ಕಾಲೇಜು ಆರಂಭಕ್ಕೆ ಗ್ರೀನ್ ಸಿಗ್ನಲ್

www.karnatakatv.net : ಮಹಾಮಾರಿ ಕೊರೊನಾ ಸೋಂಕಿನ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿರೊದ್ರಿಂದ ಕಾಲೇಜು ಪ್ರಾರಮಭಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಾಯ್ತು, ಮತ್ತು ಅನ್ ಲಾಕ್ 3.0 ಜಾರಿಗೊಳಿಸಲಾಗಿದೆ, ರಾಜ್ಯ ಸರ್ಕಾರವು ಆರೋಗ್ಯ ಮತ್ತು ಮೆಡಿಕಲ್ ಸೆಕ್ಟರ್ ಗಳಿಗೆ ಸಂಬಂಧಿಸಿದಂತೆ ಮೆಡಿಕಲ್ ಕಾಲೇಜ್ ಗಳನ್ನು ತೆರೆಯಲು ಅನುಮತಿಸಿ ಆದೇಶಿಸಿದೆ. ಈ  ಕುರಿತಂತೆ ಕಂದಾಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಎನ್ ಮಂಜುನಾಥ ಪ್ರಸಾದ್ ಆದೇಶ ಹೊರಡಿಸಿದ್ದು, ಕೊರೋನಾ ಸೋಂಕಿನ ಪಾಸಿಟಿವಿಟಿ ದರಗಳ ಇಳಿಕೆಯ ಬಿನ್ನಲೆಯಲ್ಲಿ ಆರೋಗ್ಯ ಮತ್ತು ಮೆಡಿಕಲ್ ಸೆಕ್ಟರ್ ( ಮೆಡಿಕಲ್, ಡೆಂಟಲ್ ಕಾಲೇಜ್, ಆಯುಷ್ ಕಾಲೇಜು ಮತ್ತು ಇನ್ಸಿಟಿಟ್ಯೂಷನ್ನ್, ನರ್ಸಿಂಗ್ ಕಾಲೇಜು ಮತ್ತು ಹೆಲ್ತ್ ಕೇರ್ ಅಕಾಡೆಮಿಕ್ ಇನ್ಟಿಟ್ಯೂಷನ್, ಕಾಲೇಜು ಇತರೆ) ಸಂಸ್ಥೆಗಳು ಕೂಡಲೇ ತೆರೆಯಲು ಅನುಮತಿಸಿದ್ದಾರೆ. ಕಾಲೇಜಿಗೆ ಆಗಮಿಸುವಂತ ವಿದ್ಯಾರ್ಥಿಗಳು ಹಾಗೂ ಟೀಚಿಂಗ್ ಸ್ಟಾಪ್, ನಾನ್ ಟೀಚಿಂಗ್ ಸ್ಟಾಪ್ ಅಲ್ಲದೇ ಇತರೆ ಸಿಬ್ಬಂದಿಗಳು ಕನಿಷ್ಠ ಪಕ್ಷ ಒಂದು ಡೋಸ್ ಕೋರೊನಾ ಲಸಿಕೆ ಹಾಕಿಸರಲೆ ಬೇಕು ಎಂದು ತಿಳಿಸಿದ್ದಾರೆ

About The Author