- Advertisement -
National News:
ಇದೀಗ ಗೌತಮ್ ಅದಾನಿ ವಿಶ್ವದ 2ನೇ ಶ್ರೀಮಂತರಾಗಿದ್ದಾರೆ. ಭಾರತದ ಕೈಗಾರಿಕೋದ್ಯಮಿ, ಅದಾನಿ ಗ್ರೂಪ್‌ನ ಅಧ್ಯಕ್ಷ ಗೌತಮ್ ಅದಾನಿ ಅವರು ಅಮೆಜಾನ್‌ನ ಮುಖ್ಯಸ್ಥ ಜೆಫ್ ಬೆಜೋಸ್ ಅವರನ್ನು ಹಿಂದಿಕ್ಕಿ ಇದೀಗ ವಿಶ್ವದ 2ನೇ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಅಮೆರಿಕದ ನಿಯತಕಾಲಿಕೆ ಫೋರ್ಬ್ಸ್ ಪ್ರಕಾರ, ಟೆಸ್ಲಾ ಸಿಇಒ ಎಲೋನ್ ಮಸ್ಕ್ ಅವರು 273.5 ಬಿಲಿಯನ್ ಡಾಲರ್ ನಿವ್ವಳ ಆಸ್ತಿ ಹೊಂದಿದ್ದು, ವಿಶ್ವದ ಶ್ರೀಮಂತ ವ್ಯಕ್ತಿಯ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿಯೇ ಉಳಿದುಕೊಂಡಿದ್ದಾರೆ. ಗೌತಮ್ ಅದಾನಿ ಅವರು ಪ್ರಸ್ತುತ 154.7 ಬಿಲಿಯನ್ ಡಾಲರ್ ಆಸ್ತಿಯನ್ನು ಹೊಂದಿದ್ದು, ವಿಶ್ವದ 2ನೇ ಶ್ರೀಮಂತ ವ್ಯಕ್ತಿಯೆನಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ಇನ್ನೂ ಮಾಸಿಲ್ಲ ಅಸ್ಪೃಷ್ಯತೆ ಎಂಬ ಅನಾಚಾರ…! ಮಡಿಕೆ ನೀರೇ ದಲಿತನಿಗೆ ವಿಷವಾಯಿತೇ..?!
- Advertisement -