ಗೊರವನಹಳ್ಳಿ ಶ್ರೀಮಹಾಲಕ್ಷ್ಮಿ ದೇವಸ್ಥಾನದ ಪ್ರಧಾನ ಅರ್ಚಕ ಪ್ರಸನ್ನ ವಿಧಿವಶ.
ಪ್ರಸಿದ್ದ ಪುಣ್ಯಕ್ಷೇತ್ರ ಗೊರವನಹಳ್ಳಿ ಶ್ರೀಮಹಾಲಕ್ಷ್ಮೀ ದೇವಸ್ಥಾನದ ಪ್ರಧಾನ ಅರ್ಚಕ ಪ್ರಸನ್ನ ಅವರು ಇಂದು ವಿಧಿವಶರಾಗಿದ್ದಾರೆ. 66ವಯಸ್ಸಿನ ಅವರು ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಒಬ್ಬ ಮಗ, ಒಬ್ಬ ಮಗಳನ್ನು ಪ್ರಸನ್ನ ಅವರು ಅಗಲಿದ್ದಾರೆ.
ಪ್ರಸನ್ನ ಅವರು ಗೊರವನಹಳ್ಳಿ ದೇವಸ್ಥಾನದ ಸಂಸ್ಥಾಪಕರಾದ ಕಮಲಮ್ಮ ಅವರ ಪುತ್ರರು . ಕಮಲಮ್ಮ ಅವರ ನಿಧನದ ನಂತರ ಪ್ರಧಾನ ಅರ್ಚಕರಾಗಿ ಸೇವೆ ಸಲ್ಲಿಸುತ್ತಾ ಬಂದಿದ್ದರು. ದೇವಸ್ಥಾನದ ಅಭಿವೃದ್ಧಿಗೆ ಸಾಕಷ್ಟು ಶ್ರಮ ಪಟ್ಟಿದ್ದರು.
ಇಂದು ಸಂಜೆ 5 ಗಂಟೆಯಿಂದ ಗೊರವನ್ನಹಳ್ಳಿಯ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ನಾಳೆ(ಭಾನುವಾರ) ಬೆಳಗ್ಗೆ ಗೊರವನಹಳ್ಳಿಯಲ್ಲೇ ಅಂತ್ಯಸಂಸ್ಕಾರ ನಡೆಯಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
ಮಹಾಲಕ್ಷ್ಮಿ ದೇವಿಯ ಭಕ್ತರ ಗಮನಕ್ಕೆ .
ಪ್ರಧಾನ ಅರ್ಚಕರು ವಿಧಿವಶರಾಗಿರುವುದರಿಂದ ನಾಳೆ ಅವರ ಅಂತಿಮ ಕಾರ್ಯಗಳು ಮುಗಿಯುವ ತನಕ ದೇವಸ್ಥಾನ ಮುಚ್ಚಿರಲಾಗುತ್ತದೆ ಎಂದು ಪ್ರಸನ್ನ ಅವರ ಕುಟುಂಬದವರು ತಿಳಿಸಿದ್ದಾರೆ.




