ಬೆಂಗಳೂರು: ವಾಲ್ಮೀಕಿ ಸಮುದಾಯಕ್ಕೆ ಮೀಸಲಾತಿ ನೀಡುವಂತೆ ನಡೆಸಿದ ಪ್ರತಿಭಟನೆ ಫಲ ನೀಡಿದ್ದು, ಸರ್ಕಾರ ಮೀಸಲಾತಿ ಕಲ್ಪಿಸಲು ಗ್ರೀನ್ ಸಿಗ್ನಲ್ ನೀಡಿದೆ.
ಫ್ರೀಡಂ ಪಾರ್ಕ್ ನಲ್ಲಿ ನಡೆಯುತ್ತಿದ್ದ ಪ್ರತಿಭಟನೆ ವೇದಿಕೆಗೆ ಬಂದ ಉಪ ಮುಖ್ಯಮಂತ್ರಿ ಡಾ.ಜಿ ಪರಮೇಶ್ವರ್, ವಾಲ್ಮೀಕಿ ಸಮುದಾಯಕ್ಕೆ ಶೇ.7.5% ಮೀಸಲಾತಿ ಕೊಡಲು ಸಹಮತ ವ್ಯಕ್ತವಾಗಿದೆ. ಇನ್ನೆರಡು ತಿಂಗಳಲ್ಲಿ ಬೇಡಿಕೆ ಈಡೇರಿಸಲಾಗುತ್ತೆ. ಸಂಪುಟದಲ್ಲಿ ಚರ್ಚಿಸಿ ಶೇ.7.5% ರಷ್ಟು ಮೀಸಲಾತಿ ಬಗ್ಗೆ ನಿರ್ಧಾರಿಸಲಾಗುವುದು. ಇನ್ನು ಈ ಬಗ್ಗೆ ಆಯೋಗ ಅಥವಾ ಸಮಿತಿ ರಚನೆ ಮಾಡುವ ಬಗ್ಗೆಯೂ ತೀರ್ಮಾನ ಕೈಗೊಳ್ಳಲಾಗುವುದು ಅಂತ ಡಿಸಿಎಂ ಪರಮೇಶ್ವರ್ ಪ್ರತಿಭಟನಾಕಾರರಿಗೆ ಭರವಸೆ ನೀಡಿದ್ರು.
ಇನ್ನು ಬಳಿಕ ಮಾತನಾಡಿದ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಸ್ವಾಮೀಜಿ, ಒಂದು ವೇಳೆ ಡಿಸಿಎಂ ನೀಡಿರುವ ಭರವಸೆ ಈಡೇರಿಸದಿದ್ದಲ್ಲಿ ವಾಲ್ಮೀಕಿ ಸಮುದಾಯದ ಶಾಸಕರು ರಾಜೀನಾಮೆ ನೀಡಲು ಒಪ್ಪಿದ್ದಾರೆ. ರಾಜ್ಯ ಸರ್ಕಾರದ ಮೇಲೆ ನಮಗೆ ಸಂಪೂರ್ಣ ವಿಶ್ವಾಸವಿದೆ. ಬೇಡಿಕೆ ಈಡೇರಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಕೈಗೊಳ್ಳಲಾಗುತ್ತದೆ ಅಂತ ಇದೇ ವೇಳೆ ಎಚ್ಚರಿಕೆ ನೀಡಿದ್ರು.
ಮುಂದಿನ ಚುನಾವಣೆಗೆ ಸಿದ್ದು ಈಗಲೇ ಪ್ಲ್ಯಾನ್ ಮಾಡಿದ್ದಾರಾ..? ಮಿಸ್ ಮಾಡದೇ ಈ ವಿಡಿಯೋ ನೋಡಿ