Wednesday, December 4, 2024

Latest Posts

ಆರೋಪಿಗಳನ್ನು ಬಂಧಿಸದೇ ನಿರ್ಲಕ್ಷ್ಯ, ಗುಡಿಬಂಡೆ ಪಿಎಸ್ಐ ಗೋಪಾಲ ರೆಡ್ಡಿ ಅಮಾನತು ಮಾಡಿದ ಗೃಹ ಇಲಾಖೆ

- Advertisement -

ಚಿಕ್ಕಬಳ್ಳಾಪುರ : ಜಿಲ್ಲೆಯ ಗುಡಿಬಂಡೆಯ ಹಿರೇನಾಗವಲ್ಲಿ ಕ್ವಾರಿಯಲ್ಲಿ ಮಂಗಳವಾರ ಸಂಭವಿಸಿದ ಜಿಲೆಟಿನ್ ಸ್ಫೋಟದ ಘಟನೆಗೆ ಸಂಬಂಧಿಸಿದಂತೆ ಗುಡಿಬಂಡೆ ಪೊಲೀಸ್ ಠಾಣೆಯ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಆರ್ ಗೋಪಾಲ ರೆಡ್ಡಿ ಅವರನ್ನು ಗೃಹ ಇಲಾಖೆ ಅಮಾನತು ಮಾಡಿದೆ.

ಫೆಬ್ರವರಿ ೭ ರಂದು ಕ್ವಾರಿಯ ಮೇಲೆ ಪಿಎಸ್‌ಐ ಆರ್. ಗೋಪಾಲ ರೆಡ್ಡಿ ನೇತೃತ್ವದಲ್ಲಿ ದಾಳಿ ನಡೆಸಿದ ನಂತರ ಅರೋಪಿಗಳನ್ನು ಬಂಧಿಸದೇ ನಿರ್ಲಕ್ಷ್ಯವಹಿಸಿದ್ದರು ಎಂಬ ಕಾರಣಕ್ಕೆ ಗೃಹ ಇಲಾಖೆ ಆದೇಶ ಜಾರಿ ಮಾಡಿ ಅಮಾನತು ಗೊಳಿಸಿದೆ.

ಪಿಎಸ್‌ಐ ನಿರ್ಲಕ್ಷ್ಯದಿಂದಲೇ ಮಂಗಳವಾರ ಘಟನೆ ಸಂಭವಿಸಿದೆ. ದಾಳಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಅರೋಪಿಗಳನ್ನು ತನಿಖೆ ನಡೆಸದೇ ಫೆಬ್ರವರಿ 21 ಮತ್ತು 22 ರಂದು ರಜೆ ಮೇಲೆ ತೆರಳಿದ್ದರು. ಆರೋಪಿಗಳನ್ನು ಪತ್ತೆ ಮಾಡುವಂತೆ ಅಧೀನ ಸಿಬ್ಬಂದಿಗೂ ಸೂಚನೆ ನೀಡಿಲ್ಲ. ಜೊತೆಗೆ, ಪ್ರಕರಣ ದಾಖಲಿಸಿದ ಬಗ್ಗೆ ಪೊಲೀಸ್ ಐಟಿ ತಂತ್ರಾಂಶದಲ್ಲೂ ಮಾಹಿತಿ ಇಲ್ಲ. ಕರ್ತವ್ಯ ನಿರ್ವಹಣೆಯಲ್ಲಿ ಅತೀವ ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿತನ ತೋರಿದ್ದಾರೆ ಎಂದು ಆದೇಶ ಪತ್ರದಲ್ಲಿ ತಿಳಿಸಿದ್ದಾರೆ.

ಆರೋಪಿ ನಾಗರಾಜು ಸೂಚನೆಯ ಮೇರೆಗೆ ಅಕ್ಕಿ ಚೀಲದಲ್ಲಿ ಸ್ಫೋಟಕಗಳನ್ನು ಸಾಗಿಸುವ ಸಂದರ್ಭದಲ್ಲಿ ಸ್ಫೋಟ ಸಂಭವಿಸಿ ಆರು ಜನ ಮೃತ ಪಟ್ಟಿದ್ದಾರೆ. ಆರೋಪಿಗಳನ್ನು ಸೂಕ್ತ ಸಂದರ್ಭದಲ್ಲಿ ದಸ್ತಗಿರಿ ಮಾಡಿದ್ದರೆ ಈ ಸ್ಫೋಟ ಘಟನೆ ಸಂಭವಿಸುತ್ತಿರಲಿಲ್ಲ ಎಂದು ಗೋಪಾಲರೆಡ್ಡಿ ಅವರನ್ನು ಅಮಾನತುಗೊಳಿಸಲಾಗಿದೆ.

- Advertisement -

Latest Posts

Don't Miss