Friday, November 22, 2024

Latest Posts

Terror Attack: ಬಲೂಚಿಸ್ತಾನದಲ್ಲಿ ಉಗ್ರರ ಅಟ್ಟಹಾಸ.. ತಪಾಸಣೆ ನೆಪದಲ್ಲಿ 31 ನಾಗರಿಕರ ಹತ್ಯೆಗೈದ ಭಯೋತ್ಪಾದಕರು

- Advertisement -

ಇಸ್ಲಾಮಾಬಾದ್: ನೈರುತ್ಯ ಪಾಕಿಸ್ತಾನ (Southwestern Pakistan)ದಲ್ಲಿ ನಡೆದ ಎರಡು ಪ್ರತ್ಯೇಕ ಭಯೋತ್ಪಾದಕ ದಾಳಿಯಲ್ಲಿ 31 ನಾಗರಿಕರು ಮೃತಪಟ್ಟಿರುವ ಘಟನೆ ವರದಿಯಾಗಿದೆ. ಬಲೂಚಿಸ್ತಾನದಲ್ಲಿ ಗುರುತಿನ ಚೀಟಿ ತಪಾಸಣೆ ನೆಪದಲ್ಲಿ ಬಸ್​ ನಿಲ್ಲಿಸಿ ಪ್ರಯಾಣಿಕರನ್ನು ಕೆಳಗಿಳಿಸಿದ ಬಂದೂಕುಧಾರಿಗಳು 23 ಪ್ರಯಾಣಿಕರನ್ನು ನಿರ್ದಾಕ್ಷಿಣ್ಯವಾಗಿ ಕೊಲೆ ಮಾಡಿದ್ದಾರೆ.

ಆಕ್ರಮಣಕಾರರು ಅಂತರ-ಪ್ರಾಂತೀಯ ಬಸ್‌ಗಳು ಮತ್ತು ಟ್ರಕ್‌ಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದಾರೆ. ಪ್ರಯಾಣಿಕರನ್ನು ಕೆಳಗಿಳಿಸಿ ಮನಸೋಇಚ್ಛೆ ಗುಂಡಿನ ಸುರಿಮಳೆಗೈದಿದ್ದಾರೆ. ಬಲೂಚಿಸ್ತಾನದ ರಾರಶಮ್ ಜಿಲ್ಲೆಯಲ್ಲಿ ಹೆದ್ದಾರಿಯಲ್ಲಿ ತೆರಳುತ್ತಿದ್ದ ಬಸ್​ ಅನ್ನು ಅಡ್ಡಗಟ್ಟಿದ ಶಸ್ತ್ರಸಜ್ಜಿತ ಭಯೋತ್ಪಾದಕರು ಗುರುತಿನ ಚೀಟಿ ತಪಾಸಣೆ ನೆಪದಲ್ಲಿ 23 ಪ್ರಯಾಣಿಕರನ್ನು ಕೆಳಗಿಳಿಸಿ ಗುಂಡಿಕ್ಕಿ ಹತ್ಯೆಗೈದಿದ್ದಾರೆ. ಮೃತರೆಲ್ಲರೂ ಎಲ್ಲರೂ ಪಂಜಾಬ್‌ನ ನಿವಾಸಿಗಳು ಎಂದು ಗುರುತಿಸಲಾಗಿದೆ.

 

ದಾಳಿಯ ನಂತರ ಭಯೋತ್ಪಾದಕರು ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ 10ಕ್ಕೂ ಹೆಚ್ಚು ವಾಹನಗಳಿಗೆ ಬೆಂಕಿ ಹಚ್ಚಿ ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಇನ್ನು, ಕಳೆದ ಕೆಲ ದಿನಗಳಿಂದ ಪಂಜಾಬ್‌ ಪ್ರಾಂತ್ಯದ ಜನರನ್ನು ಹೆಚ್ಚಾಗಿ ಗುರಿಯಾಗಿಸಿಕೊಳ್ಳುತ್ತಿರುವ ಭಯೋತ್ಪಾದಕರು ಗುಂಡಿನ ಸುರಿಮಳೆಗೈದು ಅಟ್ಟಹಾಸ ಮೆರೆಯುತ್ತಿದ್ದಾರೆ. ಈ ದಾಳಿಯನ್ನು ಭಯೋತ್ಪಾದಕ ಕೃತ್ಯ ಎಂದು ಬಲೂಚಿಸ್ತಾನ ಮುಖ್ಯಮಂತ್ರಿ ಸರ್ಫರಾಜ್ ಬುಗ್ತಿ ಖಂಡಿಸಿದ್ದಾರೆ.

 

ನಿಷೇಧಿತ ಬಲೂಚ್ ಲಿಬರೇಷನ್ ಆರ್ಮಿ ಪ್ರತ್ಯೇಕವಾದಿ ಸಂಘಟನೆಗೆ ಸೇರಿದ ಉಗ್ರಗಾಮಿಗಳು ಪಂಜಾಬ್​ ಪ್ರಾಂತ್ಯ ಜನರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿದ್ದಾರೆ. ಬಲೂಚಿಸ್ತಾನದ ರಾರಶಮ್ ಜಿಲ್ಲೆಯಲ್ಲಿ ಹೆದ್ದಾರಿಯಲ್ಲಿ ಜನರು ಅನಗತ್ಯವಾಗಿ ಸಂಚರಿಸದಂತೆ ಅಲ್ಲಿನ ಸ್ಥಳೀಯ ಆಡಳಿತ ಎಚ್ಚರಿಕೆ ನೀಡಿದೆ. ಅಲ್ಲದೆ, ದಾಳಿ ನಡೆದ ಪ್ರದೇಶಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭದ್ರತಾ ಪಡೆಗಳ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಕಳೆದ ವರ್ಷ ಅಕ್ಟೋಬರ್‌ನಲ್ಲಿ ಬಲೂಚಿಸ್ತಾನದ ಕೆಚ್ ಜಿಲ್ಲೆಯ ಟರ್ಬತ್‌ನಲ್ಲಿ ಪಂಜಾಬ್‌ ಪ್ರಾಂತ್ಯಕ್ಕೆ ಸೇರಿದ 6 ಕಾರ್ಮಿಕರನ್ನು ಬಂದೂಕುಧಾರಿಗಳು ಗುಂಡಿನ ದಾಳಿ ನಡೆಸಿ ಬರ್ಬರವಾಗಿ ಹತ್ಯೆಗೈದಿದ್ದರು.

- Advertisement -

Latest Posts

Don't Miss