Friday, October 18, 2024

Latest Posts

ಬೆಲೆ ಏರಿಕೆ ಮಾಡೋ ಬದಲು ಗ್ಯಾರಂಟಿ ನಿಲ್ಲಿಸಬಹುದಾಗಿತ್ತು: ಜಗದೀಶ್ ಶೆಟ್ಟರ್

- Advertisement -

Hubli News: ಹುಬ್ಬಳ್ಳಿ: ಪೆಟ್ರೋಲ್, ಡಿಸೇಲ್ ದರ ಹೆಚ್ಚಾದ ಕಾರಣ, ಕಾಂಗ್ರೆಸ್ ಸರ್ಕಾರದ ವಿರುದ್ಧ ಸಂಸದ ಜಗದೀಶ್ ಶೆಟ್ಟರ್ ಕಿಡಿಕಾರಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾತನಾಡಿದ ಶೆಟ್ಟರ್, ರಾಜ್ಯದಲ್ಲಿ ದಿನನಿತ್ಯದ ಆಡಳಿತ ವ್ಯವಸ್ಥೆ ಕುಸಿದು ಹೋಗಿದೆ. ರಾಜ್ಯದಲ್ಲಿನ ಸರ್ಕಾರ ಜನ ಸಾಮಾನ್ಯರ ಜೇಬಿಗೆ ಕೈ ಹಾಕೋ ಕೆಲಸ ಮಾಡಿದೆ. ನೀವು ಈ ರೀತಿ ಬೆಲೆ ಏರಿಕೆ ಮಾಡೋ ಬದಲು, ಗ್ಯಾರಂಟಿ ನಿಲ್ಲಿಸಬಹುದು ಅಲ್ವಾ ಎಂದು ಸರ್ಕಾರಕ್ಕೆ ಶೆಟ್ಟರ್ ಟಾಂಗ್ ಕೊಟ್ಟಿದ್ದಾರೆ.

ರಾಜ್ಯದಲ್ಲಿನ ತೈಲ್ ಬೆಲೆ ಏರಿಕೆಯನ್ನು ತಕ್ಷಣವೇ ಸರ್ಕಾರ ಹಿಂಪಡೆಯಬೇಕು. ಇಲ್ಲದಿದ್ದರೆ ಜನ‌ ರೊಚ್ಚಿಗೆದ್ದು ದಂಗೆ ಏಳೋ ಪರಸ್ಥಿತಿ ಬರತ್ತೆ. ಬೆಲೆ ಏರಿಕೆ ವಾಪಸ್ ಪಡೆಯದೆ ಹೋದ್ರೆ ಬಿಜೆಪಿ ಹಾರಾಟ ಮಾಡತ್ತೆ. ಸಿದ್ದರಾಮಯ್ಯ,ಡಿಕೆ ಶಿವಕುಮಾರ್ ಅರ್ಥ ಮಾಡಿಕೊಳ್ಳಬೇಕು. ಬೇರೆ ರಾಜ್ಯಕ್ಕೆ ಹೋಲಿಸಿದ್ರೆ ಕರ್ನಾಟಕದಲ್ಲಿ ಬೆಲೆ ಏರಿಕೆಯಾಗಿದೆ. ನಮ್ಮ ಕರ್ನಾಟಕ ಜನ ಬೇರೆ ರಾಜ್ಯಕ್ಕೆ ಹೋಗಿ ಪೆಟ್ರೋಲ್ ಡಿಸೇಲ್ ತರೋ ಕೆಲಸ ಆಗತ್ತೆ. ಖಜಾನೆ ಖಾಲಿಯಾಗಿ ಮುಂದೆ ಸರ್ಕಾರಿ ನೌಕರಿ ಮಾಡೋರಿಗೆ ಸಂಬಳ ಕೊಡೋಕೆ ಆಗಲ್ಲ. ಬಹಳ‌ ಅನುಭವಿ ಎಂದು ಸಿದ್ದರಾಮಯ್ಯ ಹೇಳ್ತಾರೆ. ವಾಸ್ತವವನ್ನ ಸಿದ್ದರಾಮಯ್ಯ ಅರ್ಥ ಮಾಡಕೊಬೇಕು ಎಂದು ಶೆಟ್ಟರ್ ಹೇಳಿದ್ದಾರೆ.

