ಬೆಂಗಳೂರು: 2022-23ನೇ ಸಾಲಿನ ಸರ್ಕಾರಿ ನೌಕರರ ವರ್ಗಾವಣೆಗೆ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಮೇ.1ರ ಇಂದಿನಿಂದ ವರ್ಗಾವಣೆ ಆರಂಭಗೊಂಡು, ಜೂನ್.15ರವರೆಗೆ ನಡೆಯಲಿದೆ. ಈ ವರ್ಗಾವಣೆಯ ಹೊಣೆಗಾರಿಕೆಯನ್ನು ಆಯಾ ಇಲಾಖಾ ಸಚಿವರಿಗೆ ನೀಡಲಾಗಿದೆ.
ಈ ಕುರಿತಂತೆ ರಾಜ್ಯ ಸರ್ಕಾರದಿಂದ ಗೆಜೆಟ್ ಅಧಿಸೂಚನೆ ಹೊರಡಿಸಲಾಗಿದೆ. ಮೇ.1ರಿಂದ ಜೂನ್ 15ರವರೆಗೆ ಸಾರ್ವತ್ರಿಕ ವರ್ಗಾವಣೆಗೆ ಅನುಮತಿ ನೀಡಲಾಗಿದೆ. ಗ್ರೂಪ್ ಎ, ಬಿ, ಸಿ ಹಾಗೂ ಡಿ ವರ್ಗದ ಅಧಿಕಾರಿ, ನೌಕರರ ವರ್ಗಾವಣೆಗೆ ಅನುಮತಿಸಲಾಗಿದೆ ಎಂದು ತಿಳಿಸಿದೆ.
ಇನ್ನೂ ಈ ವರ್ಗಾವಣೆಯ ವೇಳೆಯಲ್ಲಿ ಕಾರ್ಯನಿರತ ವೃಂದ ಬಲದ ಶೇ.6ರಷ್ಟು ಮೀರದಂತೆ ವರ್ಗಾವಣೆ ನಡೆಸುವಂತೆ ಸೂಚಿಸಿದೆ. ಗ್ರೂಪ್ ಎ ವರ್ಗದ ಅಧಿಕಾರಿಗಳ ವರ್ಗಾವಣೆ ಹೊಣೆಗಾರಿಕೆಯನ್ನು ಸಿಎಂ ಬದಲಾಗಿ ಸಚಿವರ ಹೆಗಲಿಗೆ ವಹಿಸಲಾಗಿದೆ.




