ಹುಬ್ಬಳ್ಳಿ: ಕಳೆದ ನಾಲ್ಕು ದಿನಗಳಿಂದ ರಾಷ್ಟ್ರದಲ್ಲಿ ದೇಶದ ಹೆಸರಿನ ಬಗ್ಗೆ ಭಾರಿ ಚರ್ಚೆ ನಡೆಯುತ್ತಿರುವುದು ನಿಮಗೆಲ್ಲ ಗೊತ್ತಿರುವ ವಿಚಾರ ಈಗ ಇದರ ಬಗ್ಗೆ ಮಾಜಿ ಸಿಎಂ ಜಗದೀಶ್ ಶೇಟ್ಟರ್ ಅವರು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದ್ದಾರೆ.
ನಾವು ನಮ್ಮ ದೇಶದ ಹೆಸರನ್ನು ಇಂಡಿಯಾ ಅಂತನೂ ಕರೀತೀವಿ, ಭಾರತ ಅಂತಾನೂ ಕರೀತೀವಿ ಇದು ಸಂವಿಧಾನದಲ್ಲಿದೆ. ನಾವು ಭಾರತ ಮಾತಾಕಿ ಜೈ ಅಂತೀವಿ ಇದೆಲ್ಲ ಈವಾಗ ಯಾಕೆ ಆರಂಭ ಆಯ್ತೋ ಗೊತ್ತಿಲ್ಲ. ಮೊನ್ನೆ ಜಿ20 ಶೃಂಗಸಭೆ ನಡೆದಿದೆ ಅವರೆಲ್ಲರಿಗೂ ಕೇಂದ್ರ ಸರ್ಕಾರ ಡಿನ್ನರ್ ಗೆ ಕರೆದಾಗ ಪ್ರಸಿಡೆಂಟ್ ಆಫ್ ಭಾರತ ಎಂದು ಬರೆದಿದ್ದರು ಇವಾಗ ಯಾಕೆ ಭಾರತ ನೆನಪಾಯ್ತು ಇವತ್ತು ಯಾಕೆ ಇದೆಲ್ಲ ಹೊಸದಾಗಿ ಎಂದು ಪ್ರಶ್ನಿಸಿದರು. ಆದಕ್ಕೆ ನಮ್ಮದೇನು ಆಕ್ಷೇಪಣೆ ಇಲ್ಲ.
ನಾವೆಲ್ಲರೂ ಭಾರತೀಯರು ಈಗ ಹೊಸದಾಗಿ ಡೆಬೀಟ್ ಶುರು ಮಾಡಿದ್ದು ಬಿಜೆಪಿ, ಇದಕ್ಕೆಲ್ಲ ಕಾರಣ ರಾಜಕಾರಣ ವಿಪಕ್ಷಗಳು ಇಂಡಿಯಾ ಎಂದು ಹೆಸರು ಇಟ್ಟುಕೊಂಡಿದ್ದರು ಈಗ ಕೇಂದ್ರ ಸರ್ಕಾರ ಇಂಡಿಯಾ ಹೆಸರಿಗೆ ಹೆದರಿದೆ ಅನ್ನಿಸುತ್ತದೆ ಇಂಡಿಯಾ ಪದ ಬಳಕೆ ಜಾಸ್ತಿ ಆದರೆ ವಿಪಕ್ಷಗಳಿಗೆ ಪ್ರಚಾರ ಸಿಗುತ್ತೆ ಅನ್ನೋ ಕಾರಣಕ್ಕೆ ಭಾರತ ಎನ್ನುವ ಹೆಸರು ಪ್ರಸ್ತಾಪ ಆಗುತ್ತಿದೆ. ವಯಕ್ತಿಕವಾಗಿ ನಾನು ಭಾರತ ಅನ್ನೋದನ್ನ ಸ್ವಾಗತ ಮಾಡ್ತೀನಿ. ಮೋದಿಜಿ ಪ್ರಧಾನಿಯಾಗಿ 9 ವರ್ಷ ಆಯ್ತು, ಇವಾಗ ಯಾಕೆ ನೆನಪಾಯ್ತು ಇದು ಒಳ್ಳೆದಲ್ಲ ಅಂತ.
ಮೋದಿ ಅವರು ಒಂದು ದೇಶ ಒಂದು ಚುನಾವಣೆ ಬಗ್ಗೆ ಬಹಳ ದಿನದಿಂದ ಹೇಳಿದ್ದಾರೆ, ಒಂದೇ ಚುನಾವಣೆ ಒಳ್ಳೆದು. ಹಿಂದೆ ವಿಧಾನಸಭೆ ಲೋಕಸಭೆ ಚುನಾವಣೆ ಒಂದೇ ಸಮಯದಲ್ಲಿ ನಡೆದಿವೆ. ಮೇ ನಲ್ಲಿ ಲೋಕಸಭೆ ಚುನಾವಣೆ ನಡೆಯಬೇಕು. ಒಂದೇ ಕಾಲಕ್ಕೆ ಚುನಾವಣೆ ಅಂದ್ರೆ ಕೆಲ ರಾಜ್ಯಗಳ ಚುನಾವಣೆ ಮುಂದೆ ಹಾಕಬೇಕು. ಇದೀಗ ನಾಲ್ಕೈದು ರಾಜ್ಯಗಳ ಚುನಾವಣೆ ಇದೆ. ಕರ್ನಾಟಕ ಮೊನ್ನೆ ಚುನಾವಣೆ ಆಗಿದೆ, ಕರ್ನಾಟಕ ಸರ್ಕಾರ ಏನ ಮಾಡ್ತೀರಿ. ನಮ್ಮ ಸರ್ಕಾರ ವಿಸರ್ಜನೆ ಮಾಡ್ತೀರಾ, ಇದನ್ನು ಯಾರ ಒಪ್ಪತಾರೆ. ಒಂದು ದೇಶ ಒಂದು ಚುನಾವಣೆ ಆದ್ರೆ ಒಳ್ಳೆದ, ಆದ್ರೆ ಅದು ಮಾಡೋಕೆ ಸಾಧ್ಯ ಇಲ್ಲ. ಇದು 9 ವರ್ಷ ಆದ ಮೇಲೆ ಚಿಂತನೆ ಆಗ್ತಿದೆ ಎಂದು ಹೇಳಿದರು
Soldiers: ದೇಶ ಸೇವೆ ಮಾಡಿದ ಮಾಜಿ ಸೈನಿಕರಿಗೆ ಸಂಕಷ್ಟ; ಎಲ್ಲಿದ್ದೀರಾ ರೈಲ್ವೇ ಸಚಿವರೇ.?.!
Drought: ಬರಗಾಲ ಘೋಷಣೆಗೆ ಒತ್ತಾಯಿಸಿ ಹಸಿರು ಸೇನೆ ವತಿಯಿಂದ ಪ್ರತಿಭಟನೆ..!