Wednesday, August 20, 2025

Latest Posts

ನೀಟ್ ಪರೀಕ್ಷೆಗೆ ಸರ್ಕಾರದಿಂದ ಉಚಿತವಾಗಿ ತರಬೇತಿ ನೀಡಲು ಚಿಂತನೆ: ಸಚಿವ ಮಧು ಬಂಗಾರಪ್ಪ

- Advertisement -

Bengaluru: ನೀಟ್ ಪರೀಕ್ಷೆಗೆ ಸರ್ಕಾರದಿಂದ ಉಚಿತವಾಗಿ ತರಬೇತಿ ನೀಡಲು ಚಿಂತನೆ ನಡೆಸಲಾಗಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.

ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವರು, ಇದೀಗ ನೀಟ್ ಪರೀಕ್ಷೆ ನಡೆದಿದ್ದು, ಬಂದ ಫಲಿತಾಂಶದಿಂದ ಹಲವು ವಿದ್ಯಾರ್ಥಿಗಳು ಗೊಂದಲಕ್ಕೀಡಾಗುವಂತೆ ಮಾಡಿದೆ. ಹಾಗಾಗಿ ನುರಿತ ಉಪನ್ಯಾಸಕರಿಂದ ಸರ್ಕಾರ ನೀಟ್ ಪರೀಕ್ಷೆಗಾಗಿ ಉಚಿತ ತರಬೇತಿ ನೀಡಲು ಚಿಂತನೆ ನಡೆಸಿದೆ. ತರಬೇತಿ ಈ ರೀತಿ ಉಚಿತ ತರಬೇತಿ ನೀಡುವುದರಿಂದ ಬಡ ವಿದ್ಯಾರ್ಥಿಗಳಿಗೆ ಸಹಾಯವಾಗುತ್ತದೆ ಎಂದು ಮಧು ಬಂಗಾರಪ್ಪ ಹೇಳಿದ್ದಾರೆ.

ಪ್ರಸ್ತುತ ನೀಟ್ ಪರೀಕ್ಷೆಯಲ್ಲಾದ ತೊಂದರೆಯಿಂದ, ವಿದ್ಯಾರ್ಥಿಗಳು ಗೊಂದಲದಲ್ಲಿದ್ದಾರೆ. ಇಂಥ ತೊಂದರೆಗಳು ಕೊನೆಗೊಳ್ಳಬೇಕಿದೆ. ಈ ರೀತಿ ವಾಮಮಾರ್ಗದಿಂದ ಪ್ರಶ್ನೆ ಪತ್ರಿಕೆ ಸೋರಿಯಾದರೆ, ಉತ್ತಮ ವಿದ್ಯಾರ್ಥಿಗಳ ಜೀವನ ಹಾಳಾಗುತ್ತದೆ. ಅವರಿಗೆ ಮೋಸವಾದಂತಾಗುತ್ತದೆ. ಹಾಗಾಗಿ ಈ ಬಗ್ಗೆ ಸರಿಯಾಗಿ ಚರ್ಚೆ ಮಾಡಿ, ಉತ್ತಮ ನಿರ್ಧಾರ ಕೈಗೊಳ್ಳಬೇಕಿದೆ ಎಂದಿದ್ದಾರೆ.

ಈ ಹಿಂದೆ ನಮ್ಮ ಸರ್ಕಾರವಿದ್ದಾಗ, 5 ಸಾವಿರ ಶಿಕ್ಷಕರ ನೇಮಕಾತಿಯಾಗಿತ್ತು. ಈ ಬಾರಿ ನಾವು ಶಾಲೆಗೆ ಸರಿಯಾದ ಸಮಯಕ್ಕೆ ಪಠ್ಯ ಪುಸ್ತಕ, ಸಮವಸ್ತ್ರ ಸಿಗುತ್ತಿದೆ. ಉತ್ತೀರ್ಣರಾದ ಮಕ್ಕಳಿಗೆ ಕಾಲೇಜುಗಳಿಗೆ ಪ್ರವೇಶ ಸಿಗಲಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.

11 ಲಕ್ಷ ಮೌಲ್ಯದ 202 ಸೈಲೆನ್ಸರ್ ನಾಶ ಮಾಡಿದ್ದೇವೆ‌, ನಿಯಮ ಉಲ್ಲಂಘಿಸಿದರೆ ಹುಷಾರ್: ಕಮೀಷನರ್ ಎಚ್ಚರಿಕೆ

ಚೆನ್ನಮ್ಮ ವೃತ್ತದ ಬಳಿಯಲ್ಲಿ 200ಕ್ಕೂ ಅಧಿಕ ಸೈಲೆನ್ಸರ್ ನಾಶ: ಕರ್ಕಶ ಶಬ್ದ ಮಾಡಿದರೇ ಹುಷಾರ್..!

ಡಾ.ಸೂರಜ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣ: ಸಂತ್ರಸ್ತನ ವಿರುದ್ಧ ಪ್ರಕರಣ ದಾಖಲು

- Advertisement -

Latest Posts

Don't Miss