Friday, April 26, 2024

Latest Posts

ಇಂದೂ ಪಾಲನೆಯಗಲಿಲ್ಲ ರಾಜ್ಯಪಾಲರ ಸೂಚನೆ…!

- Advertisement -

ಬೆಂಗಳೂರು: ವಿಶ್ವಾಸಮತ ಯಾಚನೆ ಕುರಿತಾಗಿ ಮೈತ್ರಿ ಮತ್ತು ಬಿಜೆಪಿ ಸದಸ್ಯರ ಜಂಗೀ ಕುಸ್ತಿ ಇನ್ನೂ ಮುಂದುವರಿದಿದೆ. ಈ ಮೂಲಕ ಇಂದು ಮಧ್ಯಾಹ್ನದ ವೇಳೆಗೆ ವಿಶ್ವಾಸಮತ ಯಾಚನೆ ಪ್ರಕ್ರಿಯೆ ಪೂರ್ಣಗೊಳಿಸಿ ಅಂತ ರಾಜ್ಯಪಾಲರು ನೀಡಿದ್ದ ಸೂಚನೆ ಪಾಲನೆಯಾಗಲಿಲ್ಲ.

ಇಂದಾದರೂ ಸಿಎಂ ವಿಶ್ವಾಸಮತಯಾಚನೆ ಮಾಡುತ್ತಾರೆ ಅಂತ ತುದಿಗಾಲಲ್ಲಿ ಕಾದು ಕುಳಿತಿದ್ದ ಬಿಜೆಪಿಗೆ ಮತ್ತೆ ಹಿನ್ನೆಯಾಗಿದೆ. ಇಂದು ಮಧ್ಯಾಹ್ನ 1.30ರೊಳಗೆ ವಿಶ್ವಾಸಮತ ಯಾಚನೆ ಪ್ರಕ್ರಿಯೆ ಪೂರ್ಣಗೊಳಿಸಿ ಅಂತ ರಾಜ್ಯಪಾಲರು ನೀಡಿದ್ದ ಸೂಚನೆಗೆ ಸದನದಲ್ಲಿ ಕಾಂಗ್ರೆಸ್-ಜೆಡಿಎಸ್ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ್ರು. ಲೋಕಸಭೆಯಲ್ಲಿ ವಿಶ್ವಾಸಮತ ಯಾಚನೆಗೆ 10 ದಿನಗಳ ಕಾಲ ಅವಕಾಶ ನೀಡಲಾಗಿತ್ತು. ಆದ್ರೆ ರಾಜ್ಯದ ವಿಧಾನಸಭೆ ವಿಷಯದಲ್ಲೇಕೆ ಆತುರ ಅಂತ ಪ್ರಶ್ನಸಿರುವ ಮೈತ್ರಿ ಸದಸ್ಯರು ರಾಜ್ಯಪಾಲರ ಸೂಚನೆ ವಿರುದ್ಧ ಹರಿಹಾಯ್ದಿದ್ದಾರೆ. ಅಲ್ಲದೆ ಗೋ ಬ್ಯಾಕ್ ಗವರ್ನರ್ ಅಂತ ಘೋಷಣೆ ಕೂಗುವ ಮೂಲಕ ರಾಜ್ಯಪಾಲರ ಸೂಚನೆಯನ್ನು ಕಾಂಗ್ರೆಸ್-ಜೆಡಿಎಸ್ ಸದಸ್ಯರು ಧಿಕ್ಕರಿಸಿದ್ದಾರೆ.ಇನ್ನು ನಮ್ಮ ಸದಸ್ಯರು ಸದನದಲ್ಲಿ ಮಾತನಾಡಲು ಬಯಸಿದ್ದು ಅವರೆಲ್ಲರೂ ತಮ್ಮ ಚರ್ಚೆ ಮಂಡಿಸಿದ ಬಳಿಕವೇ ವಿಶ್ವಾಸಮತ ಯಾಚನೆಗೆ ನಾವು ಮುಂದಾಗಲಿದ್ದೇವೆ ಅಂತ ಮೈತ್ರಿ ಸದಸ್ಯರು ಕಡ್ಡಿ ತುಂಡು ಮಾಡುವಂತೆ ಹೇಳಿಬಿಟ್ಟಿದ್ದಾರೆ.

ಈ ಕುರಿತು ಸ್ಪೀಕರ್ ಕೂಡ ಸಂವಿಧಾನದಲ್ಲಿ ಎಲ್ಲಾ ಸದಸ್ಯರಿಗೂ ಸದನದಲ್ಲಿ ಮಾತನಾಡುವ ಹಕ್ಕಿದೆ ಅಂತ ಮೈತ್ರಿ ಸದಸ್ಯರ ಮನವಿಯನ್ನು ಪುರಸ್ಕರಿಸಿ ಅವರೆಲ್ಲರಿಗೂ ಸದನದಲ್ಲಿ ಮಾತನಾಡುವ ಅವಕಾಶ ನೀಡಿತ್ತಿದ್ದಾರೆ. ನಿನ್ನೆಯ ಕಲಾಪದಂತೆ ಇಂದೂ ಸಹ ಸದಸ್ಯರ ಚರ್ಚೆ ಸದನದ ಕಾಲಹರಣ ಮಾಡಿದೆ. ಈ ಮಧ್ಯೆ ರಾಜ್ಯುಪಾಲರು ಮಧ್ಯಾಹ್ನ 1.30ರೊಳಗೆ ವಿಶ್ವಾಸಮತ ಯಾಚನೆ ಪ್ರಕ್ರಿಯೆ ಪೂರ್ಣಗೊಳಿಸಬೇಕೆಂಬ ಸೂಚನೆಯನ್ನು ಇಂದೂ ಸಹ ಪಾಲನೆ ಮಾಡಲಾಗಲಿಲ್ಲ. ಸದನದಲ್ಲಿ ರಾಜ್ಯಪಾಲರ ಈ ಸೂಚನೆಗೆ ಭಾರೀ ವಿರೋಧ ವ್ಯಕ್ತವಾಗುತ್ತಿರೋ ಹಿನ್ನೆಲೆಯಲ್ಲಿ ಸ್ಪೀಕರ್ ರಮೇಶ್ ಕುಮಾರ್ ರಾಜ್ಯಪಾಲರ ಭೇಟಿಗೆ ಸಮಯ ಕೇಳಿದ್ದು ಅವರೊಂದಿಗೆ ಚರ್ಚಿಸಲಿದ್ದಾರೆ. ಹೀಗಾಗಿ ಸದನವನ್ನು ಮಧ್ಯಾಹ್ನ 3 ಗಂಟೆ ವರೆಗೂ ಮುಂದೂಡಲಾಗಿದೆ.

- Advertisement -

Latest Posts

Don't Miss