Monday, December 23, 2024

Latest Posts

Gruha laxmi-ಸೋಮವಾರ ಸಂಜೆ ಗೃಹಲಕ್ಷ್ಮೀ ಯೋಜನೆಗೆ ಚಾಲನೆ

- Advertisement -

ರಾಜಕೀಯ ಸುದ್ದಿ: ಕಾಂಗ್ರೆಸ್ ಗ್ಯಾರಂಟಿಗಳಾದ  ಶಕ್ತಿ ಯೋಜನೆ ಮತ್ತು ಗೃಹಜ್ಯೋತಿ ಯೋಜನೆಗೆ ಚಾಲನೆ ನೀಡಿ ಫಲಾನುಭವಿಗಳು ಅದರ  ಲಾಭವನ್ನು ಪಡೆದುಕೊಳ್ಳುತಿದ್ದಾರೆ . ಈಗ ಇನ್ನೊಂದು ಗ್ಯಾರಂಟಿಯಾದ ಗೃಹ ಲಕ್ಷ್ಮಿ ಯೋಜನೆಯನ್ನು ಸೋಮವಾರ ಸಂಜೆ ಚಾಲನೆ ಮಾಡಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಇಂದು ಸುದ್ದಿಗೋಷ್ಟಿಯಲ್ಲಿ ರಾಜ್ಯದ  ಮಹಿಳೆಯರಿಗೆ ಸಿಹಿ ಸುದ್ದಿಯನ್ನು ನೀಡಿದ್ದಾರೆ.

ಇನ್ನು ಜುಲೈ 19 ರಿಂದ ಚಾಲನೆ ಸಿಗಲಿರುವ ಗೃಹಲಕ್ಷ್ಮೀ ಯೋಜನೆಗೆ ಕೇಂದ್ರದಿಂದ ಕಾಂಗ್ರೆಸ್ ನ ಹಿರಿಯ ನಾಯಕರನ್ನು ಆಹ್ವಾನಿಸಲಿದ್ದೇವೆ  ಈ ಕುರಿತು ಸಿಎಂ ಕೇಂದ್ರ ನಾಯಕರಿಗೆ ಪತ್ರ ಬರೆದಿದ್ದಾರೆ ಇನ್ನು ಈ ಯೋಜನೆಗೆ ಫಲಾನುಭವಿಳು ಸರ್ಕಾರಿ ಕಛೇರಿಗಳಾದ ಬೆಂಗಳೂರು ಒನ್ ಗ್ರಾಮ ಒನ್ ಮತ್ತು ಭಾಪೂಜಿ ಸೇವಾ ಕೇಂದ್ರಗಳಲ್ಲಿ ಅರ್ಜಿಯನ್ನು ಸಲ್ಲಿಸಬಹುದು ಎನ್ನುವ ಮಾಹಿತಿಯನ್ನು ನೀಡಿದರು

ಹಾಗೂ ಕಾಂಗ್ರೆಸ್ ಸರ್ಕಾರದ ಮಹತ್ವದ ಯೋಜನೆಯಾದ ಈ ಗೃಹಲಕ್ಷ್ಮೀ ಯೋಜನೆಯಿಂದ ಮನೆಯ ಯಜಮಾನಿಗೆ ಮಾಸಿಕ 2000 ದಂತೆ ಆಧಾರ್ ಲಿಂಕ್ ಇರುವ ಬ್ಯಾಂಕ್ ಖಾತೆಗಳಿಗೆ ನೆರ ಹಣ ವರ್ಗಾವಣೆಯಾಗಲಿದೆ ಇನ್ನು ಈ ಯೋಜನೆಯಿಂದ ರಾಜ್ಯದಲ್ಲಿ ಸುಮಾರಿ 1.28 ಕೋಟಿ ಕುಟುಂಬಗಳು ಈ ಯೋಜನೆಯ ಲಾಭ ಪಡೆಯಲಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಳ್ಕರ್  ತಿಳಿಸಿದರು.

Shakthi Yojane-ಇದ್ದಕ್ಕಿದ್ದ ಹಾಗೆ ದೇವರ ಕಾಣಿಕೆ ಅಧಿಕ ಮಟ್ಟದಲ್ಲಿ ಸಂಗ್ರಹ ..! ಎಲ್ಲಿ ? ಏಕೆ ?

Chittapur- ಖರ್ಗೆ ಕುಟಂಬದ ಮೇಲೆ ಕೊಲೆ ಬೆದರಿಕೆ

Narendra Modi : ಮೋದಿ ಜೊತೆಗಿನ ಸೆಲ್ಫಿ ಹಂಚಿಕೊಂಡ ಎಮ್ಯಾನುಯೆಲ್ ಮ್ಯಾಕ್ರೋನ್

 

 

- Advertisement -

Latest Posts

Don't Miss