ಗದಗ: ನಗರದ ಹೃದಯ ಭಾಗದಲ್ಲಿರೋ ಗದಗ ಬೆಟಗೇರಿ ನಗರಸಭೆಯ 54 ವಕಾರ ಸಾಲು ಖಾಸಗಿಯವರಿಗೆ ಪರಭಾರೆ ಆರೋಪ ಹಿನ್ನೆಲೆಯಲ್ಲಿ ಗದಗ ಬೆಟಗೇರಿ ನಗರಸಭೆ ಎದುರು ವಕಾರ ಸಾಲ ಅಭಿವೃದ್ಧಿ ಹೋರಾಟ ಸಮಿತಿಯಿಂದ ಪ್ರತಿಭಟನೆಯನ್ನ ಹಮ್ಮಿಕೊಳ್ಳಲಾಗಿತ್ತು.
ವಕಾರ ಸಾಲು ಖಾಸಗಿಯವರಿಗೆ ಪರಭಾರೆ ಮಾಡ್ತಾರೆನ್ನೋ ಆರೋಪ ಕೇಳಿಬಂದಿದ್ದು ಯಾವುದೇ ಕಾರಣಕ್ಕೂ ನಗರಸಭೆ ಆಸ್ತಿಯನ್ನು ಖಾಸಗಿಯವರಿಗೆ ಪರಭಾರೆ ಮಾಡಬಾರದು ಅದನ್ನ ನಗರಸಭೆಯೇ ಅಭಿವೃಧ್ದಿಪಡಿಸಿ ಅದರಿಂದ ಬರೋ ಆದಾಯದಲ್ಲಿ ಗದಗ ಬೆಟಗೇರಿ ನಗರವನ್ನ ಅಭಿವೃಧ್ಧಿ ಮಾಡಬೇಕೆಂದು ಆಗ್ರಹಿಸಿದ್ರು. ಇನ್ನು ಸ್ಥಳಕ್ಕೆ ಆಗಮಿಸದ ನಗರಸಭೆ ಪೌರಾಯುಕ್ತ ಗಂಗಪ್ಪ ಅವರ ವಿರುಧ್ಧ ಆಕ್ರೋಶ ವ್ಯಕ್ತಪಡಿಸಿ ಪೌರಾಯುಕ್ತರನ್ನ ವಜಾ ಮಾಡಬೇಕೆಂದು ಆಗ್ರಹಿಸಿದ್ರು.
ಗದಗ ನಗರಸಭೆ ಗೇಟ್ ಗೆ ಮುತ್ತಿಗೆ ಹಾಕಿ ಪ್ರತಿಭಟನೆ ಮುಂದಾದಾಗ ಗೇಟ್ ಏರಿದ ಪ್ರತಿಭಟನಾಕಾರರನ್ನ ಪೊಲೀಸರು ತಡೆ ಹಿಡಿದ್ರು. ಇನ್ನು ಪ್ರತಿಭಟನಾಕಾರರ ಒತ್ತಡಕ್ಕೆ ಮಣಿದ ನಗರಸಭೆ ಪೌರಾಯುಕ್ತ ಗಂಗಪ್ಪ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಯಾವುದೇ ಕಾರಣಕ್ಕೂ ಖಾಸಗಿಯವರಿಗೆ ಪರಭಾರೆ ಮಾಡಲ್ಲ ಅನ್ನೋ ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆಯಲಾಯಿತು.
ಈ ಕುರಿತು ಪ್ರತಿಕ್ರಿಯೆ ನೀಡಿರೋ ಸಚಿವ ಎಚ್ ಕೆ ಪಾಟೀಲ್ ಈಗಾಗಲೇ ವಕಾರ ಸಾಲು ವಿಚಾರ ಮುಗಿದ ಅಧ್ಯಾಯ ಅದನ್ನ ಸರ್ಕಾರ ತನ್ನ ಸುಪರ್ದಿಗೆ ತೆಗೆದುಕೊಂಡಿದೆ ಅಂದ್ರು.
ಕನ್ನಡ ಧ್ವಜವನ್ನು ಸರ್ಕಾರಿ ಕಛೇರಿಗಳ ಮೇಲೆ ಹಾರಿಸಲು ಒತ್ತಾಯಿಸಿ ಪತ್ರ; ಭೀಮಪ್ಪ ಗಡಾದ್..!
ನೋಂದಣಿದಾರರ ಬ್ಯಾಂಕ್ ಖಾತೆಯಿಂದ ಅಕ್ರಮ ಹಣ ವರ್ಗಾವಣೆ ಆರೋಪಿಗಳ ಬಂಧನ..!