Thursday, December 5, 2024

Latest Posts

Gunadharnand Maharaj : ಅಮರಣಾಂತ ಉಪವಾಸಕ್ಕೆ ಶತಸಿದ್ಧ : ಜೈನ ಮುನಿ ಗುಣಧರನಂದಿ‌ ಮಹರಾಜ್ ಸ್ವಾಮೀಜಿ

- Advertisement -

Hubballi News: ಜೈನಮುನಿ ಹತ್ಯೆ ಹಿನ್ನೆಲೆ ಹುಬ್ಬಳ್ಳಿ ತಾಲೂಕಿನ ವರೂರಿನಲ್ಲಿ ಜೈನ ಮುನಿ ಗುಣಧರನಂದಿ‌ ಮಹರಾಜ್ ಸ್ವಾಮೀಜಿ ಹೇಳಿಕೆಯನ್ನು ನೀಡಿದ್ದಾರೆ. ನಮ್ಮ‌ಭಾರತ ದೇಶದಲ್ಲಿ ಆತಂಕವಾದಿಗೆ ಯಾವ ಶಿಕ್ಷೆಯಾಗುವುದಿಲ್ಲವೋ ಅಂತಹ ಶಿಕ್ಷೆ ಜೈನ ಮುನಿಗಳಿಗೆ ನೀಡಲಾಗಿದೆ.

ಒಬ್ಬ ಜೈನ‌ಮುನಿಗೆ ಈ ರೀತಿ‌ ಚಿತ್ರಹಿಂಸೆ ನೀಡಿ ಕೊಲೆ ಮಾಡಿರುವುದು ನಿಜಕ್ಕೂ ನೋವಿನ‌ ಸಂಗತಿ. ಇಂತಹ ಘಟನೆಯಾದ್ರೂ ಸಹ ಸಿಎಂ ಯಾವುದೇ ಸ್ಪಂದನೆ ಮಾಡಿರಲಿಲ್ಲ.ಮಾದ್ಯಮಗಳ ಸಹಾಯದಿಂದ ಈ ಕೃತ್ಯ ಇದೀಗ ಬೆಳಕಿಗೆ ಬಂದಿದೆ. ಇದೀಗ ಸರ್ಕಾರ ಹಾಗೂ ಜನಪ್ರತಿನಿಧಿಗಳಿಂದ ಸ್ಪಂದನೆ ಸಿಗುತ್ತಿದೆ. ರಾಜ್ಯ ಗೃಹ ಮಂತ್ರಿಗಳು ಒಂದು ಭರವಸೆ ನೀಡಿದ್ದಾರೆ. ನಾಳೆ ಸಂಜೆ 5 ಗಂಟೆಯವರೆಗೆ ನಮ್ಮ ಬೇಡಿಕೆಗಳಿಗೆ ಮನ್ನಣೆ ನೀಡುವುದಾಗಿ ಹೇಳಿದ್ದಾರೆ.

ಜೈನ ಮುನಿಗಳು ದೇಶಾಂತರ ಪಾದಯಾತ್ರೆ ಹಮ್ಮಿಕೊಳ್ಳುತ್ತಾರೆ. ಅಂತಹ ಜೈನ‌ಮುನಿಗಳಿಗೆ ಸೂಕ್ತ ರಕ್ಷಣೆ ಒದಗಿಸುವಂತೆ ಬೇಡಿಕೆ ಇಡಲಾಗಿದೆ. ಮಳೆ ಚಳಿ ಎನ್ನದೇ ದೇಶಾಂತರ ಪಾದಯಾತ್ರೆ ಹಮ್ಮಿಕೊಳ್ಳುವ ಮುನಿಗಳಿಗೆ ಯಾವುದೇ ಆಶ್ರಯ ಭದ್ರತೆ ಇರುವುದಿಲ್ಲ. ಹೀಗಾಗಿ ಈ ರೀತಿ ಪಾದಯಾತ್ರೆ ನಡೆಸಲಿರೋ ಜೈನ ಮುನಿಗಳಿಗೆ ಸೂಕ್ತ ಭದ್ರತೆ ಒದಗಿಸಬೇಕು. ದೇಶಾಂತರ ಪಾದಯಾತ್ರೆ ಮಾಡುವಾಗ ಭದ್ರತೆ ಇಲ್ಲದೇ ಜೈನ ಮುನಿಗಳಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಪ್ರತಿಯೊಬ್ಬ ಜೈನ‌ಮುನಿಗಳಿಗೆ ಸೂಕ್ತ ಭದ್ರತೆ ಒದಗಿಸಬೇಕು. ಜೈನ‌ಮುನಿಗಳಿಗೆ ಭದ್ರತೆ ಜೊತೆಗೆ ಆಶ್ರಯ ಕಲ್ಪಿಸಬೇಕು. ಈ ವಿಚಾರವಾಗಿ ಪ್ರಹ್ಲಾದ್ ಜೋಶಿ ಅವರ ಮೂಲಕ ಕೇಂದ್ರ ಗೃಹ ಮಂತ್ರಿಗಳಿಗೆ ಮನವಿ ಸಲ್ಲಿಸಲಾಗಿದೆ, ಈ ಮನವಿಗೆ ಸರ್ಕಾರಗಳು ಸ್ಪಂದಿಸದೇ ಹೋದಲ್ಲಿ ನಾನು ಅಮರಣಾಂತ ಉಪವಾಸ ಕೈಬಿಡುವುದಿಲ್ಲ. ನಮಗೆ ಭದ್ರತೆ ಒದಗಿಸುವ ವರೆಗೂ ನಿರಂತರವಾಗಿ‌ ಅಮರಣಾಂತ ಉಪವಾಸ ಶತಸಿದ್ಧ ಎಂಬುವುದಾಗಿ ಜೈನ ಮುನಿ ಗುಣಧರನಂದಿ‌ ಮಹರಾಜ್ ಸ್ವಾಮೀಜಿ ಹೇಳಿಕೆಯನ್ನು ನೀಡಿದ್ದಾರೆ.

Amarnatha : ಕೇದರನಾಥದಲ್ಲಿ ಸಂಕಷ್ಟದಲ್ಲಿ ಸಿಲುಕಿರುವ ಧಾರವಾಡದ ಐವರು

Annabhagya Yojana : 3ನೇ ಗ್ಯಾರಂಟಿ ಯೋಜನೆಗೆ ಸಿಎಂ ಸಿದ್ದರಾಮಯ್ಯ ಅಧಿಕೃತ ಚಾಲನೆ

Laxmi Hebbalkar : ನೊಂದ ಮಹಿಳೆಗೆ ಕೇವಲ ಐದು ಗಂಟೆಗಳ ಒಳಗೆ ವಿಧವಾ ವೇತನ ಮಂಜೂರು ಮಾಡಿಸಿದ ಸಚಿವೆ..!

- Advertisement -

Latest Posts

Don't Miss