರೇಮಠ್ ಅವರಿಗೆ ದಾಖಲೆ ಕೊಡ್ತಿದೆ..ಅವರ್ಯಾಕೆ ಅಲ್ಲಿಗೆ ಹೋಗಬೇಕಿತ್ತು ಅಂತ ಪ್ರತಿಕ್ರಿಯೆ ನೀಡಿದ್ದಾರೆ..

https://www.youtube.com/watch?v=WZxDEAEyH-4
- Advertisement -

Latest Posts

Don't Miss