ಚಿಕ್ಕಬಳ್ಳಾಪುರ: ಜಿಲ್ಲೆಯ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಕರ್ನಾಟಕ ಸರ್ಕಾರದ ಮಾಜಿ ಸಚಿವರಾದ ಡಾ. ಕೆ. ಸುಧಾಕರ್ ಅವರ ನೇತೃತ್ವದಲ್ಲಿ ನೂತನ ಗ್ರಾಮ ಪಂಚಾಯತ್ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರುಗಳ ಅಭಿನಂದನಾ ಸಮಾರಂಭ ಹಾಗೂ ಔತಣ ಕೂಟ ನೆರವೇರಿತು.
ಈ ಸಂದರ್ಭದಲ್ಲಿ ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ರಾಜೇಶ್ ಜೀ, ಚಿಕ್ಕಬಳ್ಳಾಪುರ ಜಿಲ್ಲೆಯ ಜಿಲ್ಲಾಧ್ಯಕ್ಷರು ಹಾಗೂ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಸಮಾಜ ಸೇವಕರಾದ ಶ್ರೀ ರಾಮಲಿಂಗಪ್ಪನವರು, ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಶ್ರೀ ಕೇಶವ ರೆಡ್ಡಿ ರವರು, ಮಾಜಿ ಶಾಸಕರಾದ ಶ್ರೀ. ರಾಜಣ್ಣರವರು, ಮಾಜಿ ಶಾಸಕರು ಶ್ರೀಮತಿ ಅನುಸೂಯಮ್ಮರವರು, ಮರುಳಕುಂಟೆ ಶ್ರೀ. ಕೃಷ್ಣಮೂರ್ತಿ ರವರು, ಮಾಜಿ ನಿಗಮ ಮಂಡಲ ಅಧ್ಯಕ್ಷರು, ನೂತನ ಗ್ರಾಮ ಪಂಚಾಯತ್ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು, ಮಂಡಲ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ವಿವಿಧ ಜಿಲ್ಲಾ ಹಾಗೂ ಮಂಡಲ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.
Electricity Problem :ವಿದ್ಯುತ್ ಕಡಿತದಿಂದಾಗಿ ಕಂಗಾಲಾದ ಅನ್ನದಾತರು.