Crime
ಹೊನ್ನಾಳಿ ಶಾಸಕ ರೇಣುಕಾಚಾರ್ಯ ಅವರ ತಮ್ಮನ ಮಗ ಚಂದ್ರಶೇಖರ್ ಸಾವಿನ ವಿಚಾರದ ಕುರಿತು ತನಿಖೆ ನಡೆಸಿರುವ ಪೋಲಿಸರು, ನಾಪತ್ತೆಯಾಗುವ ಮೊದಲು ಚಂದ್ರಶೇಖರ್ ಕೊಪ್ಪ ತಾಲ್ಲೂಕು ಗೌರಿಗದ್ದೆಯಲ್ಲಿರುವ ವಿನಯ್ ಗುರೂಜಿ ಆಶ್ರಮಕ್ಕೆ ಹೋಗಿದ್ದರು. ಆಶ್ರೆಮದಿಂದ ತೆರಳುವ ಮೊದಲು ‘ಜಾಗ್ರತೆಯಿಂದ ಮನೆಗೆ ಹೋಗಿ’ ಎಂದು ಗುರೂಜಿ ತಿಳಿಸಿದ್ದರು. ಈ ಸಂದರ್ಭದಲ್ಲಿ ಚಂದ್ರಶೇಖರ್ ಜೊತೆ ಅವರ ಗೆಳೆಯ ಕಿರಣ್ ಸಹ ಇದ್ದರು ಎಂದು ಆಶ್ರೆಮದಲ್ಲಿರುವ ಗುರೂಜಿ ಆಪ್ತ ಮಿಥುನ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಚಂದ್ರಶೇಖರ್ ಅಂದು ರಾತ್ರಿ ಒಂಬತ್ತು ಗಂಟೆಯ ನಂತರ ಆಶ್ರಮಕ್ಕೆ ಬಂದಿದ್ದರು. ಸುಮಾರು 9.40ರ ವರೆಗೂ ಗುರೂಜಿಗಾಗಿ ಕಾದಿದ್ದರು. ಅವರು ಆಗಾಗ ಆಶ್ರಮಕ್ಕೆ ಬರುತ್ತಿದ್ದರಿಂದ ಗುರೂಜಿಗೆ ಚಿರಪರಿಚಿತರಾಗಿದ್ದರು. ‘ಯಾಕೋ ಲೇಟ್ ಆಗಿ ಬಂದೆ’ ಇದು ಬರುವ ಟೈಮಾ’ ಎಂದು ಗುರೂಜಿ ಸಲುಗೆಯಿಂದ ಚಂದ್ರಶೇಖರ್ ಗೆ ಗದರಿದ್ದರು. ಸುಮಾರು 9.45 ರ ಹೊತ್ತಿಗೆ ಚಂದ್ರಶೇಖರ್ ಆಶ್ರಮದಿಂದ ಸ್ನೇಹಿತ ಕಿರಣ್ ಜೊತೆ ಹೊರಟರು. ರಾತ್ರಿ 10 ಗಂಟೆಯ ಸುಮಾರು ಚಂದ್ರಶೇಖರ್ ಇದ್ದ ಕಾರು ಕೊಪ್ಪ ಬಸ್ ನಿಲ್ದಾಣದಿಂದ ಹಾದು ಹೋಗಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಚಂದ್ರೆಶೇಖರ್ ಸಾವಿನ ಕುರಿತು ಪ್ರತಿಕ್ರಿಯಿಸಿದ ಕುಟುಂಬಸ್ಥರು, ಅನುಮಾನಾಸ್ಪದ ಸಾವು ಎಂದು ದೂರು ನೀಡಿದ್ದೆವೆ. ನನ್ನ ರಾಜಕೀಯ ಪ್ರಭಾವ ಕುಗ್ಗಿಸಲು ಇಂಥ ಕೆಲಸ ಮಾಡಿದ್ದಾರೆ, ಅವನ ಬದಲು ನನ್ನನ್ನೇ ಬಲಿ ತೆಗೆದುಕೊಳ್ಳಬೇಕಿತ್ತು ಅದುಬಿಟ್ಟು ಹೀಗೆ ಮಾಡಿರುವುದು ಸರಿಯಲ್ಲ ಎಂದು ಕಣ್ಣೀರು ಹಾಕಿದರು. ಮೃತ ಚಂದ್ರಶೇಖರ್ ತಾಯಿ ಅನಿತಾ ಮಾತನಾಡಿ, ನನ್ನ ಮಗನಿಗೆ ಏನು ಮಾಡಿದ್ದಾರೋ ಗೊತ್ತಿಲ್ಲ. ಆದರೆ ಅವನು ಸಾಯುವ ಮೊದಲು ತುಂಬಾ ಹಿಂಸೆ ಅನಭವಿಸಿದ್ದಾನೆ. ಯಾರ ಮಕ್ಕಳಿಗೂ ಇಂಥ ಪರಿಸ್ಥಿತಿ ಬರಬಾರದು ಎಂದು ಕಣ್ಣೀರು ಹಾಕಿದರು. ಮೃತನ ಅಜ್ಜಿ ಜಯಮ್ಮ ಮತ್ತು ದೊಡ್ಡಮ್ಮ ಸುಜಾತಾ ಸಹ ಮೊಮ್ಮಗನ ಸರಳತೆ ನೆನಪಿಸಿಕೊಂಡು ಕಣ್ಣೀರಿಟ್ಟರು.
ನನ್ನ ರಾಜಕೀಯ ಪ್ರಭಾವ ಕುಗ್ಗಿಸಲು ವಿರೋಧಿಗಳ ಕುತಂತ್ರ : ಮಗನ ಫೂಟೋ ಹಿಡಿದು ರೇಣುಕಾಚಾರ್ಯ ಕಣ್ಣೀರು