Sunday, September 8, 2024

Latest Posts

ಮಧ್ಯಾಹ್ನದ ಬಿಸಿಯೂಟ ಯೋಜನೆಯಡಿ ಮಕ್ಕಳಿಗೆ ಹಬ್ಬದ ದಿನ, ವಿಶೇಷ ಸಂದರ್ಭದಲ್ಲಿ ವಿಶೇಷ ಭೋಜನ : ಶಿಕ್ಷಣ ಇಲಾಖೆ ಸುತ್ತೋಲೆ

- Advertisement -

ಬೆಂಗಳೂರು: ಮಧ್ಯಾಹ್ನದ ಬಿಸಿಯೂಟ ಯೋಜನೆಯಡಿ ಕರ್ನಾಟಕದ ಎಲ್ಲಾ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ಮಕ್ಕಳಿಗೆ ‘ವಿಶೇಷ ಭೋಜನ  ಮತ್ತು ಶಾಲೆಗಾಗಿ ನಾವು ನೀವು’ ಕಾರ್ಯಕ್ರಮ ಆಯೋಜಿಸಲು ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ. ಹಬ್ಬದ ದಿನದಂದು ಹಾಗೂ ವಿಶೇಷ ಸಂದರ್ಭಗಳಲ್ಲಿ ಈ ಸವಲತ್ತು ಮಕ್ಕಳಿಗೆ ದೊರಕಲಿದೆ.

“ಪ್ರಜಾರಾಜ್ಯ”ಚಿತ್ರದ ಟೀಸರ್ ಬಿಡುಗಡೆ ಮಾಡಿದ ನಟ ದೇವರಾಜ್

ಸಾರ್ವಜನಿಕರು, ಟ್ರಸ್ಟ್, ಸಂಘ ಸಂಸ್ಥೆಗಳು , ಎಸ್‌ಡಿಎಂಸಿಗಳು ಸೇರಿದಂತೆ ಎಲ್ಲರೂ ಈ ಕಾರ್ಯಕ್ರಮದಡಿ ಆರ್ಥಿಕ ನೇರವು, ವಿಶೇಷ ಪೌಷ್ಠಿಕ ಆಹಾರ ಪದಾರ್ಥಗಳನ್ನು ಮಕ್ಕಳಿಗೆ ನೀಡಬಹುದು. ಆದರೆ ಈ ರೀತಿ ನೀಡುವ ಆಹಾರ ಸಂಪೂರ್ಣ ಸಸ್ಯಾಹಾರವಾಗಿರಬೇಕು. ಇಲಾಖೆ ಸೂಚಿಸಿರುವ ಆಹಾರ ಪದಾರ್ಥಗಳು ಪಟ್ಟಿಯಲ್ಲಿರಬೇಕು ಎಂದು ಶಿಕ್ಷಣ ಇಲಾಖೆ ಆದೇಶಿಸಿದೆ.

ರಾಜ್ಯಗಳ ಪುನರ್ ವಿಂಗಡನಾ ಕಾಯ್ದೆ ನಿರ್ಣಯ ಪ್ರಕರಣದ ಬಗ್ಗೆ ನಾನು ವ್ಯಾಖ್ಯಾನಿಸುವುದಿಲ್ಲ: ಸಿಎಂ ಬೊಮ್ಮಾಯಿ

ಮಕ್ಕಳಲ್ಲಿ ಯಾವುದೇ ವರ್ಗ, ಜಾತಿ , ಮತ, ಲಿಂಗ, ಭೇದವಿಲ್ಲದೆ ನಾವೆಲ್ಲರೂ ಒಂದು ಎಂಬ ಏಕತಾ ಭಾವನೆಯನ್ನು ಬೆಳೆಸುವುದು ಈ ಯೋಜನೆಯ ಉದ್ದೇಶವಾಗಿದೆ. ಸಮಾಜದಲ್ಲಿ ಒಗ್ಗಟ್ಟು, ಸಹಬಾಳ್ವೆ, ಬಾಂಧವ್ಯ, ಐಕ್ಯತೆ ಮೂಡಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆವಾಗಿದೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ. ಈ ಯೋಜನೆ ಬೇರೆ ಹಲವು ರಾಜ್ಯಗಳಲ್ಲಿ ಜಾರಿಯಲ್ಲಿದ್ದು, ಪ್ರಸಕ್ತ ಸಾಲಿನಿಂದ ರಾಜ್ಯದಲ್ಲೂ ಯೋಜನೆ ಜಾರಿಗೆ ತರುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಡಾ.ಆರ್‌.ವಿಶಾಲ್‌ ಸುತ್ತೋಲೆ ಹೊರಡಿಸಿದ್ದಾರೆ.

ಸಕಲೇಶಪುರ ಅಪರಾಧ ಚಟುವಟಿಕೆಯಲ್ಲಿ ಭಾಗಿಯಾದ ಇಬ್ಬರ ಗಡಿಪಾರು : ಉಪ ಪೊಲೀಸ್ ಅಧೀಕ್ಷಕ ಹೆಚ್ಎನ್ ಮಿಥುನ್ ಆದೇಶ

ಬೈಕ್ ನಲ್ಲಿ ಬಂದ ಇಬ್ಬರಿಂದ 17 ವರ್ಷದ ಬಾಲಕಿ ಮೇಲೆ ಆಸಿಡ್ ದಾಳಿ

- Advertisement -

Latest Posts

Don't Miss