ನಾಡಹಬ್ಬ ಮೈಸೂರು ದಸರಾ ವೈಭವ ಭಾರೀ ಸಂಭ್ರಮದಲ್ಲಿ ನಡೆಯುತ್ತಿದೆ. ಅರಮನೆ ಆವರಣದಲ್ಲಿ ಸಿಂಹಾಸನಾರೋಹಣ, ಚಾಮುಂಡೇಶ್ವರಿ ದೇವಿಯ ಪೂಜೆ, ದಸರಾ ಹಬ್ಬದ ಸಾಂಪ್ರದಾಯಿಕ ವೈಭವವನ್ನು ತೋರಿಸುತ್ತಿವೆ. ಪ್ರತಿರಾತ್ರಿ ಬೆಳಗುವ ಅರಮನೆ ಮತ್ತು ಅದ್ಭುತ ಲೇಸರ್ ಶೋ ಸಾವಿರಾರು ಪ್ರವಾಸಿಗರನ್ನು ಸೆಳೆಯುತ್ತಿದೆ. ಇಂದು ವಿಶೇಷವಾಗಿ ಅರಮೆನ ಮುಂಬಾಗದಲ್ಲಿ ಮಹಿಳಾ ಮತ್ತು ಮಕ್ಕಳ ದಸರಾ ಆಚರಿಸಲಾಯ್ತು. ಅರಮನೆ ಮುಂಬಾಗದಲ್ಲಿ ರಂಗೋಲಿ ಸ್ಪರ್ಧೆಯನ್ನು ಏರ್ಪಾಡಿಸಲಾಗಿತ್ತು.
ದಸರಾ ಸಂದರ್ಭದಲ್ಲಿ ಆಹಾರ ಮೇಳ, ಹೂವುಗಳ ಪ್ರದರ್ಶನ, ಕಲಾ-ಹಸ್ತಕಲಾ ಮೇಳ ಮೈಸೂರು ನಗರದ ಆಕರ್ಷಣೆಯಾಗಿ ಪರಿಣಮಿಸಿದ್ದವೆ. ಕುಪ್ಪಣ್ಣ ಪಾರ್ಕ್ ನಲ್ಲಿ ಪಲಪುಷ್ಪ ಪ್ರದರ್ಶನ, ಜನಪದ ಕಲಾ ಪ್ರದರ್ಶನ, ಹಾಗೂ ರಾಜ್ಯದ ಎಲ್ಲೆಡೆಯಿಂದ ಬಂದ ಖಾದ್ಯ ವೈವಿಧ್ಯ ದಸರಾ ಸಂಭ್ರಮವನ್ನು ರುಚಿ ಮತ್ತು ಸೌಂದರ್ಯದ ಹಬ್ಬವನ್ನಾಗಿ ಮಾಡಿವೆ. ಯುವ ದಸರಾ ನಾಳೆ ಇಂದ ಪ್ರಾರಂಭವಾಗುತ್ತಿದ್ದು, ಖ್ಯಾತ ಗಾಯಕರು, ಸಂಗೀತ ನಿರ್ದೇಶಕರು ಪಾಲ್ಗೊಳ್ಳಲಿದ್ದಾರೆ. ನಾಳೆ ಯುವ ದಸಾರಗೆ ಅರ್ಜುನ್ ಜನ್ಯಾ ಬರುತ್ತಿರುವುದು ವಿಶೇಷವಾಗಿದೆ.
ಅರಮನೆ ಎದುರಿನ ವೇದಿಕೆಯಲ್ಲಿ ಪ್ರತಿದಿನ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಕಲಾವಿದರಿಂದ ಸಂಗೀತ-ನೃತ್ಯ ಕಾರ್ಯಕ್ರಮಗಳು ನಡೆಯುತ್ತಿವೆ. ಯುದ್ಧಕಲೆ ಪ್ರದರ್ಶನ, ಯಕ್ಷಗಾನ, ನಾಟಕ ಕಲೆಪ್ರಿಯರಿಗೆ ವಿಶೇಷ ರುಚಿ ನೀಡುತ್ತಿವೆ. ಜನಪ್ರಿಯ ಜಂಬೂಸವಾರಿಯೊಂದಿಗೆ ದಸರಾ ಸಂಭ್ರಮವು ತನ್ನ ತುದಿಗಾಲಲ್ಲಿ ತಲುಪುತ್ತಿದ್ದು, ಮೈಸೂರಿನ ವೈಭವವನ್ನು ನಾಡು ನಾಡಿಗೆ ಹರಡುತ್ತಿದೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