Friday, April 11, 2025

Latest Posts

ಸರ್ಕಾರಿ ಬಸ್ ನ್ನು ಬಿಡದ ಕದೀಮರು..! ರಾತ್ರಿ ನಿಲ್ದಾಣದಲ್ಲಿ ನಿಲ್ಲಿಸಿದ್ದ ಬಸ್ ಬೆಳಗಾಗೊದರೊಳಗೆ ಮಾಯ..!

- Advertisement -

ವಿಜಯನಗರ : ಮನೆಯಲ್ಲಿ ನುಗ್ಗಿ ಹಣ ಚಿನ್ನ ಕಳ್ಳತನ ಮಾಡುತ್ತಾರೆ, ದಾರಿಹೋಕರ ಕೊರಳಲ್ಲಿರುವ ಸರ ಹಾಗೂ ಪರ್ಸ್ ಕಳ್ಳತನ ಮಾಡುವುದನ್ನು ಕೇಳಿದ್ದೇವೆ, ನೋಡಿದ್ದೇವೆ.  ಆದರೆ ರಸ್ತೆಯಲ್ಲಿ ನಿಂತಿರುವ ಸರ್ಕಾರಿ ಬಸ್ ಕಳ್ಳತನನ ಮಾಡುವುದನ್ನು ಎಲ್ಲಿಯಾದರೂ ಕೇಳಿದ್ದೀರಿ. ಇದು ನಿಮಗೆ ಕೇಳಲು ಆಶ್ಚರ್ಯ ಅನಿಸಬಹುದು ಆದರೆ ಇದೇ ನಿಜ ಹಾಗಾದರೆ ಈ ಘಟನೆ ನಡೆದಿರುವುದು ಎಲ್ಲಿ ಅಂತ ಹೇಳ್ತಿವಿ ಕೇಳಿ.

ವಿಜಯನಗರ ಜಿಲ್ಲೆಯ ಮರಿಯಮ್ಮನಹಳ್ಳಿ ಪಟ್ಟಣದಲ್ಲಿ ಘಟನೆ ನಡೆದಿದ್ದು. ಬಳ್ಳಾರಿ ಜಿಲ್ಲೆಯ ಸಂಡೂರಿನ ಡಿಪೋಗೆ ಸೇರಿದ ಕೆಎ.35.ಎಫ್ 85 ನಂಬರಿನ ಬಸ್ ಮರಿಯಮ್ಮನಪಾಳ್ಯದಲ್ಲಿ ವಾಸ್ತವ್ಯ ಹೂಡಿ ದೇವಲಾಪುರ, ಗರಗ ಯಶವಂತನಗರದ ಮೂಲಕ ಸಂಡೂರಿಗೆ ತಲುಪಬೇಕಿದ್ದ ಬಸ್ ವಾಸ್ತವ್ಯದ ಸ್ಥಳದಲ್ಲಿ ರಾತ್ರಿ ಡ್ರೈವರ್ ಕಂಡಕ್ಟರ್ ಇಬ್ಬರು ಮಲಗಿದ್ದರು. ರಾತ್ರಿ 1 ರಿಂದ 2 ಗಂಟೆ ಸುಮಾರಿಗೆ ಡ್ರೈವರ್ ಗೆ ಎಚ್ಚರವಾಗಿ ಬಸ್ ನೋಡಿದಾಗ ಇದು ಸ್ಥಳದಲ್ಲಿ ಸುರಕ್ಷಿತವಾಗಿತ್ತು. ಆದರೆ ಬೆಳಿಗ್ಗೆ 5 ಗಂಟೆಗೆ ಸುಮಾರಿಗೆ ಬಸ್ ಕಳ್ಳತನವಾಗಿರುವ ಸುದ್ದಿ ಗೊತ್ತಾಗಿದೆ.

ಸ್ಥಳಕ್ಕೆ ಮರಿಯಮ್ಮನಹಳ್ಳಿ ಪಟ್ಟಣದ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Lokayukta-ಕಲಬುರಗಿಯಲ್ಲಿ ಲೋಕಯುಕ್ತರಿಂದ ಭ್ರಷ್ಟರ ಭೇಟೆ..!

ವಾಲ್ಮಿಕಿ ವೃತ್ತ ಉದ್ಘಾಟನೆ ಮಾಡಿದ ಶಾಸಕ ಕೊತ್ತೂರು ಮಂಜುನಾಥ್

ಡಿಕೆಶಿಗೆ ಲೈವ್ ನಲ್ಲೇ ಪ್ರಶ್ನೆ ಕೇಳಿದ ಸಂಸದ ಪ್ರಜ್ವಲ್ ರೇವಣ್ಣ..!

- Advertisement -

Latest Posts

Don't Miss