30 ವರ್ಷ ಭಾರತಾಂಬೆಯ ಸೇವೆ ಸಲ್ಲಿಸಿ ಬಂದ ಯೋಧನಿಗೆ ಗ್ರಾಮದಲ್ಲಿ ಅದ್ದೂರಿ ಸಂಭ್ರಮ

ಹುಬ್ಬಳ್ಳಿ:

ಈತ ನಮ್ಮೂರ ಯೋಧ! ಊರವರ ಸಂಭ್ರಮ ನೋಡಿ
ಮಕ್ಕಳು, ಕಿರಿಯರು ವೀರಯೋಧನಿಗೆ ಹೂ ಕೊಟ್ಟು, ಕೈ ಕುಲಕುತ್ತಾ ಹಿರಿಯರನ್ನ ಕಾಣುತ್ತಲೇ ತಾನೇ ಕಾಲಿಗೆ ಬಿದ್ದು ಅವರ ಆಶೀರ್ವಾದ ಬೇಡುತ್ತಾ ಶಿರಗುಪ್ಪಿ ಯೋಧ ಗುರುಪಾದಪ್ಪ ಸರಳತೆ ಮೆರೆದರು.

ವಂದೇ ಮಾತರಂ.. ಬೋಲೋ ಭಾರತ್ ಮಾತಾ ಕೀ ಜೈ.. ಇಂಕ್ವಿಲಾಬ್ ಜಿಂದಾಬಾದ್.. ಎಲ್ಲೆಲ್ಲೂ ಜೈಕಾರ, ಘೋಷಣೆ. ತವರಿಗೆ ಬಂದ ವೀರ ಯೋಧನನ್ನ ಊರ ಮಂದಿ ಸ್ವಾಗತಿಸಿದ ಪರಿಯಿದು. ಭಾರತ ಮಾತೆಯ ಪುತ್ರನೇ ನಿನಗಿದೋ ನಮ್ಮೀ ಸ್ವಾಗತವೆನ್ನುತ್ತಾ ಬರಮಾಡಿಕೊಂಡ ರೀತಿಯಿದು. ಹೀಗೊಂದು ಅದ್ಭುತ ಸ್ವಾಗತ ಕಾರ್ಯಕ್ರಮಕ್ಕೆ ಸಾಕ್ಷಿಯಾದದ್ದು ಹುಬ್ಬಳ್ಳಿ ತಾಲೂಕಿನ ಶಿರಗುಪ್ಪಿ ಗ್ರಾಮ ಭಾರತೀಯ ಗಡಿ ಭದ್ರತಾ ಪಡೆಯಲ್ಲಿ ಬರೋಬ್ಬರಿ 30 ವರ್ಷಗಳ ಕಾಲ ಸೇವೆ ಸಲ್ಲಿಸಿ, ತವರಿಗೆ ಆಗಮಿಸಿದ ಶಿರಗುಪ್ಪಿಯ ಗುರುಪಾದಪ್ಪ ಸಂಗಪ್ಪ ಯರಗುಪ್ಪಿ ಅವರಿಗೆ ಊರಿನಲ್ಲಿ ಹೃದಯಸ್ಪರ್ಶಿ ಸ್ವಾಗತ ಮಾಡಲಾಯ್ತು. ಊರ ಹಿರಿಯರು, ಕಿರಿಯರೆನ್ನದೇ ವೀರಯೋಧನನ್ನು ಬರಮಾಡಿಕೊಂಡರು. ಶಾಲಾ ಮಕ್ಕಳಂತೂ ಸಾಲಾಗಿ ನಿಂತು ತೆರೆದ ಜೀಪಿನಲ್ಲಿ ಆಗಮಿಸಿದ ಭಾರತೀಯ ಹೆಮ್ಮೆಯ ಪುತ್ರನಿಗೆ ಪುಷ್ಪ ಮಳೆಗರೆದು ಸ್ವಾಗತಿಸಿದ್ರು. ತವರೂರಿನ ಈ ಸ್ವಾಗತ ಕಂಡು ಒಂದು ಕ್ಷಣ ಗುರುಪಾದಪ್ಪನವರು ಕೂಡಾ ಭಾವುಕರಾದರು.

ಭಯೋತ್ಪಾದನೆಗೆ ಹಣಕಾಸು ನೆರವು ನೀಡುವವರ ವಿರುದ್ಧ ನಿರ್ಣಾಯಕ ಕ್ರಮ ತೆಗೆದುಕೊಳ್ಳವ ಅಗತ್ಯವಿದೆ -ಮೋದಿ

ಮಳೆಯ ಮುನ್ಸೂಚನೆ ನೀಡಿದ ಹವಾಮಾನ ಇಲಾಖೆ -ರೆಡ್ ಅಲರ್ಟ್ ಘೋಷಣೆ

ಕುಮಾಸ್ವಾಮಿಯವರ ಆರೋಪಕ್ಕೆ ಬೆಂಬಲಿಸಿದ ಬಿಜೆಪಿ ನಾಯಕರು

About The Author