Friday, November 22, 2024

Latest Posts

ಸಮಂತಾ-ನಾಗಚೈತನ್ಯ ಲೈಫಲ್ಲಿ ಹುಳಿ ಹಿಂಡಿದ್ದ್ಯಾರು..!

- Advertisement -

www.karnatakatv.net :ನಟಿ ಸಮಂತಾ  ಹಾಗೂ ನಾಗ ಚೈತನ್ಯ  ದಾಂಪತ್ಯ ಜೀವನ ಮುರಿದು ಬಿದ್ದಿದೆ ಅನ್ನೋ ಗಾಸಿಪ್ ಸದ್ಯ ಎಲ್ಲೆಡೆ ಹರಿದಾಡ್ತಿದೆ.  ಹೇಳಿ ಮಾಡಿಸಿದ ಜೋಡಿಯಂತಿರೋ ಇವರಿಬ್ಬರ ಮಧ್ಯೆ ಅದೇನಾಯ್ತೋ ಏನೋ ಅಂತ ಅಭಿಮಾನಿಗಳು ಬೇಜಾರಾಗಿದ್ದಾರೆ. ಕಳೆದೊಂದು ತಿಂಗಳಿನಿಂದ ಈ ಗುಸುಗುಸು ಶುರುವಾಗಿದ್ರೂ ಕೂಡ ಸಮಂತಾ ಆಗ್ಲಿ, ನಾಗಚೈತನ್ಯ ಆಗಲಿ ತುಟುಕ್ ಪಿಟುಕ್ ಅಂತಿಲ್ಲ.

ಹೌದು, ತಮ್ಮ ವೈಯಕ್ತಿಕ ಜೀವನದ ಬಗ್ಗೆ ಇಷ್ಟೂ ದಿನಗಳಿಂದ ಕೇಳಿಬರ್ತಿರೋ ಮಾತುಗಳನ್ನು ಸಮಂತಾ ಹಾಗೂ ನಾಗಚೈತನ್ಯ ಕೇಳಿಸಿಕೊಂಡ್ರೂ ಕೇಳದಂತೆ ಇದ್ದಾರೆ. ಹಾಲು ಜೇನಿನಂತಿದ್ದ ಈ ಜೋಡಿ ಸದ್ಯ ಡಿವೋರ್ಸ್ ಗೆ ಮುಂದಾಗಿದೆ ಅನ್ನೋ ವಿಚಾರವನ್ನ ಫ್ಯಾನ್ಸ್ ಅರಗಿಸಿಕೊಳ್ಳೋದಕ್ಕೆ ಆಗ್ತಿಲ್ಲ.

2017ರಲ್ಲಿ ಪ್ರೀತಿಸಿ ಮದುವೆಯಾಗಿದ್ದ ಈ ಲವ್ ಬರ್ಡ್ಸ್ ಸಾಕಷ್ಟು ಚಿತ್ರಗಳಲ್ಲಿ ಒಟ್ಟಾಗಿ ನಟಿಸಿದ್ರು, ಜೋಡಿ ಅಂದ್ರೆ ಹೀಗರಬೇಕಪ್ಪಾ ಅಂತ ಅದೆಷ್ಟೋ ಮಂದಿ ಅಂದುಕೊಂಡಿದ್ದೂ ನಿಜ. ಆದ್ರೆ ಅದ್ಯಾವಾಗ ಸಮಂತಾ ತಮ್ಮ ಟ್ವಿಟ್ಟರ್ ಖಾತೆ ಹೆಸರು ಬದಲಾಯಿಸಿದ್ರೋ, ಅಲ್ಲಿಂದ ಇಲ್ಲೀವರೆಗೂ ಒಂದೊಂದೇ ಸುದ್ದಿ ತಳುಕು ಹಾಕಿಕೊಳ್ತಿದೆ.

ಮೂಲಗಳ ಪ್ರಕಾರ ಒಂದು ಹಿಂದಿ ವೆಬ್ ಸೀರೀಸ್ ನಲ್ಲಿನ ಪಾತ್ರದ ವಿಚಾರವಾಗಿ ಸಮಂತಾ-ನಾಗಚೈತನ್ಯ ಮಧ್ಯೆ ಬಿರುಕು ಮೂಡೋದಕ್ಕೆ ಕಾರಣ ಅಂತ ಹೇಳಲಾಗ್ತಿದೆ. ಆದ್ರೆ ನಟನೆಯನ್ನೇ ತಮ್ಮ ಜೀವ ಅಂತ ತಿಳಿದುಕೊಂಡಿರೋ ಈ ದಂಪತಿ ಇಂತಹ ವಿಚಾರಕ್ಕೆಲ್ಲಾ ತಲೆಕೆಡಿಸಿಕೊಳ್ತಾರಾ ಅನ್ನೋ ಪ್ರಶ್ನೆ ಕೂಡ ಎದ್ದಿದೆ.

ಇದಕ್ಕೆ ಪುಷ್ಟಿ ನೀಡುವಂತೆ ನಾಗಚೈತನ್ಯರ ಹೊಸ ಚಿತ್ರ ಲವ್ ಸ್ಟೋರಿ ರಿಲೀಸ್ ಆಗೋ ವೇಳೆ ಕೂಡ ಖುದ್ದು ನಾಗಚೈತನ್ಯ ಮತ್ತೊಂದು ಸುಳಿವು ನೀಡಿದ್ರಂತೆ. ಅದೇನಪ್ಪಾ ಅಂದ್ರೆ, ಚಿತ್ರದ ಪ್ರೆಸ್ ಮೀಟ್ ನಲ್ಲಿ ನನಗೆ ಸಮಂತಾ ಬಗ್ಗೆ ಯಾವ ಪ್ರಶ್ನೆಯನ್ನೂ ಕೇಳಬಾರದು ಅಂತ ನಾಗಚೈತನ್ಯ ಕಂಡೀಷನ್ ಹಾಕಿದ್ರಂತೆ. ಸೋ.. ಇಲ್ಲಿಗೆ ಚೈ-ಸ್ಯಾಮ್ ದಾಂಪತ್ಯ ಜೀವನದಲ್ಲಿ ಏನೋ ಆಗಿದೆ ಅನ್ನೋ ಸುದ್ದಿ ಕನ್ಫರ್ಮ್ ಆದಂಗೆ ಅಂತ ಟಿ-ಟೌನ್ ನಲ್ಲಿ ಮಾತುಗಳು ಕೇಳಿಬರ್ತಿವೆ. ಈ ಎಲ್ಲಾ ವಿಚಾರಗಳಿಗೆ ಸಮಂತಾ ಅಥವಾ ನಾಗಚೈತನ್ಯ ಕ್ಲಾರಿಟಿ ಕೊಟ್ರೆ ಮಾತ್ರ ಈ ಸುದ್ದಿ ನಿಜಾನಾ ಅಥವಾ ಸುಳ್ಳಾ ಅನ್ನೋದು ತಿಳಿಯುತ್ತೆ. ಆದ್ರೆ ಈ ಸುದ್ದಿ ಸುಳ್ಳಾಗಿರ್ಲಿ ಅಂತ ಲಕ್ಷಾಂತರ ಮಂದಿ ಫ್ಯಾನ್ಸ್ ಅಂದುಕೊಳ್ತಿದ್ದಾರೆ.

- Advertisement -

Latest Posts

Don't Miss