Sunday, September 8, 2024

Latest Posts

Covid Guidelines ಗಾಳಿಗೆ ತೂರಿದ ಘಾಟಿ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮಂಡಳಿ..!

- Advertisement -

ದೊಡ್ಡಬಳ್ಳಾಪುರ : ಬೆಂಗಳೂರು ಗ್ರಾಮಾಂತರ (BENGALORE RURAL)ಜಿಲ್ಲೆಯ ದೊಡ್ಡಬಳ್ಳಾಪುರ(DODDABALLAPURA) ತಾಲ್ಲೂಕಿನ ಘಾಟಿ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ(Ghati Subramanya Temple)ದಲ್ಲಿ ಷಷ್ಠಿ  ಪ್ರಯುಕ್ತ ಕೊರೊನಾ ಹಿನ್ನೆಲೆಯಲ್ಲಿ ರಥೊತ್ಸವಕ್ಕೆ ಸಾರ್ವಜನಿಕರ  ದರ್ಶನಕ್ಕೆ  ದೇವಾಲಯದ ಆಡಳಿತಮಂಡಳಿ ನಿರ್ಬಂಧ  ಮಾಡಿತ್ತು. ದೇವಾಲಯದ  ಒಳಾಂಗಣದಲ್ಲಿ ಮಾತ್ರ ರಥೋತ್ಸವಕ್ಕೆ ಅವಕಾಶ ಮಾಡಿಕೊಲಾಗಿತ್ತು ಆದರೆ  ಏಕಾಏಕಿಯಾಗಿ ಸಾರ್ವಜನಿಕರಿಗೆ  ದೇವರ ದರ್ಶನ ಮಾಡಲು ಒಳಗೆ ಪ್ರವೇಶವನ್ನು ಕಲ್ಪಿಸಿದ್ದು ಈಗಾ ಸಾರ್ವಜನಿಕರಲ್ಲಿ ಅಚ್ಚರಿ ಮೂಡಿಸಿದೆ.

ಒಂದು ಕಡೆ ಸರ್ಕಾರ ರೂಲ್ಸ್ ಬ್ರೇಕ್(Government Rules Break) ಇನ್ನೊಂದು ಕಡೆ ಘಾಟಿ ಸುಬ್ರಮಣ್ಯ ಸ್ವಾಮಿ ಷಷ್ಠಿ ರಥೋತ್ಸವಕ್ಕೆ ಸಾರ್ವಜನಿಕರನ್ನು ದೇವಾಲಯದ  ಒಳಗೆ ಪ್ರವೇಶವನ್ನು ಕಲ್ಪಿಸಿದ್ದು ಇದನ್ನೆಲ್ಲ ನೋಡಿದ್ರೆ ಸರ್ಕಾರ ನಾಮಕಾವಸ್ಥೆಗೆ ಕೊವಿಡ್(Covid) ನಿಯಮಗಳನ್ನು ಮಾಡಿದ್ಯಾ ಅನ್ನುವಂತಹ ಪ್ರೇಶ್ನೆ ಸಾರ್ವಜನಿಕರಲ್ಲಿ ಈಗಾ ಮನೆ ಮಾಡಿದೆ.

ಸರ್ಕಾರ ಹೇಳೊದೊಂದು ಮಾಡೊದು ಇನ್ನೊಂದು ಅನ್ನುವಂತಹ ಮಾತುಗಳು ಈಗಾ ಸಾರ್ವಜನಿ ವಲಯದಲ್ಲಿ ಕೇಳಿ ಬರುತ್ತಿದೆ. ಒಟ್ಟಾರೆಯಾಗಿ ಇಂದು ನಡೆದ ಘಾಟಿ ಸುಬ್ರಹ್ಮಣ್ಯ ಷಷ್ಠಿ ರಥೋತ್ಸವದಲ್ಲಿ ಕೊರೊನಾ ನಿಯಮಗಳನ್ನು ಉಲ್ಲಂಘನೆ ಮಾಡಲಾಗಿದೆ. ಘಾಟಿ ಸುಬ್ರಮಣ್ಯಸ್ವಾಮಿ  ರಥೋತ್ಸವಕ್ಕೆ ಸುತ್ತಮುತ್ತಲಿನ  ಜಿಲ್ಲೆಗಳು ಸೇರಿದಂತೆ  ಹೊರರಾಜ್ಯದ  ಸಾವಿರಾರು ಭಕ್ತರು   ಬರುತ್ತಿದ್ದರು, ಆದರೆ ಈ ಬಾರಿ ಕೊರೊನಾ ಮೂರನೇ ಅಲೆಯ ಆತಂಕದ  ಹಿನ್ನಲೆ  ವಾರಾಂತ್ಯದ  ಕರ್ಪ್ಯೂ  ಜಾರಿ ಇರುವ ಹಿನ್ನಲೆ ಅದ್ದೂರಿ ರಥೋತ್ಸವಕ್ಕೆ ಬ್ರೇಕ್ ಹಾಕಲಾಗಿದ್ದು, ದೇವಸ್ಥಾನದ  ಪ್ರಾಂಗಣದಲ್ಲಿ  ಸಾಂಕೇತಿಕವಾಗಿ ಸರಳ ರಥೋತ್ಸವ  ಆಚರಿಸಲಾಯಿತು.

