ಪಿಎಸ್ಐ ಹುದ್ದೆ ಹಗರಣದ ಮೂಲ ಕಿಂಗ್ ಪಿನ್ ಟಚ್ ಮಾಡಿದ್ರೇ ಸರ್ಕಾರವೇ ಬೀಳುತ್ತೆ – ಹೆಚ್ ಡಿಕೆ ಹೊಸ ಬಾಂಬ್

ಹಾಸನ: ರಾಜ್ಯದಲ್ಲಿ ಪಿಎಸ್ಐ ನೇಮಕಾತಿ ಅಕ್ರಮ ಕುರಿತಂತೆ ಸಿಐಡಿ ತನಿಖೆ ನಡೆಯುತ್ತಿದೆ. ಈ ಸಂದರ್ಭದಲ್ಲಿ ಸಿಕ್ಕವರೆಲ್ಲಾ ಸಣ್ಣ ಸಣ್ಣವರು. ಅಕ್ರಮ ಗ್ಯಾಂಗ್ ಲೀಡರ್ ಬೇರೆಯೇ ಇದ್ದಾರೆ. ಅವರ ಹೆಸರು ಹೇಳೋದಕ್ಕೆ ಸರ್ಕಾರ ಸಾಧ್ಯವೇ.? ಒಂದು ವೇಳೆ ಆ ಕಿಂಗ್ ಪಿನ್ ಟಚ್ ಮಾಡೋದಕ್ಕೆ ಹೋದ್ರೇ.. ರಾಜ್ಯ ಸರ್ಕಾರವೇ ಬೀಳುತ್ತದೆ ಎಂಬುದಾಗಿ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೊಸ ಬಾಂಬ್ ಸಿಡಿಸಿದ್ದಾರೆ.

ಹಾಸನದ ಚನ್ನರಾಯಪಟ್ಟಣದಲ್ಲಿ ಇಂದು ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಪಿಎಸ್ಐ ಪರೀಕ್ಷೆ ಅಕ್ರಮದ ಮೂಲಕ ಕಿಂಗ್ ಪಿನ್ ನ ಟಚ್ ಮಾಡೋದಕ್ಕೆ ಹೋದ್ರೇ ಸರ್ಕಾರವೇ ಬೀಳಲಿದೆ. ಆ ಕಿಂಗ್ ಪಿನ್ ನಮ್ಮ ರಾಜ್ಯದ ಭವಿಷ್ಯ ನಾಯಕರೇ ಆಗಿದ್ದಾರೆ ಎಂದು ಹೊಸ ಸ್ಪೋಟಕ ಬಾಂಬ್ ಸಿಡಿಸಿದರು.

ಸಹಾಯಕ ಪ್ರಾಧ್ಯಾಪಕರ ನೇಮಕಾತಿಯಲ್ಲಿಯೂ ಅಕ್ರಮ ನಡೆದಿದೆ. ಪಿಎಸ್ಐ ನೇಮಕಾತಿಯಲ್ಲಿಯೂ ಬಾರಿ ಡೀಲ್ ನಡೆದಿದೆ. ಪ್ರತಿ ನೇಮಕಾತಿಯಲ್ಲಿಯೂ ಅಕ್ರಮ ನಡೆದಿದೆ. ಒಂದೊಂದು ಹುದ್ದೆಗೂ ಲಕ್ಷ ಲಕ್ಷ ಡೀಲ್ ನಡೆಸಲಾಗಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

About The Author