Friday, April 18, 2025

Latest Posts

“ನಾವು ಯಾವುದಕ್ಕೂ ಹೆದರುವುದಿಲ್ಲ,ಮುಷ್ಕರ ನಡೆಯುತ್ತದೆ”: ಷಡಕ್ಷರಿ

- Advertisement -

State News:

Feb:28:ಸರಕಾರಿ ನೌಕರರ ಮುಷ್ಕರ ಮಾರ್ಚ್ 1ರಿಂದ ಪ್ರಾರಂಭವಾಗಲಿದೆ ಎಂದು ಸರಕಾರಿ ನೌಕರರ  ಸಂಘದ ಅಧ್ಯಕ್ಷ ಷಡಕ್ಷರಿ ಹೇಳಿಕೆ ನೀಡಿದರು. ನಮ್ಮನ್ನು ಅಮಾನತು ಮಾಡಲಿ, ಕೆಲಸದಿಂದ ವಜಾ ಮಾಡಲಿ, ಎಸ್ಮಾ ಜಾರಿಗೆ ತರಲಿ, ಆದರೆ ನಾವು ಯಾವುದಕ್ಕೂ ಹೆದರುವುದಿಲ್ಲ, ಮುಷ್ಕರ ನಡೆಯುತ್ತದೆ ಎಂದು ಸರಕಾರಿ ನೌಕರರ ಸಂಘದ ಅಧ್ಯಕ್ಷ ಷಡಕ್ಷರಿ  ಹೇಳಿದರು. ಸರಕಾರಿ ನೌಕರರ  ಹೋರಾಟಕ್ಕೆ 40 ಸಂಘಟನೆಗಳು ಬೆಂಬಲ ನೀಡಿದೆ. ಬುಧವಾರದಿಂದ ಎಲ್ಲಾ ಸರಕಾರಿ ಕಚೇರಿಗಳನ್ನು ಬಂದ್ ಮಾಡಿ ಪ್ರತಿಭಟನೆ ಮಾಡುತ್ತೇವೆ. ಸರಕಾರದ ಯಾವುದೇ ಭರವಸೆಗಳಿಗೆ ಬಗ್ಗಲ್ಲ. ಅಧಿಕೃತ ಆದೇಶದೊಂದಿಗೆ ಬರದ ಹೊರತು ಪ್ರತಿಭಟನೆ ಕೈ ಬಿಡಲ್ಲ. ಸಿಎಂ ನಮ್ಮ ಜೊತೆ ಈಗ ಮಾತನಾಡಿಲ್ಲ. ಆದರೆ ಬಜೆಟ್ ವೇಳೆ ಪದಾಧಿಕಾರಿಗಳು ಹೋದಾಗ ಜಾರಿ ಮಾಡುತ್ತೇವೆ ಎಂದು ಹೇಳಿದ್ದರು ಅಷ್ಟೇ. ಆ ಬಳಿಕ ಅವರು ನಮಗೆ ಮನವರಿಕೆ ಮಾಡಿಕೊಟ್ಟಿಲ್ಲ.ಆದ್ದರಿಂದ ಮುಷ್ಕರ ಮಾಡುತ್ತೇವೆ ಎಂದುಹೇಳಿಕೆ ನೀಡಿದರು.

ಬೆಂಗಳೂರು: ಹೆಚ್ ಡಿ ದೇವೇಗೌಡ ಆಸ್ಪತ್ರೆಗೆ ದಾಖಲು…!

ಸರಕಾರಕ್ಕೆ ಕಂಟಕವಾಗುತ್ತಾ ಬಂಟರ ಅಸಮಾಧಾನ..?!

ಹೆಚ್ಚಾದ ಬೀದಿ ನಾಯಿ ಹಾವಳಿ-ನಗರಸಭೆಯಲ್ಲಿ ಅಧಿಕಾರಿಗಳ ಕಚ್ಚಾಟ

- Advertisement -

Latest Posts

Don't Miss