www.karnatakatv.net : ಗುಂಡ್ಲುಪೇಟೆ ತಾಲೂಕಿನ ಬೊಮ್ಮಲಾಪುರದ ಗ್ರಾಮದ ರಾಜಪ್ಪ ಎಂಬುವ ಯುವಕ ಯಡಿಯೂರಪ್ಪನವರ ರಾಜೀನಾಮೆ ಹಿನ್ನೆಲೆಯಲ್ಲಿ ಸಾವನ್ನಪ್ಪಿದ.
ಇನ್ನೆರಡು ದಿನಗಳಲ್ಲಿ ನಿಮ್ಮನ್ನು ಭೇಟಿಮಾಡಲು ಬರುತ್ತೇನೆ ದೈರ್ಯತಂದುಕೊಳ್ಳಿ ಎಂದು ಹಂಗಾಮಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ……
ಆತ್ಮಹತ್ಯೆಗೆ ಶರಣಾದ ರವಿ ಕುಟುಂಬಸ್ಥರಿಗೆ ಕರೆಮಾಡಿ ಸಾಂತ್ವಾನ ಹೇಳಿದರು… ನೆನ್ನೆ ನಡೆದ ರಾಜಕೀಯ ಬೆಳವಣಿಗೆಯಲ್ಲಿ ಧೀಮಂತ ನಾಯಕ ಬಿ.ಎಸ್.ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದ ಹೈಕಮಾಂಡ್ ನಡೆಗೆ ಬೇಸತ್ತ ಗುಂಡ್ಲುಪೇಟೆ ತಾಲೂಕು ಬೊಮ್ಮಲಾಪುರ ಗ್ರಾಮದ 35 ವರ್ಷದ ರವಿ ನೇಣಿಗೆ ಶರಣಾಗಿದ್ದರು. ಇದಾದ ಬಳಿಕ ನೋವಿನಿಂದಲೇ ಪ್ರತಿಕ್ರಿಯೆ ನೀಡಿರುವ ಯಡಿಯೂರಪ್ಪ ಅವರು ರಾಜಕಾರಣದಲ್ಲಿ ಏರಿಳಿತ ಸಹಜ, ಕಾರ್ಯಕರ್ತರು ಅಭಿಮಾನಿಗಳು ದುಡುಕಿ ನಿರ್ದಾರ ತೆಗೆದುಕೊಳ್ಳಬಾರದು ಎಂದು ತಮ್ಮ ಟ್ವಿಟರ್ ಖಾತೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ. ದೂರವಾಣಿ ಮೂಲಕ ರವಿ ತಾಯಿಯ ಜೊತೆ ಮಾತನಾಡಿ ಇನ್ನೆರಡು ದಿನಗಳಲ್ಲಿ ನಿಮ್ಮನ್ನು ಭೇಟಿಮಾಡಲು ಬರುವುದಾಗಿ ತಿಳಿಸಿ ಧೈರ್ಯ ತುಂಬಿದರು..
ಇನ್ನು ಪ್ರವಾಸೋದ್ಯಮ ಅಧ್ಯಕ್ಷ ಕಾಪು ಸಿದ್ಧಲಿಂಗಸ್ವಾಮಿ ಮತ್ತು ಕ್ಷೇತ್ರದ ಶಾಸಕ ಸಿ.ಎಸ್.ನಿರಂಜನ್ ಕುಮಾರ್ ರವಿ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿ ಮೃತನ ಆತ್ಮಕ್ಕೆ ಶಾಂತಿ ಕೋರಿದರು….