Thursday, August 21, 2025

Latest Posts

ಶಿರಡಿ ಸಾಯಿ ಮಹಾತ್ವ ..!

- Advertisement -

Devotional:

ಇಲ್ಲಿಯವರೆಗೆ ಸಾಯಿಬಾಬಾ ಅವರ ಜನನದ ಬಗ್ಗೆ ನಿಖರವಾದ ಮಾಹಿತಿಯಿಲ್ಲ. ಆದರೆ ಅವರು 1835 ಮತ್ತು 40 ರ ನಡುವೆ ಜನಿಸಿದರು ಎಂದು ಕೆಲವರು ಭಾವಿಸುತ್ತಾರೆ. ಸೆಪ್ಟೆಂಬರ್ 28 ರಂದು ಸಾಯಿಬಾಬಾ ಅವರ ಜನ್ಮದಿನವನ್ನು ಭಕ್ತರು ಆಚರಿಸುತ್ತಾರೆ.ಶಿರಡಿ ಸಾಯಿಬಾಬಾರವರು ಸಬ್ ಕಾ ಮಲಿಕ್ ಏಕ್..ಎಂದರೆ ,ಎಲ್ಲರ ಭಗವಂತ ಒಬ್ಬನೇ ಎಂಬ ಮಹಾನ್ ಸಿದ್ಧಾಂತವನ್ನು ಪ್ರೇರೇಪಿಸಿದರು. ಯಾವುದೇ ನಿಯಮಗಳ ಅಗತ್ಯವಿಲ್ಲ ಎಂದು ಶಿರಡಿ ಸಾಯಿ ಭಕ್ತರಿಗೆ ತಿಳಿಸಿದರು.

ಶಿರಡಿ ಸಾಯಿ ಮಹಾತ್ವ
ಭಕ್ತರು ಸಾಯಿಬಾಬಾರನ್ನು ಗುರು, ಸಾಧು, ಫಕೀರ… ಎಂದು ನಾನಾ ರೀತಿಯಲ್ಲಿ ಕರೆಯುತ್ತಾರೆ. ಸಾಯಿನಾಥ್ ಅವರು ಜಾತಿ, ಧರ್ಮ ಭೇದವಿಲ್ಲದೆ ಎಲ್ಲರೂ ಸಮಾನರು ಎಂದು ಬೋಧಿಸಿದರು. ಆದ್ದರಿಂದಲೇ ಆತನನ್ನು ಎಲ್ಲಧರ್ಮದವರು ಪೂಜಿಸುತ್ತಾರೆ. ಮಸೀದಿಯಲ್ಲಿ ವಾಸವಾಗಿದ್ದ ಸಾಯಿನಾಥ್ ಅವರನ್ನು ದೇವಸ್ಥಾನದಲ್ಲಿ ಸಮಾಧಿ ಮಾಡಲಾಗಿದೆ. ಸಾಯಿಯು ದೇವರಲ್ಲ, ಕೇವಲ ಗುರು ಎಂದು ಭಕ್ತರಿಗೆ ವಿವರಿಸಿದರು. ಅಷ್ಟೇಅಲ್ಲ ಭಗವಂತನನ್ನು ಹೇಗೆ ಆರಾಧಿಸಬೇಕೆಂದು ,ಹೇಗೆ ವಿನಯ ಮತ್ತು ವಿಧೇಯರಾಗಿರಬೇಕೆಂದು, ಅವರೇ ಸ್ವಯಂ ಮಾಡಿ ಭಕ್ತರಿಗೆ ಮಾರ್ಗದರ್ಶನ ನೀಡುತ್ತಿದ್ದರು.

ಸಾಯಿನಾಥರು ನೀರಿನಿಂದ ದೀಪಗಳನ್ನು ಬೆಳಗಿಸಿದರೂ..ಭಕ್ತರ ಪಾಪಗಳನ್ನು ತಾವೇ ತೊಳೆದರೂ, ಭಕ್ತರ ಇಷ್ಟಾರ್ಥಗಳನ್ನು ಈಡೇರಿಸಿದರೂ, ಎಂದಿಗೂ ದೇವರೆಂದು ಹೇಳಿಕೊಂಡಿಲ್ಲ, ದೇವರು ಒಪ್ಪಿಸಿದ ಕೆಲಸವನ್ನು ನಿರ್ವಹಿಸಲು ಬಂದ ಗುರುವಾಗಿ ಮಾತ್ರ ಬಂದಿದ್ದಾನೆ ಎಂದು ಹೇಳುತ್ತಿದ್ದರು. ಈ ಸೃಷ್ಟಿಯಲ್ಲಿ ಭಗವಂತನನ್ನು ಮೀರಿದ್ದು ಯಾವುದೂ ಇಲ್ಲ ಎಂದು ಸಾಯಿ ಭಕ್ತರಿಗೆ ಉಪದೇಶಿಸಿದರು . ಆದರೆ ಬಾಬಾರವರು ಸ್ವತಃ ಸದ್ಗುರು ಅಲ್ಲ ಅವರು ಭಗವಂತನ ಸ್ವರೂಪವೆಂದು ,ಅವನೊಂದಿಗೆ ವಾಸಿಸುತ್ತಿದ್ದವರು ನಿಜವಾಗಿ ಅವರ ಲೀಲೆಗಳನ್ನು ನೋಡಿದ್ದಾರೆಂದು ಹೇಳಿದರೂ .

