Sunday, September 8, 2024

Latest Posts

ಗುಜರಾತ್ ಚುನಾವಣಾ ಮುಹೂರ್ತ: 2 ಹಂತಗಳಲ್ಲಿ ಚುನಾವಣೆ, ಡಿಸೆಂಬರ್ 8 ಕ್ಕೆ ಫಲಿತಾಂಶ

- Advertisement -

Political news

ಗುಜರಾತ್ ವಿಧಾನಸಭೆಯ 182 ಕ್ಷೇತ್ರಗಳಿಗೆ ಚುನಾವಣ ನಡೆಸುವುದಕ್ಕೆ ಕೇಂದ್ರ ಚುನಾವಣಾ ಆಯೋಗವು ದಿನಾಂಕವನ್ನು ಘೋಷಿಸಿದೆ. ಎರಡು ಹಂತಗಳಲ್ಲಿ ಮತದಾನ ನಡೆಸುವುದಾಗಿ ಕೇಂದ್ರ ಚುನಾವಣಾ ಆಯೋಗ ಮುಖ್ಯಸ್ಥ ರಾಜೀವ್ ಕುಮಾರ್ ಪ್ರಕಟಿಸಿದ್ದಾರೆ.

ಗುಜರಾತ್ ಚುನಾವಣೆಯಲ್ಲಿ 4.9 ಕೋಟಿ ಮತದಾರರು ಮತ ಚಲಾಯಿಸಲು ಅರ್ಹರಾಗಿದ್ದಾರೆ. ಮತದಾರರಿಗೆ ಗ್ರಾಮೀಣ ಪ್ರದೇಶಗಳಲ್ಲಿ 34,000 ಕ್ಕಿಂತ ಹೆಚ್ಚು ಸೇರಿದಂತೆ 51,000 ಕ್ಕೂ ಹೆಚ್ಚು ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು ಎಂದು ಚುನಾವಣ ಆಯುಕ್ತರು ಹೇಳಿದ್ದಾರೆ. ಗುಜರಾತ್‌ನಲ್ಲಿ 2.53ಕೋಟಿ ಪುರುಷ ಮತದಾರರು ಇದ್ದಾರೆ. 2.37 ಕೋಟಿ ಮಹಿಳಾ ಮತದಾರರು ಇದ್ದು 4.61ಲಕ್ಷ ಮತದಾರರು ಮೊದಲ ಬಾರಿಗೆ ಮತದಾನ ಮಾಡಲಿದ್ದಾರೆ. 182 ಸದಸ್ಯರ ಗುಜರಾತ್ ವಿಧಾನಸಭೆಯಲ್ಲಿ ಅಧಿಕಾರ ಹಿಡಿಯಲು 92 ಸದಸ್ಯರ ಬೆಂಬಲ ಬೇಕಿದೆ. ಪ್ರಸ್ತುತ ಬಿಜೆಪಿ ಆಡಳಿತಾರೂಢ ಬಜೆಪಿ 111, ಕಾಂಗ್ರಸ್ 62 ಸದಸ್ಯ ಬಲ ಹೊಂದಿವೆ. ಐದು ಸ್ಥಾನಗಳು ವಿವಿಧ ಕಾರಣಗಳಿಂದ ತೆರವಾಗಿವೆ.

ಗುಜರಾತ್ ಒಟ್ಟು ಮತದಾರರ ಸಂಖ್ಯೆ 51,782. ಇದರಲ್ಲಿ 2.53 ಕೋಟಿ ಪುರುಷ ಮತದಾರರು, 2.37 ಕೋಟಿ ಮಹಿಳಾ ಮತದಾರರು ಇದ್ದಾರೆ. ಮೊದಲ ಬಾರಿಗೆ 4.61 ಲಕ್ಷ ಮತದಾರರು ಮತ ಚಲಾಯಿಸಲಿದ್ದಾರೆ. 182 ಕ್ಷೇತ್ರಗಳ ಬಲ ಹೊಂದಿರುವ ಗುಜರಾತ್ 142 ಕ್ಷೇತ್ರಗಳು ಸಾಮಾನ್ಯ ವರ್ಗಕ್ಕೆ ಮೀಸಲು. 13 ಕ್ಷೇತ್ರಗಳು ಪರಿಶಿಷ್ಟ ಜಾತಿಗೆ , 27 ಕ್ಷೇತ್ರಗಳು ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿವೆ.

ಗುಜರಾತ್ ವಿಧಾನಸಭೆಗೆ ಡಿಸೆಂಬರ್ 1ರಂದು ಮೊದಲ ಹಂತದ ಚುನಾವಣೆ ನಡೆಯಲಿದ್ದು, ಡಿಸೆಂಬರ್ 5ರಂದು ಎರಡನೇ ಹಂತದ ಮತದಾನ ನಡೆಯಲಿದೆ. ಡಿಸೆಂಬರ್ 8ರಂದು ಮತ ಎಣಿಕೆ ನಡೆಯಲಿದೆ ಎಂದು ತಿಳಿಸಿದ್ದಾರೆ.

‘ಭವಾನಿಯವರ ಬಗ್ಗೆಯೇ ಹೀಗೆ ಮಾತನಾಡಿದವರು, ಸಾಮಾನ್ಯ ಮಹಿಳೆ ಬಗ್ಗೆ ಹೇಗೆ ಮಾತನಾಡಬಹುದು’

ಪ್ರೀತಂಗೌಡ ಹೊಂದಿರುವ ಸಂಸ್ಕೃತಿ ಇದೇನಾ..?: ಎಚ್‌.ಪಿ. ಸ್ವರೂಪ್ ಕಿಡಿ..

ನಿರಂತರ ಮಳೆಯಿಂದಾಗಿ ಜೆಡಿಎಸ್‌ ಪಕ್ಷದ ಪಂಚರತ್ನ ರಥಯಾತ್ರೆ ಬೃಹತ್ ಸಮಾವೇಶ ರದ್ದು..

- Advertisement -

Latest Posts

Don't Miss