ಕೇಂದ್ರದಿಂದ ಗ್ರೀನ್ ಸಿಗ್ನಲ್ – ಬಿಎಂಟಿಸಿಗೆ ‘ಗುಡ್ ನ್ಯೂಸ್’!

ಬಿಎಂಟಿಸಿಗೆ ‘ಗುಡ್ ನ್ಯೂಸ್’ ಸಿಕ್ಕಿದೆ. ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್‌ಗಳಿಂದ ಅಪಘಾತಗಳು ಆಗ್ತಾಯಿವೆ. ಹಳೆಯ ಬಸ್‌ಗಳ ತಾಂತ್ರಿಕ ದೋಷಗಳು ಹಾಗೂ ಭವಿಷ್ಯದಲ್ಲಿ ಇನ್ನಷ್ಟು ಶಕ್ತಿಯುತ, ಪರಿಸರ ಮಿತ್ರ ಸಾರಿಗೆ ವ್ಯವಸ್ಥೆಗಾಗಿ ಮಹತ್ವದ ಕ್ರಮವನ್ನು ಕೇಂದ್ರ ಸರ್ಕಾರ ಕೈಗೊಂಡಿದೆ. ಬಿಎಂಟಿಸಿಗೆ 4500 ಹೊಸ ಎಲೆಕ್ಟ್ರಿಕ್ ಬಸ್‌ಗಳ ಮಂಜೂರಿಗೆ ಕೇಂದ್ರದಿಂದ ಗ್ರೀನ್ ಸಿಗ್ನಲ್ ಸಿಕ್ಕಿದೆ. ಇದರ ಮೂಲಕ ಬೆಂಗಳೂರಿನ ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆಗೆ ನಾಂದಿ ಬರೆಯಲಿದೆ.

ಕಳೆದ ಒಂದು ವರ್ಷದಲ್ಲಿ ಬಿಎಂಟಿಸಿ ಬಸ್ ಅಪಘಾತಗಳಲ್ಲಿ 44 ಜನರು, ಮತ್ತು ಇತ್ತೀಚಿನ ಒಂದು ತಿಂಗಳಲ್ಲೇ 7 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಹಲವಾರು ಬಸ್‌ಗಳಲ್ಲಿ ಹಾರ್ನ್ ಇಲ್ಲ, ಬ್ರೇಕ್-ಕ್ಲಚ್ ಗೇರ್ ಬಾಕ್ಸ್ ಸಮಸ್ಯೆಗಳು ಕಂಡುಬರುತ್ತಿದ್ದು, ಅಪಘಾತಗಳಿಗೆ ಕಾರಣವಾಗುತ್ತಿದೆ.

ಈ ಸಮಸ್ಯೆಗಳಿಗೆ ಉತ್ತರವಾಗಿ, ಕೇಂದ್ರ ಸರ್ಕಾರ 4500 ಹೊಸ ಎಲೆಕ್ಟ್ರಿಕ್ ಬಸ್‌ಗಳ ಮಂಜೂರಿಗೆ ಅನುಮೋದನೆ ನೀಡಿಡೆ. ಈ ಬಸ್‌ಗಳನ್ನು ಹಂತ ಹಂತವಾಗಿ ಈ ವರ್ಷದ ಅಂತ್ಯದಿಂದ ಅಥವಾ ಮುಂದಿನ ವರ್ಷ ಪ್ರಾರಂಭದಿಂದಲೇ ಸೇವೆಗೆ ಬಿಡಲಾಗುವುದು.

4100 ಸಾಮಾನ್ಯ ಎಲೆಕ್ಟ್ರಿಕ್ ಬಸ್‌ಗಳು, 400 ಎಸಿ ಎಲೆಕ್ಟ್ರಿಕ್ ಬಸ್‌ಗಳು ಸೇರಿವೆ. ಈ ಹೊಸ ಬಸ್‌ಗಳ ಸೇರ್ಪಡೆಗೆ ತಯಾರಿ ರೂಪದಲ್ಲಿ ಈಗಾಗಲೇ ಬಿಎಂಟಿಸಿ ನಿಗಮದ 15 ರಿಂದ 20 ಡಿಪೋಗಳಲ್ಲಿ ಚಾರ್ಜಿಂಗ್ ಸ್ಟೇಷನ್‌ಗಳ ಸ್ಥಾಪನೆ ನಡೆಯುತ್ತಿದೆ. ಸದ್ಯ ಬಿಎಂಟಿಸಿ ಬಳಿ ಇರುವ 1200 ಎಲೆಕ್ಟ್ರಿಕ್ ಬಸ್‌ಗಳೊಂದಿಗೆ, ಹೊಸ ಬಸ್‌ಗಳು ಸೇರುವ ಮೂಲಕ ಒಟ್ಟು ಎಲೆಕ್ಟ್ರಿಕ್ ಬಸ್‌ಗಳ ಸಂಖ್ಯೆ 5700ಕ್ಕೆ ಏರಲಿದೆ.

ವರದಿ : ಲಾವಣ್ಯ ಅನಿಗೋಳ

About The Author