ಯಡಿಯೂರಪ್ಪನವರ ಮೇಲೆ ನಾನ‌್ ಬೆಲೆಬಲ್‌ ವಾರಂಟ್ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಶೆಟ್ಟರ್,  ಯಡಿಯೂರಪ್ಪ ನವರ ಮೇಲೆ ರಾಜ್ಯ ಸರ್ಕಾರ ಷಡ್ಯಂತ್ರ ಮಾಡಿದೆ. ಗೃಹ ಸಚಿವರೇ ಅದನ್ನು ಗಂಭೀರವಾಗಿ ತಗೆದುಕೊಳ್ಳಬಾರದು ಎಂದು ಹೇಳಿದ್ರು. ನಾಗೇಂದ್ರ ಹಗರಣದಲ್ಲಿ ಮುಖ್ಯಮಂತ್ರಿಗಳ ಹೆಸರು ಬರೋ ಹಾಗೆ ಆಯ್ತು. ಇದನ್ನು ಡೈವರ್ಟ್ ಮಾಡಲು ಯಡಿಯೂರಪ್ಪ ಅರೆಸ್ಟ್ ಮಾಡಲು ಮುಂದಾಗಿದ್ರು. ಇದು ಷಡ್ಯಂತ್ರ, ಇವತ್ತು ಹೈಕೋರ್ಟ್ ನಲ್ಲಿ ‌ನ್ಯಾಯ ಸಿಕ್ಕಿದೆ. ಕಾಂಗ್ರೆಸ್ ‌ನಿಂದ ದ್ವೇಷದ ರಾಜಕಾರಣ ನಡಿತೀದೆ. ದ್ವೇಷದ ರಾಜಕರಣ ನಿಲ್ಲಬೇಕು. ಯಡಿಯೂರಪ್ಪ ನವರ ಮೇಲೆ ಕುತಂತ್ರ,ಅಕ್ಷಮ್ಯ ಅಪರಾಧ. ರಾಜ್ಯದ ಜನತೆ ಎಲ್ಲವನ್ನೂ ಗಮನಿಸುತ್ತಿದ್ದಾರೆ ಈಗಾಗಲೇ ತಕ್ಕ ಉತ್ತರ ನೀಡಿದ್ದಾರೆ ಎಂದು ಶೆಟ್ಟರ್ ಹೇಳಿದ್ದಾರೆ.

ಕೇಂದ್ರ ಮಂತ್ರಿ ಸ್ಥಾನ‌ ಕೈ ತಪ್ಪಿದ ವಿಚಾರದ ಬಗ್ಗೆ ಮಾತನಾಡಿದ ಶೆಟ್ಟರ್, ನನ್ನ‌ ಮಂತ್ರಿ ಮಾಡಬೇಕು ಬೇಡ್ವೋ ಅನ್ನೋದು ಪ್ರಧಾನಿಗಳ ತೀರ್ಮಾನ. ಬೆಳಗಾವಿಗೆ ಸ್ಪರ್ದೆ ಮಾಡಿ ಅಂದ್ರು, ನಾನು ಹೆಚ್ಚು ಮತಗಳ ಅಂತರದಿಂದ ಗೆದ್ದಿದ್ದೇನೆ. ಬೆಳಗಾವಿಯಲ್ಲಿ ನಾನು ಈಗಾಗಲೇ ಕೆಲಸ ಮಾಡಿದ್ದೇನೆ. ನನಗೆ ಸಚಿವ ಸ್ಥಾನ ತಪ್ಪಿದೆ ಎಂದು ಹೇಳಲ್ಲ. ಯಾಕಂದ್ರೆ ಸಂಸದನಾಗಿದ್ದೇನೆ ಕೆಲಸ ಮಾಡತಿದೀನಿ ಅಂತಾ  ಎಂದು ಶೆಟ್ಟರ್ ಹೇಳಿದ್ದಾರೆ.

ರೇಣುಕಾ ಸ್ವಾಮಿ ಕೊಲೆ ವಿಚಾರದ ಬಗ್ಗೆ ಮಾತನಾಡಿದ ಶೆಟ್ಟರ್, ಯಾರೂ ಕೂಡಾ ಕಾನೂನು‌ ಕೈಗೆ ತಗೋಬಾರದು. ಸೈಬರ್ ಕ್ರೈಮ್ ಗೆ ದೂರು‌ಕೊಡಬಹುದಿತ್ತು. ಜೀವನ ಹಾಳ ಮಾಡೋ ಕೆಲಸ ಮಾಡಬಾರದು. ಸಿನಿಮಾ ನಟನಾಗಿ ಒಬ್ಬರ ಜೀವನ ಹಾಳ ಮಾಡ್ತೀದಿರಿ ಅಂದ್ರೆ ಇದು ಅಪರಾಧ. ರೇಣುಕಾ ಸ್ವಾಮಿ ಕುಟುಂಬ ಬೀದಿಗೆ ಬಿದ್ದಿದೆ. ಸಿನಿಮಾ ನಟ ಇರಲಿ,ಯಾರೆ ಇರಲಿ, ಒಂದೇ ಟ್ರೀಟಮೆಂಟ್ ಇರಬೇಕು. ಕಾನೂನು ‌ಮುಂದೆ ಯಾರೂ ದೊಡ್ಡವರಲ್ಲ ಎಂದು ಜಗದೀಶ್ ಶೆಟ್ಟರ್ ಹೇಳಿದ್ದಾರೆ.

- Advertisement -

Latest Posts

Don't Miss