Friday, September 20, 2024

Latest Posts

ಪ್ರಭಾಸ್ ಜೊತೆ ಡೇಟಿಂಗ್ ಮಾಡ್ತಿದ್ದಾರಂತೆ ಪೂಜಾ ಹೆಗ್ಡೆ..?!

- Advertisement -

ಪೂಜಾ ಹೆಗ್ಡೆ.. ಉಡುಪಿ ಬೆಡಗಿ. ಮೊಹೆಂಜೋದಾರೋ ಚಿತ್ರದಲ್ಲಿ ಅಭಿನಯಿಸುವ ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಟ್ಟ ಪೂಜಾ ಹೆಗ್ಡೆ, ಹೌಸ್‌ಫುಲ್-4 ಚಿತ್ರದಲ್ಲೂ ನಟಿಸಿ ಸೈ ಅನ್ನಿಸಿಕೊಂಡಿದ್ದಾರೆ. ಇದಲ್ಲದೇ ಈಗ ಸಲ್ಮಾನ್ ಖಾನ್ ಜೊತೆ ಕಭಿ ಈದ್ ಕಭಿ ದಿವಾಲಿ ಅನ್ನೋ ಸಿನಿಮಾ ಮಾಡಲು ಮುಂದಾಗಿದ್ದಾರೆ.

ಇನ್ನು ಟಾಲಿವುಡ್‌ನಲ್ಲಿ ಡಿಜೆ, ಅಲಾವೈಕುಂಠಪುರಂಲೋ ಸಿನಿಮಾದಲ್ಲಿ ನಟಿಸಿ, ಪ್ರಖ್ಯಾತ ನಟಿ ಎಂಬ ಪಟ್ಟ ಗಿಟ್ಟಿಸಿಕೊಂಡ ಪೂಜಾ, ಮುಂದಿನ ಚಿತ್ರದಲ್ಲಿ ಪ್ರಭಾಸ್ ಜೊತೆ ಬಣ್ಣ ಹಚ್ಚಲು ರೆಡಿಯಾಗಿದ್ದಾರೆ. ಆದ್ರೀಗ ಪೂಜಾ ಹೆಗ್ಡೆ ಬಗ್ಗೆ ಗಾಸಿಪ್ ಒಂದು ಓಡಾಡುತ್ತಿದ್ದು, ಪ್ರಭಾಸ್ ಜೊತೆ ಡೇಟಿಂಗ್ ನಡೆಸುತ್ತಿದ್ದಾರಂತೆ.

https://youtu.be/w1YD19Zliug

ಈ ಮೊದಲು ಹೃತಿಕ್ ರೋಷನ್ ಜೊತೆ ಅಫೇರ್ ಇತ್ತು ಎಂಬ ಗಾಳಿ ಸುದ್ದಿಗೆ ಬ್ರೇಕ್ ಹಾಕಿದ ಪೂಜಾ ಹೆಗ್ಡೆ ನಾವಿಬ್ಬರು ಉತ್ತಮ ಸ್ನೇಹಿತರು ಎಂದು ಹೇಳಿದ್ರು. ತದನಂತರ ಬಾಲಿವುಡ್ ನಟ ರೋಹನ್ ಮೆಹ್ರಾ ಜೊತೆಗೆ ಡೇಟಿಂಗ್ ನಡೆಸುತ್ತಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಇದೀಗ ನಟ ಪ್ರಭಾಸ್ ಜೊತೆ ಡೇಟಿಂಗ್ ನಡೆಸುತ್ತಿದ್ದಾರೆ ಎಂಬ ಗುಸು ಗುಸು ಕೇಳಿಬಂದಿದೆ.

ಇತ್ತೀಚೆಗೆ ನಡೆದ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಪೂಜಾ ನಾನು ಮದುವೆಯಾಗುವ ಹುಡುಗ ನೋಡಲು ಚಂದವಿರಬೇಕು. ನನ್ನನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಚಂದದ ಬಂಗಲೆಯಲ್ಲಿ ನಮ್ಮ ಪ್ರೀತಿಯ ನಾಯಿಯೊಂದಿಗೆ ನಾವಿರಬೇಕು ಎಂದಿದ್ದರು.

ಹೀಗಾಗಿ ಆಕೆ ಪ್ರಭಾಸ್‌ರೊಂದಿಗೆ ಡೇಟಿಂಗ್ ಮಾಡ್ತಿದ್ದಾರೆ ಎಂದು ಹೇಳಲಾಗಿದೆ. ಇಷ್ಟೇ ಅಲ್ಲದೇ, ಪ್ರಭಾಸ್ ಮುಂದಿನ ಚಿತ್ರಕ್ಕೆ ಪೂಜಾ ಹೆಗ್ಡೆನೇ ನಾಯಕಿ. ಹಾಗಾಗಿ ಪೂಜಾ ಫ್ಯಾನ್ಸ್ ಪ್ರಭಾಸ್- ಪೂಜಾ ನಡುವೆ ಕುಚ್ ಕುಚ್ ಹೈ ಅಂತಿದ್ದಾರೆ.

ಪ್ರಖ್ಯಾತ ಜ್ಯೋತಿಷ್ಯರು
ಪಂಡಿತ್ ಕೆ.ಎಂ.ರಾವ್
ಆರ್‌ಪಿಸಿ ಲೇಔಟ್ ಬಸ್ ನಿಲ್ದಾಣದ ಹತ್ತಿರ, ಹಂಪಿ ನಗರ, ವಿಜಯನಗರ, ಬೆಂಗಳೂರು
Phone number: 99029 83444/ 98458 11194

- Advertisement -

Latest Posts

Don't Miss