ನಾಯಕನ ಹಟ್ಟಿ: ಶಿಕ್ಷಣ ಕ್ಷೇತ್ರದಲ್ಲಿ ಅಭಿವೃದ್ದಿ ಮಾಡಬೇಕು ರಾಜ್ಯದಲ್ಲಿ ಯಾವೊಬ್ಬ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ರಾಜ್ಯ ಸರ್ಕಾರ ಪ್ರತಿ ಬಜೆಟ್ ನಲ್ಲಿಯೂ ಶಿಕ್ಷಣಕ್ಕಾಗಿ ಅನುದಾನವನ್ನುಬಿಡುಗಡೆ ಮಾಡುತ್ತಿದ್ದಾರೆ ಆದರೆ ಇಲ್ಲಿ ಮಾತ್ರ ಸರ್ಕಾರಿ ಶಾಲೆಗಳು ಅಭಿವೃದ್ದಿ ಹೊಂದದೆ ಹಿಂದುಳಿದಿವೆ. ಅದು ಎಲ್ಲಿ ಅಂತಿರಾ ಈ ಸ್ಟೋರಿ ಓದಿ.
ಚಿತ್ರದುರ್ಗ ಜಿಲ್ಲೆಯ ನಾಯಕನ ಹಟ್ಟಿ ಪಟ್ಟಣದಲ್ಲಿನ ಶಾಲೆಗಳು ಮಾತ್ರ ಅಭಿವೃದ್ದಿಯಿಂದ ವಂಚಿತವಾಗಿವೆ. ಇಲ್ಲಿರುವ ಸರಕಾರಿ ಹಿರಿಯ ಪ್ರಾಧಮಿಕ ಶಾಲೆಯಲ್ಲಿ 165 ವಿದ್ಯಾರ್ಥಿಗಳಿದ್ದು ಕೇವಲ 4 ಕೊಠಡಿಗಳಲ್ಲಿ ವಿದ್ಯಾಭ್ಯಾಸ ಮಾಡುವ ಕಠಿಣ ಪರಿಸ್ಥಿತಿ ಎದುರಾಗಿದೆ.
ಸಮಸ್ಯೆಗಳು ಒಂದಲ್ಲಾ ಎರಡಲ್ಲಾ, ಕೊಠಡಿಗಳು ಮತ್ತು ಪೀಠೋಪಕರಣ ಕೊರತೆ, ಶಿಕ್ಷಕರ ಕೊರತೆ ಮಕ್ಕಳು ನೆಲದ ಮೇಲೆ ಕುಳಿತು ಪಾಠ ಕೇಳುವುದು ಸೇರಿ ಹಲವಾರು ಸಮಸ್ಯೆಗಳು ಇದ್ದು ಹಾಗೂ ಕೊಠಡಿಯ ಮೇಲ್ಚಾವಣಿ ರಿಪೇರಿಗೆ ಬಂದಿದ್ದು ಸಾಕಷ್ಟು ಬಾರಿ ರಿಪೇರಿ ಮಾಡುವಂತೆ ಮನವಿ ಪತ್ರ ಬರೆದರೂ ಅಭಿವೃದ್ದಿ ಕಾರ್ಯ ನಡೆಯುವ ಲಕ್ಷಣಗಳು ಕಾಣುತ್ತಿಲ್ಲ.
ಇನ್ನು ಮುಂದಾದರು ಮಕ್ಕಳ ರಕ್ಷಣೆ ಮತ್ತು ಹಿತ ದೃಷ್ಟಿಯಿಂದ ಶಾಲೆಗೆ ಅಭಿವೃದ್ದಿ ಕಾರ್ಯಕ್ಕೆ ಮುಂದಾಗುವಂತೆ ಎಸ್ಡಿಎಂಸಿ ಅಧ್ಯಕ್ಷರು ಸೇರಿ ಗ್ರಾಮಸ್ಥರು ಅಧಿಕಾರಿಗಳಿಗೆ ಒತ್ತಾಯಿಸಿದರು.
Athani: ರಮೇಶ್ ಜಾರಕಿಹೊಳಿ ಆರೋಪಕ್ಕೆ ಟಾಂಗ್ ಕೊಟ್ಟ ಶಾಸಕ ಲಕ್ಷ್ಮಣ್ ಸವದಿ..!