Thursday, December 12, 2024

Latest Posts

ವಿಕಲಚೇತನ ಕಲಾವಿದರ ತಂಡ ಹಾಗೂ ಸ್ಲಂ ಸಮಿತಿಯ ಕಾರ್ಯಕರ್ತರಿಗೆ ದಿನಸಿ ಕಿಟ್ಟ ವಿತರಣೆ..!

- Advertisement -

www.karnatakatv.net :ತುಮಕೂರು : ಜಿಲ್ಲೆಯ ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿ ಹಾಗೂ ಸ್ಲಂ ಜನಾಂದೋಲನ ಕರ್ನಾಟಕ ವತಿಯಿಂದ ದಾನಿಗಳ ಸಹಕಾರದೊಂದಿಗೆ ತುಮಕೂರು ನಗರದಲ್ಲಿ ಹಲವು ವರ್ಷಗಳಿಂದ ಮರಣ ಹಾಗೂ ಇತರ ಕಾರ್ಯಕ್ರಮಗಳಲ್ಲಿ ಭಜನಾ ಹಾಡುಗಳನ್ನು ಹಾಡುತ್ತಾ ಜೀವನ ಸಾಗಿಸುತ್ತಿರುವ ವಿಕಲಚೇತನ ಕಲಾವಿದರ ತಂಡಕ್ಕೆ ಹಾಗೂ ತುಮಕೂರು ಸ್ಲಂ ಸಮಿತಿಯ ಮುಂಚೂಣಿ ಕಾರ್ಯಕರ್ತರಿಗೆ ದಿನಸಿ ಕಿಟ್ಟನ್ನು ವಿತರಿಸಲಾಯಿತು.

ಸ್ಲಂ ಜನಾಂದೋಲನ ಕರ್ನಾಟಕ ಸಂಚಾಲಕರಾದ ನರಸಿಂಹಮೂರ್ತಿಯವರು ಮಾತನಾಡಿ, ಇದೇ ಸೆಪ್ಟೆಂಬರ್ 15 ರಂದು ಭಾರತಿನಗರ ಮತ್ತು ಎಲ್ಲರ ಬಂಡೆ ಸೇರಿದಂತೆ ಸ್ಲಂ ಘೋಷಣೆ ಹಾಗೂ ಈಗಾಗಲೇ ಘೋಷಣೆ ಗೊಂಡಿರುವ 17 ಸ್ಲಂಗಳಿಗೆ ಹಕ್ಕು ಪತ್ರ ನೀಡಲು ಮತ್ತು (1450) ಮನೆಗಳ ಯೋಜನೆ ಕಾರ್ಯವನ್ನು ಚುರುಕುಗೊಳಿಸಲು ಹಾಗೂ 398 ನಿವೇಶನ ರಹಿತ ಕುಟುಂಬಗಳಿಗೆ ಭೂಮಿ ಅಂದಾಜಿನ ಎಸ್ಟಿಮೇಟ್ ನ್ನು ಜಿಲ್ಲಾಡಳಿತಕ್ಕೆ ವರದಿ ನೀಡಲು ಒತ್ತಾಯಿಸಿ ಪ್ರತಿಭಟನೆಗೆ ಸಜ್ಜಾಗಲೂ ತಿಳಿಸಿದರು.

ಈ ಸಂದರ್ಭದಲ್ಲಿ ಸಮಿತಿಯ ಪದಾಧಿಕಾರಿಗಳಾದ ಕಣ್ಣನ್. ಅರುಣ್. ರಜಿಯಾ ಬಿ. ಮಂಗಳಮ್ಮ. ತಿರುಮಲಯ್ಯ. ಜಾಬಿರ್. ದೊಡ್ಡ ರಂಗಯ್ಯ. ರಂಗನಾಥ್. ಲಕ್ಷ್ಮಿಪತಿ. ಮತ್ತು ನಿವೇಶನ ರಹಿತರ ಹೋರಾಟ ಸಮಿತಿಯ ಸುಧಾ. ಹನುಮಕ್ಕ. ತಿಮ್ಮಕ್ಕ. ಸುನಂದ ಮುಂತಾದವರು ಪಾಲ್ಗೊಂಡಿದ್ದರು.

ದರ್ಶನ್ ಕೆ.ಡಿ.ಆರ್,  ಕರ್ನಾಟ ಟಿವಿ –ತುಮಕೂರು

- Advertisement -

Latest Posts

Don't Miss