ಪಾಟ್ನಾ: ಈಗ ಎಲ್ಲಿ ನೋಡಿದ್ರೂ ಕೊರೊನಾದ್ದೇ ಸುದ್ದಿ, ಕೊರೊನಾ ಅನ್ನೋ ಹೆಸರು ಹೇಳದೇ ಯಾರೂ ದಿನವೇ ಮುಂದೂಡದಂಥ ಪರಿಸ್ಥಿತಿ ಎದುರಾಗಿದೆ. ಕೊರೊನಾ ನಮ್ಮ ಜೀವನದ ಒಂದು ಭಾಗವಾಗಿಯೇಬಿಟ್ಟಿದೆ.

ಜನ ಅದೆಷ್ಟು ಭಯ ಬಿದ್ದು ಜೀವನ ನಡೆಸುತ್ತಿದ್ದಾರೆಂದರೆ ಕೆಲವರು ಊರು ಬಿಟ್ಟು ವಲಸೆ ಹೊರಟಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಕೊರೊನಾ ಬಗ್ಗೆ ನಿರ್ಲಕ್ಷ್ಯ ತೋರಬೇಡಿ. ಮಾಸ್ಕ್ ಸ್ಯಾನಿಟೈಸರ್ ಬಳಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಅಂತಾ ಹೇಳ್ತಾನೆ ಇದ್ದಾರೆ. ಆದ್ರೆ ಕೆಲ ಜನ ಇದಕ್ಕೆಲ್ಲ ಕೇರ್ ಮಾಡ್ತಿಲ್ಲ. ಹೀಗೆ ಮಾಡಿದ್ದಕ್ಕೆ ಬಿಹಾರದ ಪಾಟ್ನಾದಲ್ಲಿ ಮಾಸ್ ಕೊರೊನಾ ಸ್ಪ್ರೆಡಿಂಗ್ ಆಗಿಬಿಟ್ಟಿದೆ.
ಬಿಹಾರದ ಪಾಟ್ನಾದಲ್ಲಿ ಮಧುಮಗ ಕೋವಿಡ್ 19 ನಿಂದ ಸಾವನ್ನಪ್ಪಿದ್ದು, ಮದುವೆಗೆ ಬಂದಿದ್ದ 95 ಜನರಿಗೆ ಕೊರೊನಾ ಸೋಂಕಿರುವುದು ಧೃಡ ಪಟ್ಟಿದೆ.
ಗುರುಗ್ರಾಮದಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದ 30 ವರ್ಷದ ವ್ಯಕ್ತಿಗೆ ಕೊರೊನಾ ಸೋಂಕು ತಗುಲಿದ್ದು, ಈತನಿಗೆ ಕೊರೊನಾ ಲಕ್ಷಣಗಳು ಕಂಡುಬಂದಿತ್ತಂತೆ. ಆದ್ರೂ ಕೂಡ ನಿರ್ಲಕ್ಷ್ಯ ತೋರಿದ ಯುವಕ ಪರೀಕ್ಷೆ ಮಾಡಿಸಿಕೊಳ್ಳದೇ ಮದುವೆಗೆ ಹಾಜರಾಗಿದ್ದಾನೆ. ಇದೀಗ ಈತ ಮೃತಪಟ್ಟು ಮದುವೆಗೆ ಬಂದ ಜನರಿಗೆ ಕೊರೊನಾ ತಗುಲಿದೆ.
ಮೇ 12ರಂದು ಈತನ ಮದುವೆ ಇದ್ದು, ಆ ವೇಳೆ ಲಕ್ಷಣಗಳು ಹೆಚ್ಚಾಗಿದ್ದವು. ಆದ್ರೂ ಕೂಡ ಮನೆ ಮಂದಿ ಈ ಬಗ್ಗೆ ನಿರ್ಲಕ್ಷ್ಯ ತೋರಿದ್ದಾರೆ. ವರನೂ ಕೂಡ ವೈದ್ಯರ ಬಳಿ ಹೋಗದೇ ಮಾಮೂಲಿ ಜ್ವರ ಎಂದು ಸುಮ್ಮನಿದ್ದ. ಮದುವೆಯಾಗಿ ಎರಡು ದಿನವಾದ ಬಳಿಕ ಮಧುಮಗ ಸಾವನ್ನಪ್ಪಿದ್ದಾನೆ.
ಜ್ವರ ಜಾಸ್ತಿಯಾದಾಗ ಏಮ್ಸ್ ಆಸ್ಪತ್ರೆಗೆ ಕರೆದೊಯ್ಯುವಾಗ ವ್ಯಕ್ತಿ ಸಾವನ್ನಪ್ಪಿದ್ದಾನೆ. ಈ ವಿಷಯ ಗೊತ್ತಾಗುತ್ತಿದ್ದಂತೆ ಮೊದಲು ಹತ್ತಿರದ ಸಂಬಂಧಿಕರನ್ನ ಪರೀಕ್ಷೆಗೆ ಒಳಪಡಿಸಲಾಗಿದೆ. ಎಲ್ಲರಿಗೂ ಕೊರೊನಾ ಇರುವುದು ಸಾಬೀತಾಗಿದೆ. ಆಗ ಮದುವೆಗೆ ಬಂದವರನ್ನೆಲ್ಲ ಪರೀಕ್ಷೆ ಮಾಡಿದಾಗ ಬರೋಬ್ಬರಿ 95 ಜನಕ್ಕೆ ಕೋವಿಡ್ ಹರಡಿರುವುದು ಗೊತ್ತಾಗಿದೆ. ಇನ್ನು ಮಧುಮಗಳಿಗೆ ಪರೀಕ್ಷೆಗೆ ಒಳಪಡಿಸಿದಾಗ ಕೊರೊನಾ ನೆಗೆಟಿವ್ ಎಂಬ ವರದಿ ಬಂದಿದೆ.