ಸಾಯಿಬಾಬಾರವರ ಮಹಿಮೆಗಳು ಹಲವು.. ಅವರ ಜೊತೆ ಬದುಕಿದವರು.. ಕೆಲವು ಪುಸ್ತಕಗಳಲ್ಲಿ ಉಲ್ಲೇಖಿಸಿದ್ದಾರೆ. ಧೀರ್ಘಕಾಲದ ರೋಗಗಳನ್ನು ನಿವಾರಿಸುವ, ಖಂಡ ಯೋಗ ಮಾಡುವ, ಭಕ್ತರ ಮನಸ್ಸಿನಲ್ಲಿರುವ ವಿಷಯಗಳನ್ನು ತಿಳಿದುಕೊಳ್ಳುವ ಮಹಿಮೆಗಳನ್ನು ತಾವೇ ಕಣ್ಣಾರೆ ಕಂಡಿದ್ದಾರೆ ಎಂದು ವಿವರಿಸಿದರು. ಬಾಬಾರವರು ವಿಭೂಧಿಯ ಮೂಲಕ ಕೆಲವು ರೋಗಗಳನ್ನು ಗುಣಪಡಿಸಿದರು ಎಂದು ಉಲ್ಲೇಖಿಸಲಾಗಿದೆ. ಒಬ್ಬ ಮಹಿಳೆ ಕುರುಡಳು. ಎಷ್ಟೇ ಆಸ್ಪತ್ರೆಗಳಿಗೆ ಭೇಟಿ ನೀಡಿದರೂ ದೃಷ್ಟಿ ಬರಲಿಲ್ಲ . ವಿದೇಶಕ್ಕೆ ಹೋದರೂ ಪ್ರಯೋಜನವಾಗಲಿಲ್ಲ ,ಸಾಯಿಯಲ್ಲಿ ಪ್ರಾರ್ಥಿಸಿದರೇ ಸ್ವಲ್ಪ ದಿನಗಳಲ್ಲಿ ಅವಳಿಗೆ ದೃಷ್ಟಿ ಕೊಟ್ಟರು .

ಸಾಯಿಯು ಯಾವಾಗಲೂ ತನ್ನ ಭಕ್ತರು ಎರಡು ನಿಯಮಗಳನ್ನು ಪಾಲಿಸಬೇಕೆಂದು ಹೇಳುತ್ತಿದ್ದರು. ಪ್ರತಿಯೊಬ್ಬರೂ ಗಮನ ಮತ್ತು ತಾಳ್ಮೆಯ ಗುಣಗಳಿಗೆ ಒಗ್ಗಿಕೊಳ್ಳಬೇಕು ಎಂದು ಸಲಹೆ ನೀಡಿದರು. ಶ್ರದ್ಧೆ ಎಂದರೆ ನಂಬಿಕೆ, ಭಕ್ತಿ , ಸಬೂರಿ ಎಂದರೆ ತಾಳ್ಮೆ ಮತ್ತು ಅಭ್ಯಾಸ ಎಂದು ಅವರು ಹೇಳಿದರು. ಸಾಯಿ ಎಲ್ಲರ ಮೇಲೂ ಪ್ರೀತಿ ಸುರಿಸುವವರು. ಮೂಕಪ್ರಾಣಿಗಳನ್ನು ಪ್ರೀತಿಯಿಂದ ನೋಡಿಕೊಳ್ಳಲು ಸಲಹೆ ನೀಡಲಾಗುತ್ತದೆ.

ತಲಕಾಡು ದೇವಾಲಯದ ಚರಿತ್ರೆ..!

ಶ್ರೀ ಅನಂತ ಪದ್ಮನಾಭಸ್ವಾಮಿ ವ್ರತದ ವಿಶೇಷತೆ. ಭಾಗ -2

ಶ್ರೀ ಅನಂತ ಪದ್ಮನಾಭಸ್ವಾಮಿ ವ್ರತದ ವಿಶೇಷತೆ.. ಭಾಗ- 1

- Advertisement -

Latest Posts

Don't Miss