ಜಿಲ್ಲಾಡಳಿತದ ಆದೇಶದಂತೆ ದೇವಸ್ಥಾನದ ಸಿಬ್ಬಂದಿ  ಮತ್ತು ಆರ್ಚಕರು ಸೇರಿದಂತೆ 50 ಜನರಿಗೆ ಮಾತ್ರ ರಥೋತ್ಸವಕ್ಕೆ ಅವಕಾಶ ನೀಡಲಾಗಿತು, ಆದರೆ ಶಾಸಕರು ಸೇರಿದಂತೆ ಅಧಿಕಾರಿಗಳು  ಮತ್ತು ಸ್ಥಳೀಯ  ಮುಖಂಡರು ಮತ್ತು ಮುಖಂಡರ ಬೆಂಬಲಿಗರು  ಸಹ ಹೆಚ್ಚಿನ ಸಂಖ್ಯೆಯಲ್ಲಿ  ರಥೋತ್ಸವದಲ್ಲಿ ಭಾಗವಹಿಸಿದ್ದರು,  ಜನಪ್ರತಿನಿಧಿಗಳೇ ಕೋವಿಡ್  ನಿಯಮ  ಗಾಳಿಗೆ ತೂರಿ ರಥೋತ್ಸವದಲ್ಲಿ ಭಾಗವಹಿಸಿದರು.

ರಥೋತ್ಸವ  ಕಾರ್ಯಕ್ರಮದಲ್ಲಿ ಬಿಡಿಎ ಅಧ್ಯಕ್ಷ  ಎಸ್ ಆರ್ ವಿಶ್ವನಾಥ್ (S R VISHVANATH), ದೇವನಹಳ್ಳಿ  ಶಾಸಕ ನಿಸರ್ಗ ನಾರಾಯಣ ಸ್ವಾಮಿ, ದೊಡ್ಡಬಳ್ಳಾಪುರ  ಶಾಸಕ  ಟಿ.ವೆಂಕಟರಮಣಯ್ಯ , ಜಿಲ್ಲಾಧಿಕಾರಿ ಕೆ, ಶ್ರೀನಿವಾಸ್, ದೊಡ್ಡಬಳ್ಳಾಪುರ ತಾಲ್ಲೂಕಿನ ತಹಶಿಲ್ದಾರ ಮೋಹನ ಕುಮಾರಿ (mohan kumari) ಭಾಗವಹಿಸಿದರು.  ರಥೋತ್ಸವ ನಂತರ ಮಾತನಾಡಿದ  ಶಾಸಕ ನಿಸರ್ಗ  ನಾರಾಯಣ ಸ್ವಾಮಿ  ಹಿಂದಿನಿಂದಲೂ ಘಾಟಿ ಸುಬ್ರಮಣ್ಯಸ್ವಾಮಿ  ರಥೋತ್ಸವವನ್ನು ಜನರು ಬಹಳ ಅದ್ಧೂರಿಯಿಂದ ಆಚರಿಸುತ್ತಿದ್ದರು, ಆದರೆ ಈ ಬಾರಿ  ಅದ್ಧೂರಿ ಆಚರಣೆಗೆ ಕೊರೊನಾ  ಮೂರನೇ ಅಲೆಯ  ಆತಂಕ  ಅವಕಾಶ ನೀಡಿಲ್ಲ ಇದರಿಂದ ಜನರಿಗೂ  ಬೇಸರವಾಗಿದೆ, ಮುಂದಿನ ದಿನಗಳಲ್ಲಿ  ಕೋವಿಡ್  ವೈರಸ್ ದೇಶದಿಂದ ತೊಲಗಿ ಜನರು ಅದ್ಧೂರಿಯಾಗಿ ರಥೋತ್ಸವ ಆಚರಿಸುವಂತೆ ದೇವರು ಅರ್ಶಿವಾದಿಸಬೇಕೆಂದು ಬೇಡಿಕೊಂಡರು.

- Advertisement -

Latest Posts

Don't Miss